Get Updates
Get notified of breaking news, exclusive insights, and must-see stories!

ಬೆಂಗಳೂರಿನ ಕಲಾರಸಿಕರಿಗಾಗಿ ಜೂ.9 ರಂದು 'ಮಿಸ್ಟಿಕ್ ಲೋಟಸ್'

ಬೆಂಗಳೂರು, ಜೂನ್ 7: ಸಹೃದಯರಲ್ಲಿ ಕಲೆಯ ಕುರಿತು ರಸಾನುಭೂತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ 'ಫಿಡೆಲಿಟಿಸ್ ಗ್ಯಾಲರಿ'ಯು ಮಿಸ್ಟಿಕ್ ಲೋಟಸ್ ಎಂಬ ಕಲಾಪ್ರದರ್ಶನವನ್ನು ಹಮ್ಮಿಕೊಂಡಿದೆ.

ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಫಿಡೆಲಿಟಸ್ (Fidelitus) ಗ್ಯಾಲರಿಯು ಜೂನ್ 9 ರಿಂದ 11 ರವರೆಗೆ ಈ ಕಲಾ ಪ್ರದರ್ಶನ ನಡೆಸುತ್ತಿದೆ.[ಕ್ರೂರತ್ವದ ವಿರುದ್ಧ ಸಾತ್ವಿಕ ಅಭಿಯಾನ: #BeefFest vs #MilkFest]

ಬೆಂಗಳೂರಿನ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೋ ಆರ್ಟ್ ಸೆಂಟರ್ ನಲ್ಲಿ ಬೆಳಗ್ಗೆ 10 ರಿಂದ ಸಂಜೆ 7:30ರವರೆಗೆ ನಡೆಯುವ ಈ ಪ್ರದರ್ಶನದಲ್ಲಿ ಖ್ಯಾತ ಕಲಾವಿದ ಕೋಟೆಗದ್ದೆ ರವಿ ಅವರು ರಚಿಸಿದ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ, ಕಲಾ ಸಂಗ್ರಾಹಕಿ ಚೈತ್ರಾ ಪೂರ್ಣಿಮಾ ತಂಗಯ್ಯ, ಕನ್ವಿನಿಯಂಟ್ ಕನ್ಸ್ಟ್ರಕ್ಷನ್ ಕನ್ಸಲ್ಟನ್ಸಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ನಾಯರ್, ಫಿಡೆಲಿಟಸ್ ಕಾರ್ಪ್ ಪ್ರಾಪರ್ಟಿ ಸರ್ವಿಸಸ್ ಪ್ರೈ ಲಿ.ನ ವ್ಯವಸ್ಥಾಪಕ ನಿರ್ದೇಶಕ ಅಚ್ಯುತ ಗೌಡ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

ಪ್ರದರ್ಶನದ ಉದ್ದೇಶ

ಪ್ರದರ್ಶನದ ಉದ್ದೇಶ

ಈ ಪ್ರದರ್ಶನದಿಂದ ಸಂಗ್ರಹವಾದ ಶೇ.25 ರಷ್ಟು ಹಣವನ್ನು, ನಿರ್ಗತಿಕ ಮಕ್ಕಳ ಸೇವೆಯಲ್ಲಿ ತೊಡಗಿರುವ ಶಿಲ್ಪಾ ಫೌಂಡೇಶನ್ ಎಂಬ ಎನ್ ಜಿ ಒ ಗೆ ನೀಡಲಾಗುವುದು. ಈ ಹಣ ಸೇವಾಕಾರ್ಯಕ್ಕಾಗಿ ಬಳಕೆಯಾಗುತ್ತಿರುವುದು ಶ್ಲಾಘನೀಯವೆನ್ನಿಸಿದೆ,

ಅಮೋಘ ಚಿತ್ರಗಳು

ಅಮೋಘ ಚಿತ್ರಗಳು

ಅಕ್ರಲಿಕ್/ ತೈಲವರ್ಣದ ಚಿತ್ರಗಳು ಅಧ್ಯಾತ್ಮದ ಹೂರಣವನ್ನು ಸ್ಫುರಿಸಲು ಪ್ರಯತ್ನಿಸಿವೆ. ಮನುಷ್ಯನ ಅತೀಂದ್ರಿಯ ಶಕ್ತಿಯನ್ನು ಇಲ್ಲಿ ಬಣ್ಣಗಳ ಮೂಲಕ ಪ್ರತಿನಿಧಿಸುವ ಪ್ರಯತ್ನ ನಡೆದಿದೆ.[ಮುನ್ನೋಟದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಕೆ]

ಭಾರತೀಯ ಸಂಸ್ಕೃತಿ

ಭಾರತೀಯ ಸಂಸ್ಕೃತಿ

ಅಧ್ಯಾತ್ಮಕ್ಕೆ ಮಹೋನ್ನತ ಸ್ಥಾನ ನೀಡಿದ ಭಾರತೀಯ ಸಂಸ್ಕೃತಿಯ ಮಹತ್ವವನ್ನು ಚಿತ್ರಗಳ ಮೂಲಕವೇ ತೋರಿಸುವ ಯತ್ನವೂ ಇಲ್ಲಿ ನಡೆದಿರುವುದು ಗಮನಾರ್ಹ.

ಕಲಾವಿದರ ಕುರಿತು

ಕಲಾವಿದರ ಕುರಿತು

ಮಿಸ್ಟಿಕ್ ಲೋಟಸ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಚಿತ್ರಗಳನ್ನು ರಚಿಸಿದ ಕಲಾವಿದರು ಕೋಟೆಗದ್ದೆ ರವಿ ಅವರು. ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಇವರು ಮೈಸೂರಿನ ಡಿಎಂಎಸ್ ಲಲಿತ ಕಲಾ ಮಹಾ ಸಂಸ್ಥಾನದಲ್ಲಿ ದೃಶ್ಯ ಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರು, ಮುಂಬೈ ಸೇರಿದತೆ ಹಲವೆಡೆ ಅವರ ಕಲಾಪ್ರದರ್ಶನಗಳು ನಡೆದಿವೆ.[ಬಂತು..ಬಂತು..ಬೆಂಗಳೂರಿಗೆ ವಿಜ್ಞಾನ ಎಕ್ಸ್ ಪ್ರೆಸ್ ರೈಲು!]

ಅಧ್ಯಾತ್ಮದ ಅನುಭವವೇ ಕಲೆಯಾಗಿ

ಅಧ್ಯಾತ್ಮದ ಅನುಭವವೇ ಕಲೆಯಾಗಿ

ಮುಖ್ಯವಾಗಿ ಭಾರತೀಯ ಪುರಾಣ, ಅಧ್ಯಾತ್ಮ ಮತ್ತು ಭಾರತೀಯ ಸಂಸ್ಕೃತಿಯ ಕುರಿತ ಕೋಟೆಗದ್ದೆ ರವಿ ಅವರ ಅನುಭವವೇ ಕಲಾಕೃತಿಯಾಗಿ ಹೊರಬಂದಿವೆ. ಸಹೃದಯ ಕಲಾವಿದರು, ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+