ಗಂಡುಮೆಟ್ಟಿನ ನಾಡಿನ ಹೈದ ಬೆಂದ ಊರು..! ಕಂಡಿದ್ದು ಹೀಗೆ
ಗಂಡು ಮೆಟ್ಟಿನ ನಾಡಿನಿಂದ ಬೆಂದಕಾಳೂರಿಗೆ ಬಂದು ನಗರ ಜೀವನ ಸುಖ ದುಃಖ, ಲಾಭ ನಷ್ಟ, ಪರಭಾಷಿಗರ ಜೊತೆಗಿನ ಒಡನಾಟ, ಕನ್ನಡ ಪರ ಜನರ ಹುಡುಕಾಟದ ಬಗ್ಗೆ ಖಾಸಗಿ ಸಂಸ್ಥೆ ಉದ್ಯೋಗಿ ಉಪೇಂದ್ರ ಕಗಲಗೊಂಬ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇದು ಉತ್ತರ ಕರ್ನಾಟಕದಿಂದ ಸಿಲಿಕಾನ್ ಸಿಟಿಗೆ ಬಂದ ಅನೇಕ ಯುವಕರ ಕಥೆಯೂ ಆಗಿರಬಹುದು.
ಬೆಂಗಳೂರಿಗೆ ಬಂದು ಈ ಫೆಬ್ರವರಿಗೆ ಒಂದು ವರ್ಷವಾಗಿದೆ. ಬೆಂಗಳೂರು ನನಗೆ ಅನ್ನ ನೀಡಿದೆ; ಬದುಕು ಕಲಿಸಿದೆ; ಈ ಒಂದು ವರ್ಷದಲ್ಲಿ ಒಳ್ಳೆದು-ಕೆಟ್ಟದು, ಸುಖ-ದು:ಖ, ಸಾಮಾನ್ಯವಾಗಿ ಮನುಷ್ಯನು ಜೀವನದಲ್ಲಿ ಪಡಬೇಕಾದ ಪಾಡುಗಳನ್ನು ನಾನು ಇಲ್ಲಿ ಅನುಭವಿಸಿದ್ದೆನೆ. ಗ್ರಿನ್ ಸಿಟಿ, ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಅಂತೆಲ್ಲಾ ಈ ನಗರಕ್ಕೆ ಕರೆಯುತ್ತಾರೆ. [ರಾಜ್ಯದ ಭೂಪಟಕ್ಕೆ 43 ಹೊಸ ತಾಲೂಕುಗಳ ಸೇರ್ಪಡೆ]
ಈ ವಿಷಯ ಸಾಮಾನ್ಯ ಎಲ್ಲರಿಗೂ ಗೊತ್ತಿರುವ ವಿಷಯ. ಇತಿಹಾಸ ಪುಟ ತಿರುವಿ ನೋಡಿದರೆ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಬೆಂಗಳೂರು ಒಳಪಟ್ಟಿತ್ತು. 1500ರ ಸುಮಾರಿನಲ್ಲಿ ಕೆಂಪೇಗೌಡರ ರಾಜಧಾನಿಯಾಗಿತ್ತು. 18ನೇ ಶತಮಾನದಲ್ಲಿ ಬೆಂಗಳೂರು ನಗರವಾಗಿ ಬೆಳೆಯಲಾರಂಭಿಸಿತು. ಕೈಗಾರಿಕೆಗಳು ಹುಟ್ಟಿಕೊಂಡವು. ಜನರನ್ನು ಈ ಊರಿನ ಕಡೆಗೆ ಆಕರ್ಷಿಸಿತು. ಜನಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯತೊಡಗಿತು.
