Bengaluru metro: ಮೆಟ್ರೋ ನಿಲ್ದಾಣಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ, ಏಕೆ? ಅವರ ಕೆಲಸವೇನು?
ಬೆಂಗಳೂರು, ಜನವರಿ 18: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿಯುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಎಚ್ಚೆತ್ತುಕೊಂಡಿದೆ. ಪ್ರಯಾಣಿಕರ ರಕ್ಷಣೆಗೆ ಮಹತ್ವ ನಿರ್ಧಾರ ಕೈಗೊಂಡು ಜಾರಿಗೆ ನಿರ್ಧರಿಸಿದೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಹಿತ ದೃಷ್ಟಿಯಿಂದ, ಯಾವುದೇ ಅವಘಡಗಳ ಜರುಗದಂತೆ ತಡೆಯಲು BMRCL ನಿಲ್ದಾಣಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ತೀರ್ಮಾನಿಸಿದೆ. ನಿಲ್ದಾಣಗಳಲ್ಲಿ ಪ್ಲಾರ್ಟ್‌ಫಾರ್ಮ್‌ಗಳಲ್ಲಿ ಸ್ಕೀನ್ ಡೋರ್ (PSD) ಅಳವಡಿಕೆ ನಿರ್ಧಾರ ಬೆನ್ನಲ್ಲೆ ಸಿಬ್ಬಂದಿ ಸಂಖ್ಯೆ ಹೆಚ್ಚಿಸಲು ಮೆಟ್ರೋ ನಿರ್ಧರಿಸಿದೆ.

ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿಯಾಗಿ ಒಟ್ಟು 326 ಸಿಬ್ಬಂದಿಯನ್ನು ನಿಯೋಜನೆ ಮಾಡಲು BMRCL ಯೋಜಿಸಿದೆ. ಈ ಸಿಬ್ಬಂದಿಯು ನಿಲ್ದಾಣಗಳಲ್ಲಿ ರೈಲು ಕಟ್ಟುನಿಟ್ಟಿನ ನಿಗಾ ವಹಿಸಲಿದ್ದಾರೆ. ಮೆಟ್ರೋ ಹಳಿಗೆ ಜಿಗಿಯುವ ಘಟನೆಗಳನ್ನು ತಡೆಯಲಿದ್ದಾರೆ. ರೈಲುಗಳು ಬರುವ ಮೊದಲು ಪ್ರಯಾಣಿಕರನ್ನು ಸರತಿ ಸಾಲಿನಲ್ಲಿ ನಿಲ್ಲಿಸಲಿದ್ದಾರೆ.
ಪ್ರಯಾಣಿಕರ ಮೇಲೆ ನಿಗಾ
ಇನ್ನೂ ಮೆಟ್ರೋ ಬರುವ ಮೊದಲೇ ಯಾರೊಬ್ಬರು ಹಳದಿ ಗೆರೆ ದಾಟದಂತೆ ನೋಡಿಕೊಳ್ಳುತ್ತಾರೆ, ಪ್ರಯಾಣಿಕರನ್ನು ನಿಯಂತ್ರಿಸುತ್ತಾರೆ. ರೈಲು ಓಡಾಡುವಾಗ ಪ್ರಯಾಣಿಕರ ಚಲನವಲನದ ಮೇಲೆ ತೀವ್ರ ಎಚ್ಚರಿಕೆ ವಹಿಸುತ್ತಾರೆ ಎಂದು ಟಿವಿನೈನ್ ವರದಿ ಮಾಡಿದೆ.

ಇದೆಲ್ಲ ನೋಡಿಕೊಳ್ಳಲು ಅಗತ್ಯವಿರುವ ಹೆಚ್ಚುವರಿ ಸಿಬ್ಬಂದಿಯನ್ನು ನಮ್ಮ ಮೆಟ್ರೋ ನೇಮಿಸಿಕೊಳ್ಳಲಿದೆ. ಅವರೆಲ್ಲ ಆದಷ್ಟು ಶೀಗ್ರವೇ 9 ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
50 ಮೆಟ್ರೋ ನಿಲ್ದಾಣಗಳಲ್ಲಿ PDS ವ್ಯವಸ್ಥೆ
ಇದಷ್ಟೇ ಅಲ್ಲದೇ ಹೆಚ್ಚುವರಿ ಸಿಬ್ಬಂದಿ ಜೊತೆಗೆ ಮೇಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣ ಸೇರಿದಂತೆ ವಿವಿಧ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಟ್ರೀನ್ ಡೋರ್ (ಪಿಎಸ್‌ಡಿ) ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಸಿಬಿಟಿಸಿ ಸಿಗ್ನಲಿಂಗ್ ಮತ್ತು ಪ್ಲಾಟ್ ಫಾರ್ಮ್ ಸ್ಟ್ರೀನ್ ಡೋರ್ಗೆ (ಪಿಎಸ್‌ಡಿ) ಟೆಂಡರ್ ಕರೆಯಲಾಗಿದೆ. ಇದರ ಅಳವಡಿಕೆಗಾಗಿ ಅಲ್‌ಸ್ಟಾಮ್ ಟ್ರಾನ್ಸ್ ಪೋರ್ಟ್ ಇಂಡಿಯಾ ಈ ಟೆಂಡರ್ ಪಡೆದಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿದೆ.
ಒಟ್ಟು 857 ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ. ಆರಂಭಿಕ ಹಂತದಲ್ಲಿ ಒಟ್ಟು 50 ಮೆಟ್ರೋ ನಿಲ್ದಾಣಗಳಲ್ಲಿ ಈ ಪಿಡಿಎಸ್ ವ್ಯವಸ್ಥೆ ಜಾರಿಗೆ ಬರಲಿದೆ. ಈ ಪೈಕಿ ಬೆಂಗಳೂರು ಮೆಟ್ರೋ ನೀಲಿ ಮಾರ್ಗ ಮತ್ತು ಗುಲಾಬಿ ಮಾರ್ಗದ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಅಳವಡಿಕೆ ಆಗಲಿದೆ ಎನ್ನಲಾಗಿದೆ.












Click it and Unblock the Notifications