Namma Metro: ಮೆಟ್ರೋ ನಿಲ್ದಾಣದಲ್ಲಿ ಯುವತಿ ಜತೆ ಅನುಚಿತ ವರ್ತನೆ ಪ್ರಕರಣ ಬೆಳಕಿಗೆ
ಬೆಂಗಳೂರು, ಏಪ್ರಿಲ್ 15: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಮಹಿಳೆಯರು ಎಷ್ಟು ಸುರಕ್ಷತ ಎಂಬ ಅನುಮಾನ ಮೂಡುತ್ತದೆ. ಆಗಾಗ ಮೆಟ್ರೋ ರೈಲು, ನಿಲ್ದಾಣದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ವರದಿ ಆಗಿದೆ. ಇದೀಗ ಯುವತಿ (ವಿದ್ಯಾರ್ಥಿನಿ) ಜೊತೆಗೆ ಅನುಚಿತವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬೆಂದಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಬರುವ 'ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣ' ಸಂಪರ್ಕಿಸುವ ಪಾದಾಚಾರಿ ಮೇಲ್ಸೇತುವೆ (ಸ್ಕೈವಾಕ್/ಓವರ್ ಬ್ರಿಡ್ಜ್) ಕಾಲೇಜು ವಿದ್ಯಾರ್ಥಿನಿ ಜೊತೆಗೆ 32 ವರ್ಷದ ವ್ಯಕ್ತಿ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ. ಕೂಡಲೇ ಆತನನ್ನು ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿ ಬಂಧಿಸಿದ ಘಟನೆ ಕಳೆದ ಗುರುವಾರ ನಡೆದಿದೆ ಎಂದು 'ದಿ ಹಿಂದು' ವರದಿ ಮಾಡಿದೆ.

ಯುವತಿ ಸ್ಕೈವಾಕ್ ಮೇಲೆ ಬರುವಾಗ ಘಟನೆ
ಯುವತಿ ಅಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸ್ಕೈವಾಕ್ ಮೇಲೆ ಬರುತ್ತಿದ್ದಾರೆಗೆ ಈ ಘಟನೆ ನಡೆದಿದೆ. ವಿದ್ಯಾರ್ಥಿಯು ಹಳೆಯ ಮದ್ರಾಸ್ ರಸ್ತೆ ದಾಟಲು ಪಾದಾಚಾರಿ ಮೇಲ್ಸೇತುವೆ ಮೂಲಕ ಹಾದು ಹೋಗುತ್ತಿದ್ದಾರೆ. ಈ ವೇಳೆ ವ್ಯಕ್ತಿ ಉದ್ದೇಶ ಪೂರ್ವಕವಾಗಿಯೇ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂದು ಪೊಲೀಸರ ಮೂಲಗಳು ತಿಳಿಸಿವೆ.
ನಶೆಯಲ್ಲಿ ವ್ಯಕ್ತಿ ಹೀಗೆ ಅನುಚಿತವಾಗಿ ಯುವತಿ ಜೊತೆ ನಡೆದುಕೊಂಡಿದ್ದಾನೆ. ಎಸ್ಕಲೇಟರ್ ಬಳಿ ಆಕೆಗೆ ಸನ್ನೆ ಮಾಡಿ ಅನುಚಿತವಾಗಿ ವರ್ತಿಸಿ ನಂತರ ಆಕೆಯನ್ನು ಹಿಂಬಾಲಿಸಿದ್ದಾನೆ. ಮೆಟ್ರೋ ಪ್ರವೇಶ ದ್ವಾರವನ್ನು ತಲುಪಿದ ನಂತರ, ವಿದ್ಯಾರ್ಥಿನಿಯು ಠಾಣೆಯ ಭದ್ರತಾ ಅಧಿಕಾರಿಗೆ ವಿಷಯ ತಿಳಿಸಿದ್ದಾಳೆ.

ಅಮಲಿನಲ್ಲಿದ್ದ ವ್ಯಕ್ತಿಗೆ ಪೊಲೀಸ್ ಎಚ್ಚರಿಕೆ
ವಿಷಯ ತಿಳಿಯುತ್ತಿದ್ದಂತೆ ಮೆಟ್ರೋ ಸಿಬ್ಬಂದಿ ಅಮಲಿನಲ್ಲಿದ್ದ ವ್ಯಕ್ತಿಯನ್ನು ಹಿಡಿದು ರಾಮಮೂರ್ತಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿದ್ಯಾರ್ಥಿಯು ಆರಂಭದಲ್ಲಿ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಸಂಪರ್ಕಿಸಿದ್ದಾರೆ. ನಂತರ ಔಪಚಾರಿಕ ಪ್ರಥಮ ಮಾಹಿತಿ ವರದಿ ಪಡೆದು ಪ್ರಕರಣ ಮುಂದುವರಿಸಲು ಯುವತಿ ಮುಂದಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಅರಿವಿನ ಅಪರಾಧ (ನಾನ್ ಕಾಗ್ನಿಜಬಲ್) ವರದಿಯನ್ನು ದಾಖಲಿಸಿಕೊಂಡರು ಮತ್ತು ಆರೋಪಿಯನ್ನು ನಂತರ ಕಠಿಣ ಎಚ್ಚರಿಕೆಯೊಂದಿಗೆ ಬಿಡುಗಡೆ ಮಾಡಿದರು.
ಈ ಹಿಂದೆಯು ಕೆಲವು ಘಟನೆಗಳು ವರದಿ
ಇತ್ತಿಚೆಗೆ ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಒಳ ಪ್ರವೇಶಿಸುತ್ತಿದ್ದಂತೆ ತನ್ನ ಖಾಸಗಿ ಅಂಗಾಂಗ ಮುಟ್ಟಿಕೊಂಡು ಕೆಟ್ಟದ್ದಾಗಿ ಸತಃ ಮೆಟ್ರೋ ಸಿಬ್ಬಂದಿ ನಡೆದುಕೊಂಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಆತನನ್ನು ಅಮಾನತು ಮಾಡಲಾಯಿತು.
ಈ ಹಿಂದೆ ರಾಜಾಜಿನಗರ, ಮೆಜೆಸ್ಟಿ ಮೆಟ್ರೋನಿಲ್ದಾಣ ಸೇರಿದಂತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ, ಕಿರುಕುಳ ನೀಡಿದ ಘಟನೆಗಳು ವರದಿ ಆಗಿದ್ದವು. ಈ ಘಟನೆಗಳು ಮರೆಯದಿರುವಾಗಲೇ ವಿದ್ಯಾರ್ಥಿನಿ ಜತೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ.












Click it and Unblock the Notifications