ಘಾಟಿಯಲ್ಲಿ ಡಾಟಿ ಅವರ 'ಸೊಸೆ' ಮೈತ್ರಿಯಾ ಗೌಡ

ದೊಡ್ಡಬಳ್ಳಾಪುರ, ಸೆ.8: ಕೇಂದ್ರ ಸಚಿವ ಸದಾನಂದಗೌಡರ ಪುತ್ರ ಕಾರ್ತಿಕ್ ಗೌಡ ಅವರ ಪುತ್ರ ಕಾರ್ತಿಕ್ ಗೌಡ ನನ್ನ ಪತಿ ಎಂದಿರುವ ನಟಿ ಮೈತ್ರಿಯಾ ಗೌಡ ಅವರು ಈಗ ದೈವಬಲವೊಂದೇ ನನಗೆ ನ್ಯಾಯ ಕೊಡಿಸಲು ಸಾಧ್ಯ ಎನ್ನುತ್ತಾ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಡಾಟಿ ಅವರ ಸೊಸೆ ಎನ್ನಲಾದ ಮೈತ್ರಿಯಾ ಅವರು ತಮ್ಮ ಸೋದರಿ ಜೊತೆಗೂಡಿ ಘಾಟಿ ಸುಬ್ರಮಣ್ಯದಲ್ಲಿ ಯಾಗದಲ್ಲಿ ಪಾಲ್ಗೊಂಡಿದ್ದರು.

ಸರ್ಪದೋಷ ಪರಿಹಾರಕ್ಕಾಗಿ ಶಿರಡಿ ಸಾಯಿಬಾಬಾ ಭಿಕ್ಷಾ ಕೇಂದ್ರ ಏರ್ಪಡಿಸಿದ್ದ ಈ ವಿಶೇಷ ಯಾಗದ ಪೂಜೆಯಲ್ಲಿ ನಟಿ ಮೈತ್ರಿಯಾ ಗೌಡ ಭಾಗವಹಿಸಿ ಗಮನಸೆಳೆದರು. ಈ ಹಿಂದೆ ಕೋರ್ಟಿಗೆ ಹಾಜರಾಗುವ ಮುನ್ನ ಕೂಡಾ ಬೆಂಗಳೂರಿನ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಲ್ಲದೆ, ನಾನು ದೈವ ಭಕ್ತೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ನಂಬಿದವಳು. ನಾನು ಬೇಕಾದರೆ ಆಣೆ ಪ್ರಮಾಣದಲ್ಲಿ ಭಾಗವಹಿಸಿ ಸತ್ಯಾ ಸತ್ಯತೆ ಬಹಿರಂಗ ಪಡಿಸಲು ಸಿದ್ಧ ಎಂದು ಘೋಷಿಸಿದ್ದರು.[ಮೈತ್ರಿಯಾ ಗೌಡ ಪ್ರಕರಣ, ಡಿವಿಎಸ್‌ಗೆ ನೋಟಿಸ್‌ ]

ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸನ್ನಿದಿಯಲ್ಲಿ ಆಯೋಜಿಸಲಾಗಿದ್ದ ದ್ವಾದಶ ಮಹಾ ಕಾಳಸರ್ಪ ಯಾಗದಲ್ಲಿ ಮೈತ್ರಿಯಾಗೌಡ ಅವರು ಪಾಲ್ಗೊಂಡು ದೇವರ ಆಶೀರ್ವಾದ ಬೇಡಿದ್ದಾರೆ. ರೈಲ್ವೆ ಸಚಿವ ಸದಾನಂದಗೌಡರ ಕುಟುಂಬ ತನ್ನನ್ನು ಸೊಸೆಯಾಗಿ ಒಪ್ಪಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ ಎಂದು ಮೈತ್ರಿಯಾ ಹೇಳಿದ್ದಾರೆ.

Mythriya Gowda visit Ghati Subramanya seeks divine blessing

ಸೋಮವಾರ ಸಂಜೆ ತೀರ್ಪು: ಕಾರ್ತಿಕ್ ಮತ್ತು ನಟಿ ಮೈತ್ರಿಯಾ ಗೌಡ ಪ್ರೇಮ ಪ್ರಕರಣದ ಬಗ್ಗೆ ಎದ್ದಿರುವ ಅನುಮಾನಗಳು ಸೋಮವಾರ ಸಂಜೆ ಬಗೆಹರಿಯುವ ಸಾಧ್ಯತೆ ಕಂಡು ಬಂದಿದೆ. ಕಾರ್ತಿಕ್ ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕುರಿತಂತೆ ಸೋಮವಾರ ಸಂಜೆ 5 ಗಂಟೆಗೆ ನ್ಯಾ.ಮುದಿಗೌಡರ್ ಅವರು ತೀರ್ಪು ನೀಡಲಿದ್ದಾರೆ.[ಸೆ.8ಕ್ಕೆ ಕಾರ್ತಿಕ್ ಗೌಡ ಜಾಮೀನು ಅರ್ಜಿ ತೀರ್ಪು]

ಶುಕ್ರವಾರ ಕಾರ್ತಿಕ್ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಮತ್ತು ಸರಕಾರಿ ಅಭಿಯೋಜಕ ಹೊಸಮನಿ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಮುದಿಗೌಡರರ್ ಅವರು ತೀರ್ಪುನ್ನು ಶನಿವಾರಕ್ಕೆ ಕಾಯ್ದರಿಸಿದ್ದರು.ಶನಿವಾರ ನ್ಯಾ.ಮುದಿಗೌಡರ್ ಅವರು ತೀರ್ಪು ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಅಂತಿಮ ತೀರ್ಪು ಸೋಮವಾರ(ಸೆ.8)ದಂದು ಪ್ರಕಟಿಸಲಾಗುವುದು ಎಂದು ನ್ಯಾ. ಮುದಿಗೌಡರ್ ಹೇಳಿದರು.[ಮೈತ್ರಿಯಾ ಗೌಡ ಮೇಲೆ ಬಿತ್ತು ಬೆದರಿಕೆ ಕೇಸ್]

ಬಂಧನದ ಕಥೆ ಏನಾಯ್ತು?: ಕಾರ್ತಿಕ್ ಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಆರ್.ಟಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್‌ ಗೌಡ ಅವರಿಗೆ ಸೆಪ್ಟೆಂಬರ್ 1 ರಂದು ನೋಟೀಸ್ ನೀಡಿದ್ದರು. ಸೆಪ್ಟೆಂಬರ್ 3 ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದರು. ವಿಚಾರಣೆಗೆ ಹಾಜರಾಗದ ಕಾರ್ತಿಕ್ ಗೆ ಕೋರ್ಟ್ ಬಂಧನ ವಾರೆಂಟ್ ನೀಡಿತ್ತು. ನಂತರ ಮೂರು ವಿಶೇಷ ಪೊಲೀಸ್ ತಂಡ ರಚನೆ ಮಾಡಿ ಕೊಡಗು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಕಾರ್ತಿಕ್ ಗಾಗಿ ಹುಡುಕಾಟ ನಡೆಸಲಾಗಿದೆ.[ಮೈತ್ರಿಯಾ ಪ್ರಕರಣ: ಬಿಗ್ ಬಾಸ್ ಗಳಿಗೆ ಬಿಗ್ ಬಾಸ್]

ಬೆಂಗಳೂರಿನಲ್ಲಿ ಸದಾನಂದ ಗೌಡ ಅವರ ಪತ್ನಿ, ಕಾರ್ತಿಕ್ ತಾಯಿ ಡಾಟಿ ಅವರ ಹೇಳಿಕೆ ಪಡೆಯಲಾಗಿದೆ. ಮಂಗಳೂರಿನ ಮನೆ ತೆರಳಿ ಕಾರ್ತಿಕ್ ಆಪ್ತರು, ಗೆಳೆಯರು ಹಾಗೂ ಕಾರು ಚಾಲಕರ ಹೇಳಿಕೆ ಸಂಗ್ರಹಿಸಲಾಗಿದೆ. ಕಾರ್ತಿಕ್ ಗೆ ಸಂಬಂಧಿಸಿದ ಬಟ್ಟೆ ಬರೆ ಇನ್ನಿತರ ವಸ್ತುಗಳಲ್ಲಿ ಕೆಲವನ್ನು ಬೆಂಗಳೂರು, ಕೊಡಗು, ಮಂಗಳೂರಿನ ಮನೆಗಳಲ್ಲಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ತಿಕ್ ಫೋನ್ ಸದ್ಯಕ್ಕೆ ಸ್ವಿಚ್ ಆಫ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+