ಇಂದು ಈ ಮಹಾನಗರವು ಭಾರತದಲ್ಲಿ ಅತೀ ಹೆಚ್ಚು ಬಹುಭಾಷಿಕರು ವಾಸಿಸುವ ಸ್ಥಳವಾಗಿ ಮಾರ್ಪಟ್ಟಿದೆ. ಸುಮಾರು 6 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ, ಬೆಂಗಳೂರು ಅಷ್ಟೇ 1ಕೋಟಿಗೂ ಅಧಿಕ ಜನಸಂಖ್ಯೆಯನ್ನು ಒಳಗೊಂಡಿರುವ ಬೃಹತ್ ನಗರವಾಗಿದೆ.

ಆಕರ್ಷಣೀಯ ನಗರ: ಬೆಂಗಳೂರು ಅರಮನೆ, ಜವಾಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗಳಂತಹ ಪ್ರವಾಸಿ ಸ್ಥಳಗಳನ್ನು ಹೊಂದಿದೆ. ತೆಲಗು, ಮಲಯಾಳಂ, ಹಿಂದಿ, ಮರಾಠಿ, ಬಂಗಾಳಿ, ಉರ್ದು ಸೇರಿದಂತೆ ನೇಪಾಳಿ, ಫ್ರೆಂಚ್, ಜರ್ಮನ್ ಮುಂತಾದ ವಿದೇಶಿ ಭಾಷಿಕರು ಇಂದು ಇಲ್ಲಿ ಕಾಣ ಸಿಗುತ್ತಾರೆ.
ಈ ಮಹಾನಗರದಲ್ಲಿ ಕಂಡುಬರುವ ಗಗನಚುಂಬಿ ಅಪಾರ್ಟ್ ಮೆಂಟ್ ಗಳು, 5 ಸ್ಟಾರ್ ಹೋಟೆಲ್ ಗಳು, ಮೆಟ್ರೊ ರೈಲು, ಶಾಪಿಂಗ್ ಮಾಲ್ ಏನುಂಟು ಏನಿಲ್ಲ..! ಬೆಂಗಳೂರು ಎಂಬ ಮಹಾನಗರವು ದೇಶದಲ್ಲಿಯೇ ಅತ್ಯಂತ ಸುರಕ್ಷಿತ ವಾಸಸ್ಥಳವಾಗಿದೆ. ಇದೇ ಕಾರಣದಿಂದಲೇ ಬೇರೆ ರಾಜ್ಯದ ಜನರ ಸಂಖ್ಯೆ ಇಂದು ಮಿತಿಮಿರತೊಡಗಿದೆ. [ಬರ ಬಂದು ಗುಳೆ ಹೋದಾಗ ಎಲ್ಲಿದ್ರೀ ಸಾರ್ ]
ಆಶ್ಚರ್ಯಕರ ಸಂಗತಿಯೆನೆಂದರೆ, ಇಂದು ಬೆಂಗಳೂರಿನಲ್ಲಿ 70 ಪ್ರತಿಶತದಷ್ಟು ಹೊರರಾಜ್ಯ ಹಾಗೂ ವಿದೇಶಿಯವರಾಗಿದ್ದಾರೆ. ಅಷ್ಟೆ ಅಲ್ಲ ಬಂಗ್ಲಾದೇಶಿಯ ಅಕ್ರಮ ವಲಸಿಗರನ್ನು ಇಲ್ಲಿ ಕಾಣಬಹುದಾಗಿದೆ. ನಮ್ಮ ಕರ್ನಾಟಕ ರಾಜ್ಯದ ರಾಜಧಾನಿಯಲ್ಲಿಯೇ ಕೇವಲ 30 ಪ್ರತಿಶತದಷ್ಟು ಕನ್ನಡಿಗರಿರುವುದು ಆಶ್ಚರ್ಯವೇ ಸರಿ.

