ಸಿದ್ದರಾಮಯ್ಯಗೆ ಎಂಟಿಬಿ ನಾಗರಾಜ್ ಬಹಿರಂಗ ಸವಾಲು

Recommended Video

      MBT Nagaraj has challenged to Siddaramaiah | Oneindia Kannada

      ಬೆಂಗಳೂರು, ನವೆಂಬರ್ 18: ಸಿದ್ದರಾಮಯ್ಯಗೆ ತಾಕತ್ತಿದ್ದರೆ ನನ್ನ ಜೊತೆ ಚರ್ಚೆಗೆ ಬರಲಿ ಎಂದು ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಬಿಟಿ ನಾಗರಾಜ್ ಸವಾಲೆಸಿದಿದ್ದಾರೆ.

      ಎಂಟಿಬಿ ನಾಗರಾಜ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಂತೆಯೇ ಸಿದ್ದರಾಮಯ್ಯ ಹಾಗೂ ಎಂಟಿಬಿ ನಡುವೆ ಕಿತ್ತಾಟ ಆರಂಭವಾಗಿತ್ತು. ನನ್ನ ಎದೆಯಲ್ಲಿ ಯಾವಾಗಲೂ ಸಿದ್ದರಾಮಯ್ಯ ಇದ್ದಾರೆ ಎನ್ನುತ್ತಿದ್ದ ಎಂಟಿಬಿ ಎದೆಯಲ್ಲಿ ಈಗ ನಾನಿಲ್ಲ ಯಡಿಯೂರಪ್ಪ ಇದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು.

      ನನ್ನ ಸೋಲಿಸಲು ಸಿದ್ದರಾಮಯ್ಯ ಕೈಯಲ್ಲಿ ಆಗಿಲ್ಲ. ಬದಲಾಗಿ ಅವರೇ 36 ಸಾವಿರ ಮತಗಳಿಂದ ಸೋತರು. ಬಾದಾಮಿಯಲ್ಲಿ 600 ಮತ ಕಡಿಮೆ ಆಗಿದ್ದರೆ ಅಲ್ಲೂ ಸೋಲುತ್ತಿದ್ದರು. ಕಾಂಗ್ರೆಸ್ ಮುಳುಗಿ ಹೋಗಿದೆ. ನರೇಂದ್ರ ಮೋದಿಯವರು ಪ್ರಧಾನಿ ಆಗಿರುವಷ್ಟು ವರ್ಷ ದೇಶದಲ್ಲಿ ಕಾಂಗ್ರೆಸ್ಸಿಗೆ ನೆಲೆ ಇಲ್ಲ. ಪ್ರಾದೇಶಿಕ ಪಕ್ಷಗಳಿಗೂ ನೆಲೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

      ಬಚ್ಚೇ ಗೌಡರು ಪಕ್ಷದ ಸಿಂಬಲ್ ನಿಂದ ಗೆದ್ದಿದ್ದಾರೆ. ಪಕ್ಷದಲ್ಲಿ ಮುಂದುವರಿಯಬೇಕು ಅಂದರೆ ನಮ್ಮ ಜೊತೆ ಬರುತ್ತಾರೆ. ಇಲ್ಲ ಅಂದ್ರೆ ಮುಂದೆ ಗೊತ್ತಾಗುತ್ತದೆ ಎಂದರು.

      ಸದ್ಯ ಕಣ್ಣು ನೋವಿನಿಂದ ಬಳಲುತ್ತಿರುವ ಎಂಟಿಬಿ ನಾಗರಾಜ್, ಹೊಸಕೋಟೆಯ ಜಿಇಎಫ್ ಐ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಸಿದ್ದರಾಮಯ್ಯ ನನ್ನ ಜೊತೆ ಬಹಿರಂಗ ಚರ್ಚೆ ಬರಲಿ

      ಸಿದ್ದರಾಮಯ್ಯ ನನ್ನ ಜೊತೆ ಬಹಿರಂಗ ಚರ್ಚೆ ಬರಲಿ

      ಕುರುಬ ಸಮುದಾಯಕ್ಕೆ ಅವರು ಏನೂ ಮಾಡಿಲ್ಲ. ಅಲ್ಲದೇ ಅವರೇ ಕುರುಬ ಸಮುದಾಯವನ್ನು ಹಾಳು ಮಾಡಿದ್ದಾರೆ. ಸಿದ್ದರಾಮಯ್ಯ ಯಾವ ಸೀಮೆ ನಾಯಕ..? ಎಂದು ಎಂಟಿಬಿ ಪ್ರಶ್ನಿಸಿದ್ದಾರೆ.

