Munirathna naidu: ಏಡ್ಸ್ ರಕ್ತ ಇಂಜೆಕ್ಟ್ ಭಯ: ಮುನಿರತ್ನ ಮನೆ ಕಡೆ ಹೋಗದ ಜನ!
ಬಿಜೆಪಿ ಪಾಳಯದಲ್ಲಿ ಭಯಾನಕ ಪ್ಲಾನ್‌ಗಳಿಂದಲೇ ಬೆಚ್ಚಿ ಬೀಳಿಸಿದ್ದ ಮುನಿರತ್ನ ನಾಯ್ಡು. ಇದೀಗ ಆ ಕ್ಷೇತ್ರದಲ್ಲಿ ಇನ್ನೊಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದಾರೆ. ಮುನಿರತ್ನ ನಾಯ್ಡು ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ. ರಾಜಕೀಯದಲ್ಲಿ ವಿರೋಧಿಗಳನ್ನು ಮಣಿಸುವುದಕ್ಕೆ ಮುನಿರತ್ನ ನಾಯ್ಡು ಮಾಡಿದ ಪ್ಲಾನ್‌ಗಳು ಶಾಕಿಂಗ್ ಆಗಿದ್ದವು. ಮುನಿರತ್ನ ನಾಯ್ಡು ಕರ್ನಾಟಕದಲ್ಲಿ ಹೊಸ ಮಾದರಿಯ ರಾಜಕೀಯ ಷಡ್ಯಂತರವನ್ನೇ ನಡೆಸಿದ್ದರು ಅಂತ ಸುದ್ದಿಯಾಗಿತ್ತು. ಈಗ ಜನ ಕೂಡ ಗಡಗಡ ಅಂತ ನಾಡುಗುತ್ತಿದ್ದಾರಂತೆ ಅದೇಕೆ ಎನ್ನುವ ವಿವರ ಇಲ್ಲಿದೆ.
ಮುನಿರತ್ನ ನಾಯ್ಡುನ ರಾಜಕೀಯವಾಗಿ ಎದುರಿಸಲು ಬಂದವರ ಮೇಲೆ ಇಲ್ಲ ವಿರೋಧಿಗಳ ಮೇಲೆ ಹನಿಟ್ರ್ಯಾಪ್ ಹಾಗೂ ಎಚ್‌ಐವಿ ಸೋಂಕಿತರ ರಕ್ತವನ್ನು ಇಂಜೆಕ್ಟ್ ಮಾಡಲು ಮುಂದಾಗಿದ್ದ. ಅಲ್ಲದೇ ಈ ಪ್ರಕರಣದಲ್ಲಿನ ಕೆಲವು ಆರೋಪಿಗಳು ಏಡ್ಸ್ ರಕ್ತವನ್ನು ಇಂಜೆಕ್ಟ್ ಮಾಡಿರುವುದಾಗಿಯೂ ತಪ್ಪೊಪ್ಪಿಕೊಂಡಿರುವುದು ಸುದ್ದಿಯಾಗಿತ್ತು.

ಮುನಿರತ್ನ ನಾಯ್ಡು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ರಾಜರಾಜೇಶ್ವರಿ ನಗರದ ಶಾಸಕರಾಗಿದ್ದಾರೆ. ಶಾಸಕರೆಂದ ಮೇಲೆ ದಿನವೂ ನೂರಾರು ಜನ ಅವರ ಮನೆಗೆ ಬರ್ತಾರೆ. ಶಾಸಕರ ಮುಂದೆ ಬಂದು ಅವರ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಆದರೆ, ರಾಜರಾಜೇಶ್ವರಿ ನಗರದ ಜನ ಮುನಿರತ್ನ ನಾಯ್ಡು ಮನೆಗೆ ಹೋಗುವುದಕ್ಕೆ ಹೆದರಿಕೊಳ್ಳುತ್ತಿದ್ದಾರಂತೆ.
ರಾಜರಾಜೇಶ್ವರಿ ನಗರದಲ್ಲಿ ಹಲವು ಸಮಸ್ಯೆಗಳಿವೆ. ಸಾಮಾನ್ಯವಾಗಿ ಜನ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದರು. ಆದರೆ, ಈಗ ಮುನಿರತ್ನ ಮನೆ ಕಡೆ ಯಾರೂ ಹೋಗ್ತಿಲ್ಲವಂತೆ ಅಷ್ಟೇ ಅಲ್ಲ ಅವರ ಬೆಂಬಲಿಗರು ಹಾಗೂ ಬಿಜೆಪಿಯ ಕಾರ್ಯಕರ್ತರು ಸಹ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಈಚೆಗೆ ಆರ್. ಅಶೋಕ್ ಅವರೇ ಈ ಬಗ್ಗೆ ಹೇಳಿದ್ದರು.