ಕನ್ನಡದ ಬಗ್ಗೆ ಬೊಬ್ಬೆ ಯಾಕೆ? : ನಾನು ಹುಬ್ಬಳ್ಳಿಯಲ್ಲಿ ಇದ್ದಾಗ ಬೆಂಗಳೂರಿನಲ್ಲಿ ವಿವಿಧ ಕನ್ನಡ ಸಂಘಟನೆಗಳು ಒಂದಿಲ್ಲೊಂದು ಸಭೆ, ಚಳುವಳಿ, ಹೋರಾಟ ಅಂತ ಕಾರ್ಯಕ್ರಮಗಳನ್ನು ಮಾಡುತ್ತಿರುವುದನ್ನು ಸುದ್ದಿ ಮಾಧ್ಯಮದ ಮೂಲಕ ನೋಡಿ ತಿಳಿದುಕೊಳ್ಳುತ್ತಿದ್ದೆ. ನಾನು ಆಗ ದೂರದ ಹುಬ್ಬಳ್ಳಿಯಲ್ಲಿ ಆರಾಮಾಗಿ ಕುಳಿತು "ಇವರು ಯಾಕೆ ಹೀಗೆ ಯಾವಾಗಲೂ ಕನ್ನಡ ಕನ್ನಡ ಅಂತ ಬೊಬ್ಬೆ ಹೋಡಿಯುತ್ತಿದ್ದಾರೆ ಅಂತದ್ದು ಏನಾಗ್ತಿದೆ" ಅಂತ ನಾನೇ ನಿಶ್ಕಾಜಿ ಮಾಡ್ತಾ ಇದ್ದೆ.
ಇಲ್ಲಿಯ ವಾಸ್ತವಿಕತೆಯನ್ನು ತಿಳಿಸೊದಕೊಸ್ಕರ ಆ ವಿಧಿ ನನ್ನನ್ನು ಬೆಂಗಳೂರಿಗೆ ಬರುವ ಹಾಗೇ ಮಾಡಿತು. ಇಲ್ಲಿ ಹಲವಾರು ದಶಕಗಳ ಕಾಲ ವಾಸವಿರುವ ತಮಿಳು, ತೆಲಗು, ಹಿಂದಿ ಭಾಷಿಕರಲ್ಲಿ ಕೆಲವರು ನೆಲೆಸಲು ಸೂರು ಒದಗಿಸಿದ ಬೆಂಗಳೂರಿಗೆ ಹಾಗೂ ಕನ್ನಡ ಭಾಷೆಗೆ ಕೃತಜ್ಞರಾಗಿ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಕನ್ನಡ ಕಳಿತು ಕನ್ನಡಿಗರೊಂದಿಗೆ ಆತ್ಮೀಯರಾಗಿ ಬಾಳುತ್ತಾರೆ. [ಬೆಳಗಾವಿ ಸುವರ್ಣ ವಿಧಾನ ಸೌಧ ಕಟ್ಟಿದ್ದು ಏಕೆ?]
ಕನ್ನಡಿಗರೇ ಇಲ್ಲಿ ಅಸ್ಪೃಶ್ಯರು : ಕನ್ನಡ ಬಾರದೇ ಇದ್ದರೂ ಕನ್ನಡಿಗರೊಂದಿಗೆ ಚೆನ್ನಾಗಿರುತ್ತಾರೆ. ಇನ್ನೂ ಕೆಲವರಂತೂ ಬೆಂಗಳೂರಿನಲ್ಲಿ ವಾಸವಿದ್ದು, ಇಲ್ಲಿಯೇ ಕೆಲಸ ಮಾಡುತ್ತಾ, ಇಲ್ಲಿಯ ಅನ್ನ-ನೀರು ಸೇವಿಸುತ್ತಾ ತಮ್ಮ ತಮ್ಮ ಜೀವನಕ್ಕೆ ಗಂಟು ಮಾಡಿಕೊಂಡು ಇಲ್ಲಿಯ ಕನ್ನಡದ ಜನರನ್ನ,ಕನ್ನಡದ ಭಾಷೆ ಹಾಗೂ ಕನ್ನಡ ನೆಲವನ್ನ ದ್ವೇಷಿಸುತ್ತಾರೆ.
ಬೆಂಗಳೂರು ನಗರವು ದಿನದಿಂದ ದಿನಕ್ಕೆ ಬೆಳೆಯತ್ತಾ ಸಾಗುತಿದೆ. ಇಲ್ಲಿನ ಕಟ್ಟಡ ಕಾಮಗಾರಿ ಹಾಗೂ ಕಸ ವಿಲೇವಾರಿ, ಸಣ್ಣ-ಸಣ್ಣ ಹೆರ್ ಕಟಿಂಗ್ ಶಾಪ್, ಹೋಟೆಲ್ ಅಂಗಡಿ, ಕಿರಾಣಿ ಅಂಗಡಿ ಅಂತಹ ಕೆಲಸ ಮಾಡುತ್ತಿರುವುದರಲ್ಲಿ 80 ಪ್ರತಿ ಶತದಷ್ಟು ತಮಿಳು, ತೆಲುಗು ಹಾಗೂ ಹಿಂದಿ ಭಾಷಿಕರಾಗಿದ್ದಾರೆ.
ವಿಸರ್ಯಾಸವೆಂದರೆ ಈ ಮಹಾನಗರದಲ್ಲಿ ಕನ್ನಡ ಬಾರದೇ ಇರುವ ಭಿಕ್ಷುಕರು ಸಹ ಸಾವಿರಾರು ಸಂಖ್ಯೆಯಲ್ಲಿ ಸಿಗುತ್ತಾರೆ. ಇಲ್ಲಿನ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಹೊರ ಭಾಷಿಕರು ಕನ್ನಡಿಗರ ಮೇಲೆ ದರ್ಪ ತೋರಿಸುವುದು ಒಣ ರಾಜಕೀಯ ಮಾಡುವುದು ಇಂತಹ ನಡೆಯುವ ಸನ್ನಿವೇಶಗಳು ಸಾಮಾನ್ಯ. ಬೆಂಗಳೂರಿನ ವಾಸ್ತವಿಕತೆಯನ್ನು ಅರಿತ ಮೇಲೆ ನಮ್ಮ ಕನ್ನಡಿಗರು ಇಲ್ಲಿ ಅಸ್ಪೃಶ್ಯರಾಗಿದ್ದೇವೆ ಅಂತ ನನಗೆ ಮನದಟ್ಟಾಯಿತು.
ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದು. 2,600 ವರ್ಷಗಳಷ್ಟು ಇತಿಹಾಸ ಹೊಂದಿರುವ ಕನ್ನಡ ಭಾಷೆಯು, ಇಂದು ಕರ್ನಾಟಕ ರಾಜ್ಯ ರಾಜಧಾನಿಯಲ್ಲಿಯೇ ಬೆಂದು ಹೋಗುತ್ತಿರುವುದು ಶೋಚನೀಯ ಸ್ಥಿತಿ..!

ತಮಿಳುನಾಡಿನ ಟಿವಿ ವ್ಯವಸ್ಥೆ :ಉದಾಹರಣೆಗೆ ಹೇಳಬೇಕೆಂದರೆ, ನಮ್ಮ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಕೆಲವು ದಿನಗಳ ಹಿಂದ ಸರ್ಕಾರ ಸ್ವಾಮ್ಯದ ಅರಸು ಟಿ.ವಿ ಚಾನೆಲ್ ನೆಟ್ವರ್ಕ್ ನಲ್ಲಿ ಇದುವರೆಗೂ ಪ್ರಸಾರ ಮಾಡುತ್ತಿದ್ದ ದೇಶದ ಎಲ್ಲಾ ಭಾಷೆಯ ಚಾನೆಲ್ ಗಳನ್ನು ರದ್ದುಪಡಿಸಿತು.
ಕೇವಲ ತಮಿಳು ಚಾನೆಲ್ಲುಗಳನ್ನು ಪ್ರಸಾರ ಮಾಡಲಾರಂಭಿಸಿತು. ಇದು ಆ ರಾಜ್ಯದ ಭಂಡ ವ್ಯವಸ್ಥೆ. ಕಾವೇರಿ ನೀರಿನ ವಿಷಯವಾಗಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಜಗಳವಾದಗಳೆಲ್ಲಾ ಬೆಂಗಳೂರಿನಲ್ಲಿರುವ ತಮಿಳರು ತಮ್ಮ ರಾಜ್ಯದ ಪರ ಬೆಂಬಲ ನೀಡುತ್ತಾರೆ.
