Namma Metro: ಭಾನುವಾರ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ, ಕಾರಣವೇನು

ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಸೇವೆ ಕೊಡುತ್ತದೆ. ಇದೀಗ ನಮ್ಮ ಮೆಟ್ರೋ ಭಾನುವಾರ ತನ್ನ ಸೇವೆಯ ಅವಧಿಯನ್ನು ವಿಸ್ತರಣೆ ಮಾಡುತ್ತಿದೆ. ಡಿಸೆಂಬರ್‌ 8ರಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ಭಾನುವಾರದ ಮೆಟ್ರೋ ಸೇವೆಯನ್ನು ಬದಲಾಯಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದ ಇದೇ 8ಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೊ ರೈಲು ಸಂಚಾರ ಸೇವೆಯನ್ನು ಭಾನುವಾರದಂದು ಬೆಳಿಗ್ಗೆ 5.30ಕ್ಕೆ ಶುರು ಮಾಡಲು ಮೆಟ್ರೋ ಆಡಳಿತ (ಬಿಎಂಆರ್‌ಸಿಎಲ್) ಮಂಡಳಿ ನಿರ್ಧರಿಸಿದೆ.

ಈ ಪರೀಕ್ಷೆಗೆ ವಿವಿಧ ಭಾಗದಿಂದ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಆ ವಿದ್ಯಾರ್ಥಿಗಳಿಗೆ ಸಂಚಾರದಲ್ಲಿ ತೊಂದರೆ ಆಗಬಾರದು ಹಾಗೂ ಸುಗಮವಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು ಎನ್ನುವ ಉದ್ದೇಶದಿಂದ ನಮ್ಮ ಮೆಟ್ರೋ ಈ ನಿರ್ಧಾರ ತೆಗೆದುಕೊಂಡಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಕ್ರಿಕೆಟ್‌ ಪಂದ್ಯಗಳು ಇರುವಾಗ ಹಾಗೂ ವಿಶೇಷ ಕಾರ್ಯಕ್ರಮಗಳು ಇರುವಾಗ ನಮ್ಮ ಮೆಟ್ರೋ ಸೇವೆ ವಿಸ್ತರಿಸುವುದು ಇದೆ. ಇದೀಗ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮೆಟ್ರೋ ಅವಧಿಯನ್ನು ವಿಸ್ತರಿಸಲಾಗುತ್ತಿದೆ.

Namma Metro Extends Sunday Service Hours for PDO Exam Convenience

ಬೆಂಗಳೂರಿನ ನಮ್ಮ ಮೆಟ್ರೋದ ನಾಲ್ಕು ಟರ್ಮಿನಲ್‌ಗಳಲ್ಲೂ ಈ ಸೇವೆ ಇರಲಿದೆ. ಬೆಂಗಳೂರು ಮೆಟ್ರೋದ ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಹಾಗೂ ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳಲ್ಲಿ ಭಾನುವಾರ ಬೆಳಿಗ್ಗೆ 5.30ರಿಂದಲೇ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ. ಅಲ್ಲದೇ ಮೆಜೆಸ್ಟಿಕ್‌ನಿಂದಲೂ ಎಲ್ಲಾ ನಾಲ್ಕು ಟರ್ಮಿನಲ್‌ ಕಡೆಗೆ ಬೆಳಿಗ್ಗೆ 5.30ಕ್ಕೆ ರೈಲು ಸಂಚಾರ ಪ್ರಾರಂಭವಾಗಲಿದೆ. ಪ್ರತಿ 30 ನಿಮಿಷಗಳಿಗೆ ಒಂದರಂತೆ ಬೆಳಿಗ್ಗೆ 7ರ ವರೆಗೆ ಮೆಟ್ರೋ ಸಂಚರಿಸಲಿದೆ. 7 ಗಂಟೆಯ ನಂತರ ಸಾಮಾನ್ಯ ಸಂಚಾರದಂತೆ ಸೇವೆ ಮುಂದುವರಿಯಲಿದೆ ಎಂದು ಮೆಟ್ರೋ ಹೇಳಿದೆ.

ನಮ್ಮ ಮೆಟ್ರೋ ಸೇವೆಯು ಪ್ರತಿ ಭಾನುವಾರ ಬೆಳಿಗ್ಗೆ 7ಕ್ಕೆ ಶುರುವಾಗುತ್ತಿತ್ತು. ಆದರೆ, ಆ ದಿನ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಈ ರೀತಿಯ ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗವು ಡಿಸೆಂಬರ್‌ 8ರಂದು ಇದೇ ಭಾನುವಾರ ಪಂಚಾಯತ್​ ಅಭಿವೃದ್ಧಿ ಅಧಿಕಾರಿ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ, ಅಭ್ಯರ್ಥಿಗಳು ಪರೀಕ್ಷಾ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲಾ ನಾಲ್ಕು ಟರ್ಮಿನಲ್​ ನಿಲ್ದಾಣಗಳಲ್ಲೂ ಬೆಳಿಗ್ಗೆ 5.30ರಿಂದಲೇ ಸೇವೆ ಪ್ರಾರಂಭವಾಗಲಿದೆ. ಮಾದಾವರ, ರೇಷ್ಮೆ ಸಂಸೆ, ಚಲ್ಲಘಟ್ಟ ಹಾಗೂ ವೈಟ್​ ಫೀಲ್ಡ್ ಮೆಟ್ರೋ ನಿಲ್ದಾಣಗಳಿಂದ ಈ ಸೇವೆ ಪ್ರಾರಂಭಿಸುವುದಾಗಿ ಮೆಟ್ರೋ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಕ್ಯೂಆರ್‌ ಟಿಕೆಟ್ ಬಳಸಲು ಮನವಿ

ಎಂದಿನಿಂತೆ ವಿಶೇಷ ಸೇವೆಯನ್ನು ನೀಡುವಾಗ ಮೆಟ್ರೋ ನೀಡುವ ಸಂದೇಶದಂತೆ ಈ ಬಾರಿಯೂ ಒಂದು ಸಂದೇಶವನ್ನು ನೀಡಲಾಗಿದೆ. ಸಾಮಾನ್ಯವಾಗಿ ಜನ ಹೆಚ್ಚಾಗಿ ಸೇರುವ ಸಂದರ್ಭಗಳಲ್ಲಿ ಹಾಗೂ ಸಾಮಾನ್ಯ ದಿನಗಳಲ್ಲೂ ನಗದು ರಹಿತ ಪಾವತಿ ಹಾಗೂ ಕ್ಯೂಆರ್​ ಟಿಕೆಟ್​ಗಳ ಮೂಲಕ ಟಿಕೆಟ್​ಗಳನ್ನು ಖರೀದಿಸಲು ಮೆಟ್ರೋ ನಿಗಮ ಕೇಳುತ್ತದೆ. ಅದೇ ರೀತಿ ಡಿಸೆಂಬರ್‌ 8ಕ್ಕೆ ಸಾವಾಜನಿಕರು ಹಾಗೂ ಪರೀಕ್ಷೆಗೆ ಹೋಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ನಗದು ರಹಿತ ಪಾವತಿ ಹಾಗೂ ಕ್ಯೂಆರ್​ ಟಿಕೆಟ್​ಗಳ ಮೂಲಕ ಟಿಕೆಟ್​ ಖರೀದಿಗೆ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+