BREAKING: ಇಂದು & ನಾಳೆ 'ನಮ್ಮ ಮೆಟ್ರೋ' ಹಸಿರು ಮಾರ್ಗದಲ್ಲಿ CMRS ಪರಿಶೀಲನೆ: ಸಿಹಿ ಸುದ್ದಿ ಘೋಷಣೆ!
ಬೆಂಗಳೂರು, ಅಕ್ಟೋಬರ್ 03: ಬೆಂಗಳೂರಿನಲ್ಲಿ ಬಹು ನಿರೀಕ್ಷೆಯ ನಮ್ಮ ಮಟ್ರೋ ಹಸಿರುವ ಲೈನ್‌ನ ವಿಸ್ತರಣಾ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಇಂದು ಅಥವಾ ನಾಳೆ ನಾಗಸಂದ್ರ-ಮಾದಾವರೆಗಿನ ಮೆಟ್ರೋ ಮಾರ್ಗದಲ್ಲಿ ರೈಲುಗಳು ಯಾವತ್ತಿನಿಂದ ಓಡಲಿವೆ ಎಂಬ ಮಾಹಿತಿ ಹೊರ ಬೀಳಲಿದೆ. ಏಕೆಂದರೆ ಈ ಎರಡು ದಿನ 'ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS)' ಮಾರ್ಗಕ್ಕೆ ಭೇಟಿ ನೀಡಲಿದ್ದು, ಶೀಘ್ರವೇ ಖುಷಿ ಸುದ್ದಿ ಹೊರ ಬೀಳಲಿದೆ.
ಹೌದು, ಅಕ್ಟೋಬರ್ 03 ಮತ್ತು 04ರಂದು ನಾಗಸಂದ್ರ ಮತ್ತು ಮಾದಾವರವರೆಗಿನ ವಿಸ್ತರಣೆಯ ಹಸಿರುವ ಮಾರ್ಗವನ್ನು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS)' ಹಾಗೂ ಅವರ ಅಧಿಕಾರಿಗಳ ತಂಡ ತಪಾಸಣೆ ಮಾಡಲಿದ್ದಾರೆ. ಖುದ್ದು ಅವರೇ ಸಂಚರಿಸಿ ಸೂಕ್ತ ಮಾನದಂಡಗಳು ಮುಖೇನ ವಿಸ್ತರಣೆಯ ಈ 3.7ಕಿಲೋ ಮೀಟರ್ ಮಾರ್ಗದಲ್ಲಿ ಸುರಕ್ಷತೆ ಪರಿಶೀಲಿಸಲಿದ್ದಾರೆ. ಈ ತಪಾಣೆಗೆ ಇಂದು ಕೆಲವೇ ಗಂಟೆಗಳು ಮಾತ್ರವೇ ಬಾಕಿ ಇವೆ.

298 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೂರು ನಿಲ್ದಾಣಗಳನ್ನು ಒಳಗೊಂಡಿರುವ ಈ ಮಾದಾವರ ಮತ್ತು ನಾಗಸಂದ್ರ ಮಧ್ಯದ ಮೆಟ್ರೋ ಲೈನ್ ಅಕ್ಟೋಬರ್ ಅಂತ್ಯಕ್ಕೆ ತೆರದುಕೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ತಪಾಸಣಾ ನಡೆಸುವ ಅಧಿಕಾರಿಗಳು ವಾಣಿಜ್ಯ ಸಂಚಾರಕ್ಕೆ ಅನುಮೋದನೆ ನೀಡುತ್ತಿದ್ದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ಅಧಿಕಾರಿಗಳು ಉದ್ಘಾಟನೆ ದಿನಾಂಕ ಪ್ರಕಟಿಸಲಿದ್ದಾರೆ.
ವಿಸ್ತರಣೆಗೊಂಡ ಈ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆಂಭಿಸಿದರೆ, ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು ಭಾಗದಲ್ಲಿ ವಾಸಿಸುತ್ತಿರುವ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ. ನೆಲಮಂಗಲದಿಂದ ಬೆಂಗಳೂರಿಗೆ ಬಸ್‌ನಲ್ಲಿ ಬರುವವರಿಗೆ ಅನುಕೂಲವಾಗುತ್ತದೆ. ಸಂಚಾರ ದಟ್ಟಣೆ ತಡೆಯಲು ಈ ಮಾರ್ಗವು ಕೊಡುಗೆ ನೀಡಲಿದೆ.
ಈ ಹಿಂದೆ ಇದೇ ಮೂರು ಕಿಲೋ ಮೀಟರ್ ಮಾರ್ಗದಲ್ಲಿ BMRCL ಸಿಗ್ನಲ್ ಪರೀಕ್ಷೆ, ಪ್ರಾಯೋಗಿಕ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಿ ಯಶಸ್ವಿಯಾಗಿತ್ತು. ಇದೀಗ ಸುರಕ್ಷತಾ ತಪಾಸಣೆ ನಡೆಸಿ ಅನುಮೋದನೆ ನೀಡಿದರೆ, ಕೆಲವೇ ದಿನಗಳಲ್ಲಿ ಈ ಮಾರ್ಗವು ಪ್ರಯಾಣಿಕರಿಗೆ ಮುಕ್ತವಾಗಲಿದೆ.
ಈ ನಾಲ್ಕು ನಿಲ್ದಾಣಗಳ ಮಧ್ಯೆ ಸಂಚಾರ ಸ್ಥಗಿತ
ಸದ್ಯ ಈ ಸಂಬಂಧ ಹಸಿರು ಮಾರ್ಗದ ನಿಗದಿತ ದೂರದವರೆಗೆ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಅಕ್ಟೋಬರ್ 03ರಂದು ಸ್ಥಗಿತಗೊಳಿಸಲಾಗಿದೆ. ಪೀಣ್ಯ ಕೈಗಾರಿಕೆ ಪ್ರದೇಶ, ನಾಗಸಂದ್ರ, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಈ ನಾಲ್ಕು ನಿಲ್ದಾಣಗಳ ಮಧ್ಯೆ ಮಟ್ರೋ ಸಂಚಾರ ಇರಲ್ಲ. ಮಧ್ಯಾಹ್ನ 2 ಗಂಟೆವರೆಗೆ ಸಂಚಾರ ಸ್ಥಗಿತಗೊಳ್ಳಲಿದೆ. ಉಳಿದಂತೆ ರೇಷ್ಮೆ ಸಂಸ್ಥೆವರೆಗೆ ಎಂದಿನಂತೆ ಮೆಟ್ರೋ ಸೇವೆ ಇರಲಿದೆ ಎಂದು BMRCL ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications