Namma metro: ಟ್ರ್ಯಾಕ್ ಮೇಲಿಳಿದ ಬೆಕ್ಕು, ಮುಂದಾಗಿದ್ದೇನು?
ಬೆಂಗಳೂರು, ಜನವರಿ 08: ಬೆಂಗಳೂರಿನ ನಮ್ಮ ಮೆಟ್ರೋ ಇತ್ತೀಚೆಗೆ ಒಂದಲ್ಲೊಂದು ವಿಚಾರದಲ್ಲಿ ಭಾರೀ ಸುದ್ದಿಯಲ್ಲಿರುತ್ತಲೇ ಇದೆ. ಇತ್ತೀಚೆಗ ಮೊಬೈಲ್ ತೆಗೆದುಕೊಳ್ಳಲು ಮಹಿಳೆಯೊಬ್ಬಳು ಫೋನ್ ತೆಗೆದುಕೊಳ್ಳಲಿ ಹಳಿಗೆ ಇಳಿದಿದ್ದಳು. ನಂತರ ಯುವವಕನಿಂದ ಆತ್ಮಹತ್ಯೆಗೆ ಯತ್ನಿಸಲಾಗಿತ್ತು.
ಇದೀಗ ಮೆಟ್ರೋ ಟ್ರ್ಯಾಕ್‌ನಲ್ಲಿ ಕಪ್ಪು ಬಣ್ಣದ ಬೆಕ್ಕು ಕಾಣಿಸಿಕೊಂಡಿದ್ದು, ಇದರಿಂದ ಪ್ರಯಾಣಿಕರು ಆತಂಕಗೊಂಡಿರುವಂತಹ ಘಟನೆ ಜೆ.ಪಿ.ನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಮೆಟ್ರೋ ಟ್ರ್ಯಾಕ್ ಮೇಲೆ ಬಂದಿರುವ ಬೆಕ್ಕಿನ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಟ್ರ್ಯಾಕ್ ಮೇಲೆ ಬೆಕ್ಕು ಇಳಿದಿರುವುದನ್ನು ಕಂಡ ಪ್ರಯಾಣಿಕರು ತಕ್ಷಣ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಬಳಿಕ ಅಲ್ಲಿನ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಟ್ರ್ಯಾಕ್‌ನಲ್ಲಿದ್ದ ಬೆಕ್ಕನ್ನು ಓಡಿಸುವ ಮುಂದಾಗಿದ್ದಾರೆ. ನಂತರ ಇದಕ್ಕೆ ಪ್ರಯಾಣಿಕರಿಂದ ಇದಕ್ಕೇ ಯಾವ ರೀತಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎನ್ನುವುದನ್ನು ಇಲ್ಲಿ ಗಮನಿಸಿ.
ಇನ್ನು ಟ್ವೀಟ್‌ನಲ್ಲಿ ಬೆಕ್ಕಿನ ಫೋಟೋವನ್ನು ಪೋಸ್ಟ್ ಮಾಡಿದ ಡಾ.ಲಕ್ಷಯ್ ಕಥುರಿಯಾ ಪ್ರತಿಕ್ರಿಯಿಸಿದ್ದಾರೆ. ಜೆಪಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿ ಮೇಲೆ ಬೆಕ್ಕಿ ಸಿಕ್ಕಿಹಾಕಿಕೊಂಡಿದೆ. ರೈಲನ್ನು ನಿಲ್ಲಿಸುವ ಮೂಲಕ ರಕ್ಷಣೆಗೆ ಪ್ರಯತ್ನಿಸುವ ಬದಲು ಅದನ್ನು ಸರಿಸಲು ಭದ್ರತೆ ಸಿಬ್ಬಂದಿ ನಿರ್ಧರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರಾಶೆಗೊಂಡ ಪ್ರಯಾಣಿಕರು ತಮ್ಮ ಕಳವಳ ವ್ಯಕ್ತಪಡಿಸಿ, ನಮ್ಮ ಮೆಟ್ರೋ ನಿರ್ವಾಹಕರಾದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರು.
"ಸುರಕ್ಷತೆ ಮತ್ತು ಭದ್ರತೆಯ ವಿಷಯದ ಬಗ್ಗೆ BMRCL ತಮ್ಮ ಭದ್ರತಾ ಸಿಬ್ಬಂದಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿದೆ. ಮಾನವೀಯ ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಲು ತರಬೇತಿ ನೀಡಿದರೆ, ಅನಾಹುತಗಳು ಕಡಿಮೆಯಾಗುತ್ತವೆ. ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಬೀದಿ ನಾಯಿಯೊಂದು ಮೆಟ್ರೋ ಟ್ರ್ಯಾಕ್‌ಗೆ ಪ್ರವೇಶಿಸಿದಾಗ ರಕ್ಷಿಸಲಾಗಿದೆ. ಎಲ್ಲ ಕಡೆಯೂ ಇದೇ ಕ್ರಮ ಅನುಸರಿಸಬೇಕು," ಎನ್ನುತ್ತಾರೆ ಪ್ರಯಾಣಿಕ ನರೇಶ್.
ಈ ಮಾರ್ಗದಲ್ಲಿ 15 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತ
ಇತ್ತೀಚೆಗಷ್ಟೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಮೆಟ್ರೋ ಹಳಿ ಮೇಲೆ ಜಿಗಿದಿರುವ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಬಳಿಕ ಯುವಕನ ಸ್ಥಿತಿ ಗಂಭೀರವಾಗಿತ್ತು. ಮೆಟ್ರೋ ಸಿಬ್ಬಂದಿ ಆ್ಯಂಬುಲೆನ್ಸ್‌ನಲ್ಲಿ ಆತನನ್ನು ಕರೆದೊಯ್ದು ಯಶವಂತಪುರದ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ಘಟನೆ ಹಿನ್ನೆಲೆ ಹಸಿರು ಮಾರ್ಗದಲ್ಲಿ ನಮ್ಮ ಸಂಚಾರವನ್ನು 15 ನಿಮಿಷಗಳ ಕಾಲ ಸ್ಥಗಿತ ಮಾಡಲಾಗಿತ್ತು. ಇದರಿಂದ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದ ಘಟನೆಯೂ ನಡೆದಿತ್ತು.
ಮೆಟ್ರೋ ಹಳಿಗಳ ಪಕ್ಕದಲ್ಲಿ 750 ವೋಲ್ಟ್ ಹೆವಿ ಪವರ್ ಲೈನ್ ಹಾದು ಹೋಗಿರುತ್ತದೆ. ಆದ್ದರಿಂದ ಮತ್ತೆ ಪವರ್ ಜನರೇಟ್ ಮಾಡಲು ಅರ್ಧ ಗಂಟೆ ಸಮಯ ಬೇಕಾಗುತ್ತದೆ ಎಂದು ಬಿಎಂಸಿಎಲ್ ಅಧಿಕಾರಿಗಳು ತಿಳಿಸಿದ್ದರು.
ಇನ್ನು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಕೇರಳ ರಾಜ್ಯದ ಅಲಪ್ಪುಜ (23) ಮೂಲದವನು ಎನ್ನುವ ಮಾಹಿತಿ ಲಭ್ಯವಾಗಿದ್ದು, ಈತ ಬೆಂಗಳೂರಿನ ಅಬ್ಬಿಗೆರೆಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.












Click it and Unblock the Notifications