      ಎಲ್ಲರೂ ತನ್ನ ಕೈಕೆಳಗೆ ಇರಬೇಕು ಎಂದು ಬಯಸುವ ನಾಯಕ

      ಎಲ್ಲರೂ ತನ್ನ ಕೈಕೆಳಗೆ ಇರಬೇಕು ಎಂದು ಬಯಸುವ ನಾಯಕ

      ಅವರು ಎಲ್ಲರೂ ನನ್ನ ಕೈ ಕೆಳಗೆ ಇರಬೇಕು ಅಂತ ಬಯಸೋ ನಾಯಕರಾಗಿದ್ದಾರೆ. ತಾಕತ್ತಿದ್ದರೆ ಸಿದ್ದರಾಮಯ್ಯ ನನ್ನ ಜೊತೆ ಚರ್ಚೆಗೆ ಮುಂದಾಗಲಿ ನಾನು ಉತ್ತರ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

      ಕುರುಬ ಸಮುದಾಯ ಹಾಳು ಮಾಡಿದ್ದೇ ಸಿದ್ದರಾಮಯ್ಯ

      ಕುರುಬ ಸಮುದಾಯ ಹಾಳು ಮಾಡಿದ್ದೇ ಸಿದ್ದರಾಮಯ್ಯ

      ನಮ್ಮ ಸಮುದಾಯವನ್ನ ಹಾಳು ಮಾಡಿದ್ದೆ ಸಿದ್ದರಾಮಯ್ಯ. ಎಲ್ಲರೂ ನನ್ನ ಕೈ ಕೆಳಗೆ ಇರಬೇಕು, ಎರಡನೇ ಹಂತದ ನಾಯಕರಾಗೆ ಇರಬೇಕು ಅಂತ ನಮ್ಮನ್ನ ತುಳಿದರು. 5 ವರ್ಷ ಮುಖ್ಯಮಂತ್ರಿ ಆದರು. ಸಮುದಾಯಕ್ಕೆ ಒಂದು ಮೆಡಿಕಲ್ ಕಾಲೇಜು ಮಾಡಿಕೊಡಲಿಲ್ಲ ಎಂದು ಕಿಡಿಕಾರಿದರು.

      ಒಬ್ಬ ಕುರುಬರನ್ನೂ ಸಚಿವರನ್ನಾಗಿ ಮಾಡಿಲ್ಲ

      ಒಬ್ಬ ಕುರುಬರನ್ನೂ ಸಚಿವರನ್ನಾಗಿ ಮಾಡಿಲ್ಲ

      5 ವರ್ಷ ಮುಖ್ಯಮಂತ್ರಿ ಆಗಿ ಒಬ್ಬನೇ ಒಬ್ಬ ಕುರುಬ ಸಮುದಾಯದವರನ್ನ ಸಚಿವರನ್ನಾಗಿ ಮಾಡಲಿಲ್ಲ. ದೇವೇಗೌಡರು ಸಿಎಂ ಆಗಿದ್ದಾಗ 6 ಮಂದಿ ಒಕ್ಕಲಿಗರು ಸಚಿವರಾಗಿದ್ದರು. ಎಸ್.ಎಂ ಕೃಷ್ಣ ಸರ್ಕಾರದಲ್ಲಿ ಎಂಟು ಜನ ಒಕ್ಕಲಿಗರು ಸಚಿವರಾದರು. ವೀರೆಂದ್ರ ಪಾಟೀಲ್ 5 ಜನ ಲಿಂಗಾಯತರನ್ನ ಸಚಿವರನ್ನಾಗಿ ಮಾಡಿದ್ರು ಇವರೇನು ಮಾಡಿದ್ದರು ಎಂದು ಮರು ಪ್ರಶ್ನೆ ಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+