'ತಮಿಳು ಹಾಸನ್' ಕ್ಷಮೆ ಕೇಳಲೇಬೇಕು, ತಮಿಳಿಗೆ ಲಿಪಿ ಕೊಟ್ಟಿದ್ದೇ ಕನ್ನಡ: ಸರಿಯಾಗಿಯೇ ಉಗಿದ ಹಂಸಲೇಖ
ಬೆಂಗಳೂರು, ಮೇ 30: ಕನ್ನಡ ಭಾಷೆ ಕುರಿತು ವಿವಾದಾತ್ಮಕವಾಗಿ ಮಾತನಾಡಿದ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರ ಆಕ್ರೋಶ ಮುಂದುವರಿದಿದೆ. ದಿನದಿಂದ ದಿನಕ್ಕೆ ಕನ್ನಡಿಗರ ಭುಗಿಲೇಳುತ್ತಿದ್ದಾರೆ. ಫಿಲ್ಮ್ ಚೇಂಬರ್ ಸಹ ಕ್ಷಮೆ ಕೇಳುವಂತೆ ಕಮಲ್ ಹಾಸನ್‌ಗೆ ಗಡುವು ನೀಡಿದೆ. ಇದೇ ವೇಳೆ ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ನಯವಾಗಿ ಕಮಲ್ ಹಾಸನ್‌ಗೆ ಉಗಿದು ಬುದ್ಧಿ ಹೇಳಿದ್ದಾರೆ. ಕ್ಷಮಾ ಹಾಸನ್ ಆಗುವಂತೆ ಸಲಹೆ ನೀಡಿದ್ದಾರೆ. ಜೊತೆಗೆ ಕನ್ನಡದ ಕುರಿತು ಮಹತ್ವದ ಮಾತುಗಳನ್ನಾಗಿದ್ದಾರೆ.
ನಟ ಕಮಲ್ ಹಾಸನ್ ಹೊಸ ಸಿನಿಮಾ ಕಾರ್ಯಕ್ರಮದಲ್ಲಿ ಕನ್ನಡ ಹುಟ್ಟಿದ್ದೆ ತಮಿಳಿನಿಂದ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಅಷ್ಟೇ ಅಲ್ಲದೇ ನಾನು ಪ್ರೀತಿಯಿಂದ ಮಾತನಾಡಿದ್ದೇನೆ. ಕ್ಷಮೆ ಕೇಳಲ್ಲ ಎಂದು ದರ್ಪ ಮೆರೆದಿದ್ದರು. ಈ ಕಾರಣದಿಂದ ಅವರ ವಿರುದ್ಧ ಆಕ್ರೋಶ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಕನ್ನಡಪರ ಹೋರಾಟಗಾರರು, ಕಲಾವಿದರು, ರಾಜಕಾರಣಿಗಳು, ರಾಜ್ಯ ಸರ್ಕಾರ ಹಾಗೂ ಫಿಲ್ಮ್ ಚೇಂಬರ್ ಸಹ ಅವರ ಹೇಳಿಕೆ ಖಂಡಿಸಿದೆ. ಇದೀಗ ಸಂಗೀತ ನಿರ್ದೇಶಕ ಹಂಸಲೇಖ ಅವರು ಖಂಡಿಸಿ ವಿಡಿಯೋ ಮಾಡಿದ್ದಾರೆ. ಅದು ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಹಂಸಲೇಖ ಅವರು, ''ಮಿಸ್ಟರ್ ತಮಿಳು ಹಾಸನ್, ನೀವು ತಮಿಳು ಹಾಸನ್ ಎಂದು ಹೆಸರು ಬದಲಾಯಿಸಿಕೊಳ್ಳಿ. ನಾವು ಕನ್ನಡಿಗರು, ಕನ್ನಡಿಗರು ಭಾಷಾ ಪ್ರಿಯರು, ಕನ್ನಡರಿಗರಿಗೆ ಭಾಷಾಂಧತೆ ನಮಗಿಲ್ಲ. ನಮ್ಮ ಕನ್ನಡ ದೇಶ ಸಾಂಸ್ಕೃತಿಕ ರಾಯಭಾರಿ ಬಸವಣ್ಣವನವರು. ಅವರು ಕೊಟ್ಟಿದ್ದು ವಚನಗಳು, ನಾವು ವಚನಗಳಿಗೆ ಯಜಮಾನರು. ವಚನಗಳು ಎಂದರೆ ಮಾತು ಸ್ವಾಮಿ. ಮಾತುಗಳನ್ನು ಎಚ್ಚರಿಕೆಯಿಂದ ಆಡಬೇಕು'' ಎಂದು ಉಗಿದಿದ್ದಾರೆ.
ತಮಿಳಿಗೆ ಲಿಪಿ ಕೊಟ್ಟದ್ದೇ ಕನ್ನಡ
ಮುಂದುವರಿದು, ''ತಮಿಳಿಗೆ ಲಿಪಿ ಕೊಟ್ಟದ್ದೇ ಕನ್ನಡ'' ಎಂದು ವಿದ್ವಾಂಸರು ಹೇಳುತ್ತಾರೆ. ಬೇಕಿದ್ದರೆ ವಿಚಾರಿಸಿ ನೋಡಿ. ನಾವು ಕಲಾವಿದರು. ತೆಂಕಣವನ್ನು ಕಟ್ಟುವ ಕನಸು ಹೊತ್ತವರು. ಎಲ್ಲರು ಒಟ್ಟಾಗಿ ಬದಬೇಕು ಎಂದು ಆಸೆಪಡುವ ಭಾರತೀಯರು. ಆದ್ದರಿಂದ ನೀವು ಕ್ಷಮೆ ಕೇಳಿ. ಕ್ಷಮೆ ಕೇಳುವುದು ತಪ್ಪಲ್ಲ. ಕೇಳಿದರೆ ನೀವು ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲವಾದರೆ ನೀವು 'ತಮಿಳು ಹಾಸನ್' ಆಗುತ್ತೀರಿ ಎಂದು ಅವರು ತಿಳಿ ಹೇಳಿದ್ದಾರೆ.
ಮೊನ್ನೆಯಷ್ಟೇ ಕನ್ನಡದ ಹಿರಿಯ ನಟ ಶ್ರೀನಾಥ್ ಅವರು ಪ್ರತಿಕ್ರಿಯಿಸಿ, ''ಕನ್ನಡ ಎಲ್ಲಿಂದ ಹುಟ್ಟಬೇಕೋ ಅಲ್ಲಿಂದ ಹುಟ್ಟಿದೆ. ಕನ್ನಡಿಗರು ಬೇರೆಯವರಿಂದ ಕನ್ನಡದ ಬಗ್ಗೆ ತಿಳಿದುಕೊಳ್ಳಬೇಕಿಲ್ಲ. ನಾನು ಎಂದು ಹೇಳಬಾರದು. ನಾವು ಎನ್ನಬೇಕು'' ಎಂದು ಅವರು ಕಮಲ್ ಹಾಸನ್‌ಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications