ಕೃಷ್ಣಬೈರೇಗೌಡರಿಗೆ ಬುದ್ಧಿ ಭ್ರಮಣೆಯಾಗಿದೆ ಎಂದ ಎಂಟಿಬಿ ನಾಗರಾಜ್
ಬೆಂಗಳೂರು, ಅಕ್ಟೋಬರ್ 9: ಮಾಜಿ ಸಚಿವ ಕೃಷ್ಣಬೈರೇಗೌಡರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬುಧವಾರ(ಅ.9) ಭೇಟಿ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಕಳೆದುಕೊಂಡಿದ್ದಕ್ಕೆ ಬುದ್ಧಿಭ್ರಮಣೆ ಆಗಿದೆ, ಯಾರ ಮೇಲಾದರೂ ಆರೋಪ ಮಾಡುತ್ತಾ ತಿರುಗುತ್ತಿದ್ದಾರೆ.
ನಾನು ರಾಜಕೀಯ ಜೀವನದಲ್ಲಿ ಎಲ್ಲೂ ಈ ರೀತಿ ನಾನು ಮಾತನಾಡಿಲ್ಲ, ನಾನು ಮಾತನಾಡಿರುವ ಬಗ್ಗೆ ಒಂದೇ ಒಂದು ಹೇಳಿಕೆ ದಾಖಲೆ ನೀಡಲಿ, ಕೃಷ್ಣಬೈರೇಗೌಡ ವಿರುದ್ಧ ಎಂಟಿಬಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂತೋಷ ಅವರನ್ನು ನಾನು ಭೇಟಿಯಾಗಿಲ್ಲ, ಯಾರು ಭೇಟಿ ಆದ್ರೂ ಅಂತ ಗೊತ್ತಿಲ್ಲ, ನಾನು ಮಾಧ್ಯಮದಲ್ಲಿ ನೋಡಿದ್ದೇನೆ, ನಾನು ಸಾರ್ವಜನಿಕವಾಗಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ, ಶರತ್ ಬಚ್ಚೇಗೌಡರು ಯಾವ ಪಕ್ಷದಿಂದಲೂ ನಿಂತುಕೊಳ್ಳಲಿ ಎಂದರು.
ನಾನು ಎಲ್ಲದ್ದಕ್ಕೂ ಸಿದ್ಧನಾಗಿದ್ದೇನೆ, ಗೆಲ್ಲುವ ವಿಶ್ವಾಸವಿದೆ ಮತ್ತೊಮ್ಮೆ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications