ನಲಪಾಡ್ ಜಾಮೀನು ಅರ್ಜಿ ಮಾರ್ಚ್ 2ಕ್ಕೆ ತೀರ್ಪು
ಬೆಂಗಳೂರು, ಫೆಬ್ರವರಿ 27: ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ 63ನೇ ನಗರ ಸೆಷನ್ಸ್ ನ್ಯಾಯಾಲಯವು ತೀರ್ಪನ್ನು ಮಾರ್ಚ್ 25ಕ್ಕೆ ಮುಂದೂಡಿದೆ.
ಇಂದು ಇತರೆ ಆರೋಪಿಗಳ ಪರ ವಕೀಲ ಎಸ್.ಬಾಲನ್ ದೀರ್ಘ ವಾದ ಮಂಡಿಸಿದರು. ಅವರ ನಂತರ ನಲಪಾಡ್ ಪರ ವಕೀಲ ಟಾಮಿ ಸೆಬಾಸ್ಟಿಯನ್ ಮತ್ತು ವಿಶೇಷ ಸಾರ್ವಜನಿಕ ಅಭಿಯಂತರ (SPP) ಶ್ಯಾಮ್ ಸುಂದರ್ ಅವರು ವಾದ ಮಂಡಿಸಿದರು.

ಮೂವರು ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು ಆದೇಶವನ್ನು ಕಾಯ್ದಿರಿಸಿ ಮಾರ್ಚ್ 2ಕ್ಕೆ ಮುಂದೂಡಿದರು. ನಿನ್ನೆ(ಫೆ.27) ರಂದು ಶ್ಯಾಮ್ ಸುಂದರ್ ಮತ್ತು ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು. ಸಮಯದ ಅಭಾವ ಹಾಗೂ ಹೆಚ್ಚಿನ ವಾದ ಮಂಡನೆಗೆ ಅವಕಾಶ ಕೇಳಿದ ಕಾರಣ ಇಂದು ಸಹ ವಿಚಾರಣೆ ನಡೆಸಲಾಗಿತ್ತು.











Click it and Unblock the Notifications