ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ : ಆನ್‌ಲೈನ್‌ನಲ್ಲೇ ಮೆಟ್ರೋ QR ಟಿಕೆಟ್ ಪಡೆಯಿರಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನವೆಂಬರ್‌ 1ರಿಂದ ಕ್ಯೂ ಆರ್‌ ಕೋಡ್‌ ಆಧಾರಿತ ಟಿಕೆಟ್‌ ಅನ್ನು ಪರಿಚಯಿಸುತ್ತಿದೆ. ಗ್ಲೋಬಲ್ ಟ್ರಾನ್ಸಿಸ್ಟ್ ಸ್ಪೇಸ್‌ನಲ್ಲಿ ವಾಟ್ಸಪ್‌ ಆಪ್‌ ನಲ್ಲಿ ಎಂಡ್ ಟು ಎಂಡ್ ಟಿಕೆಟಿಂಗ್ ವ್ಯವಸ್ಥೆ ಪರಿಚಯಿಸುತ್ತಿರುವ ಮೊದಲ ಮೆಟ್ರೋ ಸಂಸ್ಥೆ ಇದಾಗಿದೆ

ಬೆಂಗಳೂರು 'ನಮ್ಮ ಮೆಟ್ರೋ' ಸಂಸ್ಥೆಯು ಕ್ಯೂ ಆರ್‌ ಕೋಡ್‌ ಆಧಾರಿತ ಟಿಕೆಟ್‌ ಅನ್ನು ಪರಿಚಯಿಸುತ್ತಿದೆ. ಇದರಿಂದ ಟಿಕೆಟ್‌ಗಾಗಿ ನಿಮಿಷಗಳಗಟ್ಟಲೇ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಲಿದ್ದು, ಜತೆಗೆ ಪ್ರಯಾಣಿಕರಿಗೆ ಹೊಸ ಡಿಜಿಟಲ್ ವೇದಿಕೆ ಒದಗಿಸುತ್ತಿದೆ. ಚಿಲ್ಲರೆ ಸಮಸ್ಯೆ ನಿವಾರಣೆ ಜೊತೆಗೆ ಸಮಯವು ಉಳಿತಾಯವಾಗಲಿದೆ.

metro

Breaking; ವೈಟ್‌ಫೀಲ್ಡ್‌-ಐಟಿಪಿಎಲ್‌ ಮೆಟ್ರೋ ಪ್ರಾಯೋಗಿಕ ಸಂಚಾರ ಶುರು Breaking; ವೈಟ್‌ಫೀಲ್ಡ್‌-ಐಟಿಪಿಎಲ್‌ ಮೆಟ್ರೋ ಪ್ರಾಯೋಗಿಕ ಸಂಚಾರ ಶುರು

ಸ್ಮಾರ್ಟ್ ಪೋನ್‌ ಬಳಸುವ ಪ್ರಯಾಣಿಕರು ಕ್ಯೂಆರ್‌ (QR) ಕೋಡ್‌ ಆಧಾರಿತ ಟಿಕೆಟ್ ಪಡೆಯಬಹುದು. ಮೊದಲ ನಮ್ಮ ಮೆಟ್ರೋ ಎಂಬ ಮೊಬೈಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ನೋಂದಾಯಿತರಾಗಬೇಕು. ನಂತರ ಅಧಿಕೃತ ಬಿಎಂಆರ್‌ಸಿಎಲ್‌ನ ವಾಟ್ಸ್ ಆಪ್ ಚಾಟ್‌ಬಾಟ್‌ ಮೊಬೈಲ್‌ ನಂಬರ್ 81055 56677ಗೆ 'ಹಾಯ್' ಎಂದು ಸಂದೇಶ ಕಳುಹಿಸುವ ಮೂಲಕ QR ಟಿಕೆಟ್ ಪಡೆಯಬಹುದು.

