ಐಪಿಎಲ್ ದಿನ ಮೆಟ್ರೋ ಅವಧಿ ವಿಸ್ತರಣೆ: ಪ್ರಯಾಣ ದುಬಾರಿ
Recommended Video

ಬೆಂಗಳೂರು, ಏಪ್ರಿಲ್ 12: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಇರುವ ದಿನ ನಮ್ಮ ಮೆಟ್ರೋ ಪ್ರಯಾಣ ದರ ದುಬಾರಿಯಾಗಲಿದೆ. ಏ.13,21,25,29 ಹಾಗೂ ಮೇ 1 ಮತ್ತು 17 ರಂದು ಪಂದ್ಯ ಮುಗಿದ ನಂತರ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ತೆರಳುವವರು ಟಿಕೆಟ್ ಗೆ 50 ರೂ. ನೀಡಬೇಕಿದೆ.
ಪ್ರಯಾಣಿಕರ ದಟ್ಟಣೆಯಾಗುವ ಕಾರಣದಿಂದಾಗಿ ತ್ವರಿತವಾಗಿ ಟಿಕೆಟ್ ಮತ್ತು ಚಿಲ್ಲರೆ ಸಮಸ್ಯೆ ಪರಿಹಾರಕ್ಕಾಗಿ ನಿಗಮ ಈ ಬಾರಿ ಟೋಕನ್ ಬದಲು ಕಾಗದದ ಟಿಕೆಟ್ ವಿತರಿಸಲು ಕ್ರಮ ಕೈಗೊಂಡಿದೆ. ಈ ಹಿಂದೆ ಹೊಸ ವರ್ಷಕ್ಕೂ ಇದೇ ರೀತಿ ಟಿಕೆಟ್ ದರ ಏರಿಸಲಾಗಿತ್ತು. ಪ್ರಯಾಣಿಕರು ಪಂದ್ಯ ವೀಕ್ಷಿಸಲು ಆಗಮಿಸುವಾಗಲೇ ಯಾವುದೇ ನಿಲ್ದಾಣದಿಂದ ಈ ಕಾಗದದ ಟಿಕೆಟ್ ಪಡೆಯಬಹುದು.
ಕಾಗದದ ಟೋಕನ್ ತೋರಿಸಿ ಪ್ರಯಾಣಿಕರು ನೇರವಾಗಿ ಪ್ಲಾಟ್‌ಫಾರಂ ಗೆ ಪ್ರವೇಶಿಸಬಹುದು ಮತ್ತು ನಿಲ್ದಾಣದಿಂದ ನಿರ್ಗಮಿಸಬಹುದು. ವಿಸ್ತರಣೆ ಸಮಯದಲ್ಲೂ ಸ್ಮಾರ್ಟ್ ಕಾರ್ಡ್ ಗೆ ರಿಯಾಯಿತಿ ಇರಲಿದೆ.

ಮಧ್ಯರಾತ್ರಿ 12.30ರವರೆಗೆ ಮೆಟ್ರೋ ಅವಧಿ ವಿಸ್ತರಣೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಇರುವ ದಿನದಂದು ಮೆಟ್ರೋ ಸಂಚಾರ ರಾತ್ರಿ 12.30ರವರೆಗೂ ವಿಸ್ತರಣೆಯಾಗಲಿದೆ. ನಾಯಂಡಹಳ್ಳಿ ಮತ್ತು ಬೈಯಪ್ಪನಹಳ್ಳಿಯಿಂದ ಕೊನೆಯ ರೈಲು 12.30ಕ್ಕೆ ಹೊರಡಲಿದೆ. ನಾಗಸಂದ್ರ ಮತ್ತು ಎಲಚೇನಹಳ್ಳಿ ಕಡೆಗೆ ಮೆಜೆಸ್ಟಿಕ್ ನಿಲ್ದಾಣದಿಂದ ಸಂಪರ್ಕವಿರಲಿದೆ. ರಾತ್ರಿ 11 ಗಂಟೆಯಿಂದ ಪ್ರತಿ 5 ನಿಮಿಷಕ್ಕೊಂದು ರೈಲು ಸಂಚಾರವಿರಲಿದೆ ಎಂದು ನಿಗಮ ತಿಳಿಸಿದೆ.












Click it and Unblock the Notifications