Namma Metro: ಮೆಟ್ರೋ 3ನೇ ಹಂತ: 'ಹೊಸಹಳ್ಳಿ-ಕಡಬಗೆರೆ' ಹೊಸ ಮಾರ್ಗ ಯೋಜನೆ, ಬಿಗ್ ಅಪ್ಡೇಟ್ಸ್
Bengaluru Metro New Line Project: ನಮ್ಮ ಮೆಟ್ರೋ ಜಾಲ ವಿಸ್ತರಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRLC) ಇದೀಗ ಮೆಟ್ರೋ ಮೂರನೇ ಹಂತದಡಿ ಬರುವ 'ಹೊಸಹಳ್ಳಿ-ಕಡಬಗೆರೆ' ಹೊಸ 'ಬೂದು ಮಾರ್ಗ' ಯೋಜನೆ ಆರಂಭಿಸಲು ಸಜ್ಜಾಗಿದೆ. 12.5 ಕಿಲೋ ಮೀಟರ್ ಉದ್ದದ ಈ ಮಾರ್ಗವು 05 ವರ್ಷಗಳಲ್ಲಿ ಪೂರ್ಣಗೊಳಿಸಲು ಪ್ಲಾನ್ ಮಾಡಿಕೊಂಡಿದೆ. ವಿವಿಧ ಕಾರಣಗಳಿಂದ ಮಾರ್ಗ ಕಾಮಗಾರಿ ಆರಂಭ ವಿಳಂಬವಾಗಿದೆ.
ಮೆಟ್ರೋ ಮೊದಲ 'ನೇರಳೆ ಮಾರ್ಗ'ದಿಂದ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಹೊಸಹಳ್ಳಿಯಿಂದ ಕಡಬಗೆರೆವರೆಗಿನ 'ಬೂದು ಮಾರ್ಗ' (Namma Metro Grey Line) 2031ರ ಹೊತ್ತಿಗೆ ನಿರ್ಮಾಣಗೊಳ್ಳಲಿದೆ. ಈ ಯೋಜನೆ ಇದರ ಟೆಂಡರ್ ಅಪ್ಡೇಟ್ಸ್, ಒಟ್ಟು ಎಷ್ಟು ನಿಲ್ದಾಣಗಳು, ಯಾವೆಲ್ಲ ಮಾರ್ಗದಲ್ಲಿ ಸಾಗಲಿದೆ, ಡಬಲ್ ಡೆಕ್ಕರ್ ಫ್ಲೈಓವರ್ ಬರುತ್ತಾ? ಇಲ್ಲವೇ? ಎಂಬಿತ್ಯಾದಿ ಪೂರ್ಣ ಮಾಹಿತಿ ಇಲ್ಲಿದೆ.

ಮೂರನೇ ಹಂತದ ಮೆಟ್ರೋ ಯೋಜನೆಯಲ್ಲಿ ಎರಡು ಕಾರಿಡಾರ್ ಬರುತ್ತವೆ. ಅದರಲ್ಲಿ ಎರಡನೇ ಕಾರಿಡಾರ್ ಈ ಬೂದು ಮಾರ್ಗ. ಇನ್ನೊಂದು ತಿಂಗಳಲ್ಲಿ ಟೆಂಡರ್ ಆಹ್ವಾನಿಸಲು BMRCL ಸಿದ್ಧತೆ ನಡೆಸಿದೆ. ಟೆಂಡರ್ ಆಹ್ವಾನದ ದಿನಾಂಕ ನಿಗದಿ ಆಗಿಲ್ಲ. ಆರೇ ತಿಂಗಳಲ್ಲಿ ಗುತ್ತಿಗೆದಾರ ಕಂಪನಿ ಅಂತಿಮಗೊಳಿಸಿ, ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್
ಸಂಚಾರ ದಟ್ಟಣೆ ನಿಯಂತ್ರಣ ಸಲುವಾಗಿ ಸರ್ಕಾರ, ಈ ಹೊಸ ಮೆಟ್ರೋ ಮಾರ್ಗಗಳ ಜೊತೆ ಜೊತೆಗೆ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣಗೊಳ್ಳಬೇಕೆಂದು ಈಗಾಗಲೇ ಸೂಚಿಸಿದೆ. ಅದು ಈ ಹೊಸ ಮೆಟ್ರೋ ಮಾರ್ಗಕ್ಕೂ ಅನ್ವಯಿಸಲಿದೆ. ಮೆಟ್ರೋ ಲೈನ್, ಈ ಫ್ಲೈಓವರ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮತ್ತು ಸಮಯ ಹಿಡಿಯುತ್ತದೆ. ಈ ಕಾರಣದಿಂದ ಯೋಜನೆ ಟೆಂಡರ್ ಕರೆಯುವುದು, ಕಾಮಗಾರಿ ಆರಂಭ ವಿಳಂಬವಾಗಿದೆ ಎನ್ನಲಾಗಿದೆ.
ಆರೆಂಜ್ ಲೈನ್: ಒಟ್ಟು ಮೆಟ್ರೋ ನಿಲ್ದಾಣಗಳೆಷ್ಟು?
ಹೊಸಹಳ್ಳಿಯಿಂದ ಕೆಎಚ್‌ಬಿ ಕಾಲೋನಿ-ಕಾಮಾಕ್ಷಿಪಾಳ್ಯ-ಸುಮನಹಳ್ಳಿ ಕ್ರಾಸ್-ಸುಂಕದಕಟ್ಟೆ-ಹೇರೋಹಳ್ಳಿ-ಬ್ಯಾಡರಹಳ್ಳಿ-ಕಾಮತ್ ಬಡಾವಣೆ ಮತ್ತು ಕಡಬಗೆರೆಯಲ್ಲಿ ತಲಾ ಒಂದೊಂದರೆ ನಿಲ್ದಾಣಗಳು ನಿರ್ಮಾಣವಾಗಲಿವೆ. ಹೊಸಹಳ್ಳಿ ನಿಲ್ದಾಣ ಇಂಟರ್‌ಚೇಂಜ್ ನಿಲ್ದಾಣವಾಗಿ ಬದಲಾಗಲಿದೆ.
ಯೋಜನೆ ಒಟ್ಟು ಅಂದಾಜು ವೆಚ್ಚ
ಒಂದು ವರ್ಷಕ್ಕೆ ನಮ್ಮ ಮೆಟ್ರೋ ಮಾರ್ಗ ಸುಮಾರು 7 ಕಿಲೋ ಮೀಟರ್ ನಿರ್ಮಾಣವಾಗಬೇಕು. ಆದರೆ ಡಬಲ್ ಡೆಕ್ಕರ್ ಮೇಲ್ಸೇತುವೆ ಸಹ ನಿರ್ಮಿಸುವ ಕಾರಣ ನಿರ್ಮಾಣ ಮಿತಿ 5 ಕಿಲೋ ಮೀಟರ್‌ಗೆ ಇಳಿಯಲಿದೆ. ಇದು ಸಹ ಯೋಜನೆಯ ವಿಳಂಬಕ್ಕೆ ಕಾರಣವಾಗಿದೆ. ಈ ಒಟ್ಟಾರೆ ಯೋಜನೆಗೆ 15,611 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನ ವಿತರಿಸಲಿವೆ. 9,000 ಕೋಟಿ ರೂ.ಗೂ ಅಧಿಕ ಹಣವನ್ನು ರಾಜ್ಯ ಸರ್ಕಾರ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲು ಹೆಚ್ಚುವರಿಯಾಗಿ ನೀಡಲಿದೆ..












Click it and Unblock the Notifications