ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿನಿಮಾ ಶೂಟಿಂಗ್‌ ಇಂದ ನಮ್ಮ ಮೆಟ್ರೋಗೆ ಬಂದ ಆದಾಯವೆಷ್ಟು?

|
Google Oneindia Kannada News

ಬೆಂಗಳೂರು, ಜೂನ್ 12: ನಮ್ಮ ಮೆಟ್ರೋ ನಿಲ್ದಾಣ ಹಾಗೂ ಮೆಟ್ರೋ ಬೆಂಗಳೂರಿಗರ ಪಾಲಿಗೆ ಇದೊಂದು ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಇದೀಗ ಅದು ಸಿನಿಮಾ ಶೂಟಿಂಗ್ ತಾಣವಾಗಿ ಮಾರ್ಪಾಡಾಗುತ್ತಿದೆ.

ಸಿನಿಮಾ ಶೂಟಿಂಗ್, ಡಾಕ್ಯುಮೆಂಟರಿಗಳು, ವಾಣಿಜ್ಯ ಜಾಹೀರಾತುಗಳಿಗೆ ಅವಕಾಶ ಮಾಡಿಕೊಟ್ಟಿದೆ. 2013-14ರಿಂದ ಇಲ್ಲಿಯವರೆಗೆ ಸಿನಿಮಾ ಶೂಟಿಂಗ್‌ಗಳಿಂದ 24.8 ಲಕ್ಷ ಆದಾಯ ಮೆಟ್ರೋ ನಿಗಮಕ್ಕೆ ಬಂದಿದೆ.

ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

2013-14ನಲ್ಲಿ 4.3 ಲಕ್ಷ ರೂ, 2014-15 4.3 ಲಕ್ಷ ರೂ, 2015-16ರಲ್ಲಿ 1.8 ಲಕ್ಷ ರೂ, 2016-17ರಲ್ಲಿ 6.09 ಲಕ್ಷ ರೂ, 2017-18ರಲ್ಲಿ 4.5 ಲಕ್ಷ ರೂ, 2019-19ರಲ್ಲಿ 3.9 ಲಕ್ಷ ಆದಾಯ ಲಭಿಸಿದೆ.

Namma metro gets 25 lakh from shooting

ಕನ್ನಡದ ರಣವಿಕ್ರಮ, ಭರ್ಜರಿ,ಲಕ್ನೋ ಟು ಬೆಂಗಳೂರು, ಯಾಣ, ತಮಿಳು ಚಿತ್ರಗಳ ಚಿತ್ರೀಕರಣವೂ ಕೂಡ ನಡೆದಿದೆ. ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಜಾಹೀರಾತುಗಳನ್ನು ಕಬ್ಬನ್ ಪಾರ್ಕ್, ಬೈಯಪ್ಪನಹಳ್ಳಿ, ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗುತ್ತಿದೆ.

ಸಿನಿಮಾ ಚಿತ್ರೀಕರಣವು ಬಂಡವಾಳವಿಲ್ಲದೆ ಆದಾಯವನ್ನು ಬಿಎಂಆರ್‌ಸಿಎಲ್‌ಗೆ ತಂದುಕೊಡುವ ವಿಧಾನವಾಗಿದೆ. ನಿತ್ಯ 3.70ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ.

ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು ನಾಗವಾರ-ಕೆಂಪೇಗೌಡ ವಿಮಾನ ನಿಲ್ದಾಣ ನಮ್ಮ ಮೆಟ್ರೋ ಮಾರ್ಗ ಬದಲು

ಪ್ರೊಡಕ್ಷನ್‌ ಹೌಸ್‌ಗಳು ಬಿಎಂಆರ್‌ಸಿಎಲ್‌ನ ಕೆಲವು ನಿಬಂಧನೆಗಳಿಗೆ ಒಪ್ಪಿಕೊಂಡರೆ ಶೂಟಿಂಗ್‌ಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ ನಮ್ಮ ಮೆಟ್ರೋ ಟಿಕೆಟ್ ಶೀಘ್ರ ಮೊಬೈಲ್‌ ಫೋನ್‌ನಲ್ಲೇ ಲಭ್ಯ

ಒಂದೊಮ್ಮೆ ಶೂಟಿಂಗ್‌ಗೆ ಮಾಡಬೇಕಿದ್ದರೆ ಭಾರತೀಯರು 15ದಿನ ಮುಂಚಿತವಾಗಿ ಹಾಗೂ ವಿದೇಶದವರು 30ದಿನಗಳ ಮೊದಲು ಅರ್ಜಿ ಸಲ್ಲಿಸಬೇಕು.ಅದರಲ್ಲಿ ಎಷ್ಟು ದಿನ ಶೂಟಿಂಗ್‌ಗೆ ಅವಕಾಶ ನೀಡಬೇಕು ಎನ್ನುವುದನ್ನು ನಮೂದಿಸರಬೇಕು. ಮೆಟ್ರೋ ಬಾಗಿಲನ್ನು ತೆರೆದು ಶೂಟಿಂಗ್ ಮಾಡುವುದು ಅಥವಾ ಮೆಟ್ರೋ ಮೇಲೆ ನಿಂತು ಚಿತ್ರೀಕರಿಸುವುದಕ್ಕೆ ಅವಕಾಶವಿಲ್ಲ. ಹಾಗೆಯೇ ಮೆಟ್ರೋ ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.

English summary
Namma metro gets 25 lakh from shooting, Namma Metro stations and trains are turning into favourite locations for shooting movies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X