ಬಂತು..ಬಂತು..ಬೆಂಗಳೂರಿಗೆ ವಿಜ್ಞಾನ ಎಕ್ಸ್ ಪ್ರೆಸ್ ರೈಲು!
ಬೆಂಗಳೂರು, ಜೂನ್ 07 : ದೆಹಲಿಯಲ್ಲಿ ಉದ್ಘಾಟನೆಗೊಂಡ ವಿಜ್ಞಾನ ಎಕ್ಸ್ ಪ್ರೆಸ್ ರೈಲು ಜೂನ್ 6ರಂದು ಬೆಂಗಳೂರಿನ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು, ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಈ ವಿಜ್ಞಾನ ಎಕ್ಸ್ ಪ್ರೆಸ್ ರೈಲನ್ನು ನೋಡಿ ಕಣ್ತುಂಬಿಕೊಂಡರು.
ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯಿಂದ ರಚಿಸಲ್ಪಟ್ಟಿದ್ದು, ಇದೊಂದು ಸಂಚಾರಿ ವಿಜ್ಞಾನ ಅನ್ವೇಷಣಾ ರೈಲಾಗಿದೆ. ವೈಟ್ ಫೀಲ್ಡ್ ನಲ್ಲಿ ಜೂನ್ 6 ರಿಂದ ಜೂನ್ 8ರವರೆಗೆ, ನಂತರ ಕೆಂಗೇರಿಯಲ್ಲಿ ಜೂನ್ 9 ರಿಂದ ಜೂನ್ 11ರವರೆಗೆ ತಂಗಲಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವೀಕ್ಷಿಸಬಹುದು.

ತನ್ನ 16 ಎಸಿ ಬೋಗಿಗಳಲ್ಲಿ ಹವಾಮಾನ ಬದಲಾವಣೆ, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಪ್ರದರ್ಶನ ಇರುವುದು. ದೇಶಾದ್ಯಂತ 68 ನಿಲ್ದಾಣದಲ್ಲಿ ಫೆಬ್ರವರಿಯಿಂದ ಸೆಪ್ಟೆಂಬರ್ ವರೆಗೆ ಸುಮಾರು 19,000 ಕಿಲೋ ಮೀಟರ್ ಪ್ರಯಾಣ ಮಾಡುವುದು, ಇದೀಗ 480 ಪ್ರದರ್ಶನ ಕಂಡಿದ್ದು 1.62 ಕೋಟಿ ಮಂದಿ ಭೇಟಿ ನೀಡಿದ್ದಾರೆ,
ಇದು ಭಾರತದ ಅತಿ ದೊಡ್ಡ ಸಂಚಾರಿ ವಿಜ್ಞಾನದ ಪ್ರದರ್ಶನವಾಗಿದೆ, ಇದಕ್ಕೆ ಯಾವುದೆ ಶುಲ್ಕವಿರುವುದಿಲ್ಲ. ಮೊಬೈಲ್, ಕ್ಯಾಮರಾ, ಬ್ಯಾಗ್, ತಂಬಾಕು, ನೀರಿನ ಬಾಟಲ್, ಬೆಂಕಿಪಟ್ಟಣ ಮತ್ತು ಹರಿತ ವಸ್ತುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications