ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಸುವರ್ಣ ವಿಧಾನ ಸೌಧ ಕಟ್ಟಿದ್ದು ಏಕೆ?

By ವೀರಯ್ಯ ಹೊಸಮಠ
|
Google Oneindia Kannada News

ಬೆಳಗಾವಿಯಲ್ಲಿ ಸುಮಾರು 300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ಪ್ರತಿ ವರ್ಷ ಅಧೀವೇಶನದ ನೆಪದಲ್ಲಿ ಇಲ್ಲಿ ಕೋಟ್ಯಾಂತರ ರೂಪಾಯಿ ಹರಿದು ಹೋಗುತ್ತದೆ. ಆದರೆ, ಸುವರ್ಣವಿಧಾನಸೌಧ ಯಾವ ಪ್ರಯೋಜನಕ್ಕೂ ಇಲ್ಲದಂತಾಗಿದೆ. ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಿ ಎಂಬ ಬೇಡಿಕೆ ಮುಂದಿಟ್ಟರೆ ಸರ್ಕಾರ ಅದನ್ನು ಒಪ್ಪುತ್ತಿಲ್ಲ. ಈ ಬಗ್ಗೆ ವೀರಯ್ಯ ಹೊಸಮಠ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.

ಮನೆಯಲ್ಲಿ ಮಗನಿಗೆ ಮಲಗಲು ಪ್ರತ್ಯೇಕ ಕೋಣೆಯಿಲ್ಲವೆಂಬ ನೆಪ ಹೇಳಿ ಆತನ ಮದುವೆ ಮಾಡದೆ ಇರಲು ಸಾಧ್ಯವೇ? ಮಗನಿಗೆ ಮದುವೆ ಮಾಡಲೇಬೇಕು ಅದಕ್ಕಾಗಿ ಇರುವ ಮನೆಯಲ್ಲಿಯೇ ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಬೇಕು. ಇಲ್ಲವೆ ಮತ್ತೊಂದು ಮನೆಯನ್ನು ನಿರ್ಮಿಸಿಸಬೇಕು. [ಬೆಳಗಾವಿ : ಶುಕ್ರವಾರದ ಅಧಿವೇಶನದ ಮುಖ್ಯಾಂಶಗಳು]

ಕರ್ನಾಟಕ ಸರ್ಕಾರ ಉತ್ತರ ಕರ್ನಾಟಕದ ವಿಷಯದಲ್ಲಿ ಮಗನ ಮದುವೆ ಮಾಡದ ಕುಟುಂಬದ ಯಜಮಾನನ ರೀತಿ ನಡೆದುಕೊಳ್ಳುತ್ತಿದೆ. ಸುಮಾರು 300 ಕೋಟಿ ಖರ್ಚು ಮಾಡಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ಚಳಿಗಾಲದ ಅಧಿವೇಶನದ ಹೆಸರಿಯಲ್ಲಿ ಕೋಟ್ಯಾಂತರ ರೂ. ಹಣ ಹರಿದು ಹೋಗುತ್ತಿದೆ.

Belagavi

ಕಚೇರಿ ಸ್ಥಳಾಂತರ ಮಾಡಿ : ಆದರೆ, ಸುವರ್ಣವಿಧಾನಸೌಧ ಯಾವ ಪ್ರಯೋಜನಕ್ಕೂ ಇಲ್ಲದಂತಾಗಿದೆ. ಸರ್ಕಾರಿ ಕಚೇರಿಗಳನ್ನು ಸೌಧಕ್ಕೆ ಸ್ಥಳಾಂತರ ಮಾಡಿ ಎಂದು ಬೇಡಿಕೆ ಮಂಡಿಸಿದರೆ ಸ್ಥಳದ ಅಭಾವವಿದೆ ಎಂದು ಹೇಳುವ ಸರ್ಕಾರ, ಪ್ರತ್ಯೇಕ ಮಲಗುವ ಕೋಣೆಯಿಲ್ಲವೆಂದು ಮಗನ ಮದುವೆಗೆ ನಿರಾಕರಿಸಿದ ರೀತಿ ವರ್ತಿಸುತ್ತಿದೆ.

ಸರ್ಕಾರದ ಈ ಅನಾಸಕ್ತಿಯ ಧೋರಣೆ ಉತ್ತರ ಕರ್ನಾಟಕವನ್ನು ಅನಾಥ ಪ್ರಜ್ಞೆಯಿಂದ ಬಳಲುವಂತೆ ಮಾಡುವುದಲ್ಲದೆ ಹಿರಿಯ ವ್ಯಕ್ತಿಯಂತೆ ಬೆಂಗಳೂರಿನಲ್ಲಿರುವ ಸರ್ಕಾರದ ಕೇಂದ್ರದಿಂದ ನಮಗೆನೂ ಪ್ರಯೋಜನ? ಎಂಬ ಭಾವನೆ ಈ ಭಾಗದ ಜನರಲ್ಲಿ ತಲೆಎತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು.

ಸುವರ್ಣ ವಿಧಾನಸೌಧ ಸುಸಜ್ಜಿತವಾಗಿದೆ. ಎಲ್ಲ ಕಾರ್ಯಗಳು ಸಭೆಗಳು ಅಲ್ಲಿ ನಡೆಯುತ್ತಿವೆ ಯಾವುದಕ್ಕೂ ಕೊರತೆಯಿಲ್ಲ. ಅಂದ ಮೇಲೆ ಅಲ್ಲಿ ಮಹತ್ವದ ಕಚೇರಿಗಳನ್ನು ಸ್ಥಳಾಂತರಿಸುವುದಕ್ಕೆ ಯಾವ ಅಡಚಣೆ ಇದೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಅರ್ಧ ಸರ್ಕಾರ ಇಲ್ಲಿಗೆ ಬರಲಿ : ಸುವರ್ಣಸೌಧದ ಅಕ್ಕಪಕ್ಕದಲ್ಲಿ ನೂರಾರು ಏಕರೆಯಷ್ಟು ಭೂಮಿಯಿದೆ ಅದನ್ನು ಬಳಸಿಕೊಂಡು ಸ್ಥಳವಕಾಶದ ಕೊರತೆ ಇದ್ದರೆ ಕಟ್ಟಡ ನಿರ್ಮಿಸಲು ಸಾಧ್ಯವಾಗುವುದಿಲ್ಲವೇ?. ಬೆಂಗಳೂರಿನಲ್ಲಿ ಮಾತ್ರ ಅಭಿವೃದ್ಧಿಯಾಗಬೇಕು ಬೆಳಗಾವಿಯಲ್ಲಿ ಅದರ ಗಂಧ, ಗಾಳಿಯೂ ಬೇಡ ಎಂದರೆ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದಂತೆ ಆಗುವುದಿಲ್ಲವೇ.?

ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಂಪೂರ್ಣ ಆಡಳಿತದ ಅರ್ಧಭಾಗವನ್ನು ಬೆಳಗಾವಿಗೆ ಸ್ಥಳಾಂತರಿಸಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಯಾವುದೇ ತೊಂದರೆಯಾಗಬಾರದೆಂದು ಸಂಪೂರ್ಣ ಯೋಜನೆ ರೂಪಿಸಿ ಸುವರ್ಣಸೌಧವನ್ನು ನಿರ್ಮಿಸಿದೆಯೇ ಹೊರತು ಕಾಟಾಚಾರಕ್ಕೆ ಒಂದು ಕಟ್ಟಡ ನಿರ್ಮಿಸಿ ಕೈ ತೊಳೆದುಕೊಂಡಿಲ್ಲ.

suvarna vidhana soudha

ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಬೆಂಗಳೂರು ಬಹುದೂರದಲ್ಲಿದೆ. ಜನರು ತಮ್ಮ ಕೆಲಸಕ್ಕೆಂದು ಬೆಂಗಳೂರಿಗೆ ಹೋದಾಗ ಅಧಿಕಾರಿಗಳು ಸಿಗುವುದಿಲ್ಲ, ಸಚಿವರು, ಶಾಸಕರು ಕೈಗೆ ಸಿಗುವುದಿಲ್ಲ ವ್ಯರ್ಥವಾಗಿ ಹಣ ಕಳೆದುಕೊಂಡು ಜನರು ಬೆಂಗಳೂರಿನಿಂದ ಮರಳುತ್ತಾರೆ.

ಅಧಿಕಾರಿಗಳ ಕೈವಾಡ? : ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳು ಬೆಂಗಳೂರು ನಗರ ಬಿಟ್ಟು ರಾಜ್ಯದ ಬೇರೆ ಕಡೆಗೆ ಬರಲು ಒಪ್ಪುವುದೇ ಇಲ್ಲ. ಬೆಳಗಾವಿಗೆ ಕಚೇರಿಗಳ ಸ್ಥಳಾಂತರವಾಗದಂತೆ ನೋಡಿಕೊಳ್ಳುವಲ್ಲಿ ಇಂತಹ ಮನೋಭಾವನೆಯ ಅಧಿಕಾರಿಗಳ ಕೈವಾಡವಿದೆ ಎಂಬುದನ್ನು ಸ್ಪಷ್ಠವಾಗಿ ಹೇಳಬಹುದು.

ಹಾಸನ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕೊಡಗು, ಉಡುಪಿ, ಮಂಗಳೂರು, ಜಿಲ್ಲೆಗಳ ಶಾಸಕರು ಬೆಂಗಳೂರಿನ ಬಗ್ಗೆ ವ್ಯಾಮೋಹ ಹೊಂದಿದ್ದಾರೆ. ಬೆಳಗಾವಿ ಕರ್ನಾಟಕದಲ್ಲಿದೆ ಎಂಬುದನ್ನು ಅವರು ಮರೆತುಬಿಡುತ್ತಾರೆ. ಕಚೇರಿ ಸ್ಥಳಾಂತರಗೊಂಡರೆ ತಾವು ಬೆಳಗಾವಿಗೆ ಹೋಗಬೇಕಾಗುತ್ತದೆ ಎಂಬ ಚಿಂತೆ ಅವರನ್ನು ಸದಾಕಾಲ ಕಾಡುತ್ತಲೇ ಇದೆ.

ಯಾವ ಸರ್ಕಾರವೂ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಕಿಂಚಿತ್ತು ಕಾರ್ಯವನ್ನು ಮಾಡಿಲ್ಲ. ಉತ್ತರ ಕರ್ನಾಟಕದ ಜನರ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಭಾವನೆಗಳನ್ನು ಕೊಲೆ ಮಾಡುವ ಕೊಲೆಗಡುಕನಂತೆ ಸರ್ಕಾರ ವರ್ತಿಸುತ್ತಲಿದೆ.

siddaramaiah

ಉತ್ತರ ಕರ್ನಾಟಕದ ಜನತೆಯ ಅಭಿಲಾಷೆಯಂತೆ ಮಹತ್ವದ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಬೇಕು. ರಾಜ್ಯದ ಅರ್ಧ ಆಡಳಿತದ ಚುಕ್ಕಾಣಿ ಕೇಂದ್ರವಾಗಿ ಸುವರ್ಣಸೌಧ ಬೆಳೆಯಬೇಕು ಈ ದಿಶೆಯಲ್ಲಿ ಸರ್ಕಾರ ತಕ್ಷಣವೇ ನಿರ್ಧಾರ ಕೈಗೊಳ್ಳದಿದ್ದರೆ ಉತ್ತರ ಕರ್ನಾಟಕದ ಜನತೆ ಪ್ರತ್ಯೇಕ ರಾಜ್ಯದ ಕೂಗಿನೊಂದಿಗೆ ಬಂಡೇಳುವ ದಿನಗಳು ದೂರವಿಲ್ಲ.

English summary
Letters to Editor : Karnataka government should shift at least six departments to the Belagavi Suvarna Vidhana Soudha and utilize the building throughout the year said Veeresh Hiremath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X