ಇಂದು ಬೆಂಗಳೂರಿನ ಸಿನಿಮಾ ಮಂದಿರಗಳಲ್ಲಿ ತಮಿಳು, ತೆಲಗು ಸಿನಿಮಾಗಳು ಸೆಂಚುರಿ ಬಾರಿಸಿ ತಮ್ಮ ತಮ್ಮ ಗಲ್ಲಾಪೆಟ್ಟಿಗೆ ತುಂಬಿಸಿಕೊಳ್ಳುತ್ತಿವೆ. ಆದರೆ ನಮ್ಮ ಕನ್ನಡ ಬೇರೆ ರಾಜ್ಯದಲ್ಲಿ ಪ್ರವೇಶಿಸುವುದಿರಲಿ ನಮ್ಮ ರಾಜ್ಯದಲ್ಲೇ ಕನ್ನಡಿಗರು ಸಿನಿಮಾ ನೋಡುತ್ತಾರೆಯೇ ಎಂಬ ನಿರ್ಮಾಪಕ ಹಾಗೂ ನಿರ್ದೆಶಕರಿಗೆ ಭಯದ ವಾತವರಣ ನಿರ್ಮಾಣವಾಗಿದೆ. [ಹಳ್ಳಿ ಕಟ್ಟುವ ಕನಸು ಹೊತ್ತ ಗ್ರಾಮಚೇತನ]
ಇನ್ನೊದು ವಿಚಾರ ತಿಳಿಯಪಡಿಸುವುದೆನೆಂದರೆ ನಮ್ಮ ರಾಜ್ಯ ಸರ್ಕಾರ ಹೆಸರಿಗಷ್ಟೇ ಕನ್ನಡ ಪರ ಅಂತ ಪೊಳ್ಳು ಬರವಸೆ ಕೊಡುತ್ತಿದೆ.ಇದುವರೆಗೂ ನೂರಾರು ಕನ್ನಡ ಶಾಲೆಗಳು ಮುಚ್ಚಿಕೊಂಡು ಹೋಗಿವೆ. ಯಾವುದೇ ರೀತಿಯ ಬದಲಾವಣೆ ಸರ್ಕಾರದಿಂದ ಆಗುತ್ತಿಲ್ಲ.
ಇನ್ನೊಂದು ಉದಾಹರಣೆಗೆ ಹೇಳಬೇಕೆಂದರೆ, ಕೆಲವು ವರ್ಷಗಳ ಹಿಂದೆ ನಮ್ಮ ರಾಜ್ಯ ಸರ್ಕಾರ ಹೊರಬೇಕೆಂದರೆ ತಂದಿರುವ ಅನ್ಯ ಭಾಗ್ಯದಿಂದ 1 ರೂಪಾಯಿಗೆ 1 ಕೆ.ಜಿ ಅಕ್ಕಿ ಕೊಡುವುದರ ಮೂಲಕ ಅಲ್ಪಸಂಖ್ಯಾತರ ಹಾಗೂ ಬಡವರ ಅಭಿವೃದ್ಧಿ ಅಂತ ಹೇಳಿಕೊಂಡಿತು. ಆದರೆ ಈ ಅನ್ನ ಭಾಗ್ಯದಿಂದ ಬೆಂಗಳೂರಿನಲ್ಲಿರುವ ಲಕ್ಷಾಂತರ ಹೊರ ರಾಜ್ಯದವರು ನಮ್ಮ ಅನ್ನವನ್ನೇ ತಿಂದು ನಮ್ಮ ನೆಲ ಹಾಗೂ ಭಾಷೆಯನ್ನು ತೆಗಳುತ್ತಿದ್ದಾರೆ.












Click it and Unblock the Notifications