Namma metro introduces WhatsApp chatbot-based QR ticketing service for metro commuters

ಪ್ರಯಾಣಿಕರು ನಿತ್ಯ ಎಲ್ಲಿಂದ ನಿಲ್ದಾಣ ಪ್ರವೇಶ ಮತ್ತು ಎಲ್ಲಿಗೆ ಹೋಗಬೇಕು ಎಂಬ ಆಯ್ಕೆ ಮಾಡಿಕೊಂಡು ಈ QR ಟಿಕೆಟ್ ಅನ್ನು ಪಡೆಯಬಹುದು. ನಂತರ ಮೆಟ್ರೋ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ ಗೇಟ್‌ಗಳ ಅಳವಡಿಸಿರುವ ಕ್ಯೂಆರ್‌ ರೀಡರ್‌ಗಳಿಗೆ ಮೊಬೈಲ್ ಫೋನ್‌ನಲ್ಲಿರುವ QR ಟಿಕೆಟ್‌ಗಳನ್ನು ಸ್ಕ್ಯಾನ್‌ ತೋರಿಸಿ ಒಳ ಪ್ರವೇಶಿಸಬಹುದು. ಇಲ್ಲವೇ ಪ್ರಯಾಣದ ಬಳಿಕ ಹೊರ ಹೋಗಬಹುದು.

ಡಿಜಟಲೀಕರಣ ಉತ್ತೇಜಿಸುವ ಸಂಬಂಧ QR ಟಿಕೆಟ್ ಪಡೆಯುವವರಿಗೆ ಶೇ. 5ರಷ್ಟು ರಿಯಾಯಿತಿ ದೊರೆಯಲಿದೆ. ಒಂದು ವೇಳೆ ಈ ಟಿಕೇಟ್ ಖರೀದಿಸಿ ಪ್ರಯಾಣ ರದ್ದಾದರೆ ಅದೇ ದಿನ ಟಿಕೆಟ್‌ ರದ್ದತಿ ವಿಧಾನ ಮೂಲಕ ಹಣ ಮರುಪಾವತಿ ಪಡೆಯಲು ಸಂಸ್ಥೆ ಅವಕಾಶ ಕಲ್ಪಿಸಿದೆ.

ವಾಟ್ಸ್‌ ಆಪ್‌ ಚಾಟ್‌ಬಾಟ್‌ ವಿಶೇಷತೆಗಳೇನು?

- ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಂವಾದ ಮಾಡುವ ಆಯ್ಕೆಗಳಿವೆ

- QR ಟಿಕೆಟ್ ಖರೀದಿಸಬಹುದು.

- ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಬಹುದು.

- ಪ್ರಯಾಣವನ್ನು ಪ್ಲಾನ್ ಮಾಡಬಹುದು. ಅಂದರೆ ಹತ್ತಬೇಕಾದ ಮೆಟ್ರೋ ನಿಲ್ದಾಣದ ಮಾಹಿತಿ, ವಿವಿಧ ನಿಲ್ದಾಣಗಳಲ್ಲಿ ಮೆಟ್ರೋ ರೈಲು ಹೊರಡಲಿರುವ ಮಾಹಿತಿ. ಯಾವುದೇ ಎರಡು ಮೆಟ್ರೋ ನಿಲ್ದಾಣಗಳ ಮಧ್ಯದ ದರದ ಮಾಹಿತಿ ತಿಳಿದುಕೊಳ್ಳಬಹುದು.

- ಗ್ರಾಹಕರ ಪ್ರತಿಕ್ರಿಯೆಗೆ ಅವಕಾಶ.

- ತ್ವರಿತ ಮತ್ತು ತಡೆರಹಿತ ಪಾವತಿಗಳಿಗಾಗಿ ವಾಟ್ಸ್ ಆಪ್ UPI ವಹೀವಾಟಿನ ಮೂಲಕ ಹೊಸ ಅನುಭವಕ್ಕೆ ಅವಕಾಶ ಇದೆ.

English summary
Bengaluru : Namma metro introduces WhatsApp chatbot-based QR ticketing service for metro commuters on November 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X