ನಾನು ದೇಶ ಬಿಟ್ಟು ಹೋಗ್ಬಿಡೋಣ ಅಂದ್ಕೊಂಡಿದ್ದೆ ಎಂದು ಅವರು ಕೇಂದ್ರ ಸಚಿವ ವಿ. ಸೋಮಣ್ಣ ಅವರ ಬಳಿ ಹೇಳಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದಾದ ಮೇಲಂತೂ ಜನರಲ್ಲಿ ಇನ್ನೂ ಭಯ ಜಾಸ್ತಿ ಆಗಿದೆ ಎನ್ನುವುದು ಸುದ್ದಿ. ಯಾಕೆಂದರೆ, ಬಿಜೆಪಿಯ ಪ್ರಭಾವಿ ನಾಯಕನನ್ನೇ ಬಿಡಿದ ಮುನಿರತ್ನ ಅವರು ನಮ್ಮನ್ನೇನಾದರೂ ಮಾಡಿದರೆ ಹೆಂಗೆ ಎನ್ನುವ ಆತಂಕ ಜನರಲ್ಲಿ ಕಾಡ್ತಿದೆ ಅಂತ ಜನ ಮಾತಾಡ್ಕೊಂತಿದ್ದಾರೆ ಎನ್ನಲಾಗಿದೆ.
ವೇಲು ನಾಯ್ಕರ್ ಸ್ಫೋಟಕ ಹೇಳಿಕೆ
ಮುನಿರತ್ನ ನಾಯ್ಡು ಬಿಜೆಪಿ ಶಾಸಕ. ಆದರೆ, ಬಿಜೆಪಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮೇಲೆಯೇ ಮುನಿರತ್ನ & ಟೀಂ ಏಡ್ಸ್ ರಕ್ತ ಇಂಜೆಕ್ಟ್ ಮಾಡಲು ಮುಂದಾಗಿತ್ತು ಎನ್ನುವ ಸ್ಫೋಟಕ ಮಾಹಿತಿ ಈಚೆಗೆ ಬಹಿರಂಗವಾಗಿತ್ತು. 2020ರಲ್ಲಿ ಆರ್. ಅಶೋಕ್‌ಗೆ ಏಡ್ಸ್ ರಕ್ತ ಇಂಜೆಕ್ಟ್ ಮಾಡುವುದಕ್ಕೆ ಮುನಿರತ್ನ ಮುಂದಾಗಿದ್ದರು ಎಂದು ಮುನಿರತ್ನ ಅವರ ಸಹಚರ ಹಾಗೂ ಬಿಬಿಎಂಪಿಯ ಮಾಜಿ ಕೌನ್ಸಿಲರ್ ವೇಲು ನಾಯ್ಕರ್ ಅವರು ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ವೈರಲ್ ಆಗಿತ್ತು ಆರ್. ಅಶೋಕ್ ವಿಡಿಯೋ
ಇನ್ನು ಮುನಿರತ್ನ ನಾಯ್ಡು ಹಾಗೂ ಏಡ್ಸ್ ಇಂಜೆಕ್ಷನ್‌ನ ಇಂಜೆಕ್ಟ್ ಮಾಡುವ ಬಗ್ಗೆ ಆರ್. ಅಶೋಕ್ ಅವರು ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಆರ್.ಅಶೋಕ್ ಅವರು ವಿ. ಸೋಮಣ್ಣ ಅವರೊಂದಿಗೆ ಮಾತನಾಡಿದ್ದ ವಿಡಿಯೋ ಈಚೆಗೆ ವೈರಲ್ ಆಗಿತ್ತು. ನನ್ನ ವಂಶನೇ ನಿರ್ವಂಶ ಆಗೋಗ್ತಿತ್ತು ಅಂತ ಆತಂಕ ವ್ಯಕ್ತಪಡಿಸಿದ್ದ ವಿಡಿಯೋ ವೈರಲ್ ಆಗಿತ್ತು.












Click it and Unblock the Notifications