ಸಿದ್ದರಾಮಯ್ಯ ಮಗನ ಸಾವು: ಎಂಟಿಬಿಗೆ ತಿರುಗೇಟು ಕೊಟ್ಟ ಬೈರತಿ ಸುರೇಶ್

Recommended Video

      ರಾಕೇಶ್ ಸಾವಿನ ರಹಸ್ಯ ಹೇಳಿದ MTB..! | MTB Nagaraj | Oneindia Kannada

      ಬೆಂಗಳೂರು, ಸೆಪ್ಟೆಂಬರ್ 23: ಸಿದ್ದರಾಮಯ್ಯ ಮಗನ ಸಾವಿನ ಕುರಿತು ಅನರ್ಹ ಶಾಸಕ ಎಂಟಿಬಿ ನಾಗರಾಜ್ ನೀಡಿದ್ದ ಹೇಳಿಕೆಗೆ ಶಾಸಕ ಬೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.

      ರಾಕೇಶ್ ಸಾವನ್ನಪ್ಪಲು ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಕಾರಣ ಎಂದು ಎಂಟಿಬಿ ನಾಗರಾಜ್ ಆರೋಪಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಭೈರತಿ ಎಂಟಿಬಿ ನಾಗರಾಜ್ ಅವರಿಗೆ ಅವರ ಸಂಸಾರ ಬಿಟ್ಟರೆ, ಇನ್ಯಾರೂ ಕಣ್ಣಿಗೆ ಕಾಣಿಸಲ್ಲ. ರಾಕೇಶ್, ಕುಡಿದು ಸತ್ರು ಎಂದು ಎಲ್ಲಿದೆ ರಿಪೋರ್ಟ್? ಅವರು ನೈತಿಕತೆ ಇಲ್ಲದ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.

      ಇನ್ನು ನೂರು ವರ್ಷ ಬಾಳು ಬದುಕಬೇಕಾಗಿದ್ದ ರಾಕೇಶ್ ನನ್ನು ಹಾಳು ಮಾಡಿದ್ದೇ ಭೈರತಿ ಸುರೇಶ್ ಎಂದು ಎಂಟಿಬಿ ಕಿಡಿ ಕಾರಿದ್ದರು. ರಾಕೇಶ್ ನನ್ನು ದಿನಾ ಕುಡಿಸಿ ಕುಡಿಸಿ ಸುರೇಶ್, ರಾಕೇಶ್ ಸಾವಿಗೆ ಕಾರಣನಾಗಿದ್ದಾನೆ ಎನ್ನುವ ಗಂಭೀರ ಆರೋಪವನ್ನು ಎಂಟಿಬಿ ಮಾಡಿದ್ದರು.

      ರಾಕೇಶ್ ಕುಡಿದು ಸತ್ತಿದ್ದಾರೆ ಎಂದು ರಿಪೋರ್ಟ್‌ನಲ್ಲಿ ಎಲ್ಲಿದೆ?

      ರಾಕೇಶ್ ಕುಡಿದು ಸತ್ತಿದ್ದಾರೆ ಎಂದು ರಿಪೋರ್ಟ್‌ನಲ್ಲಿ ಎಲ್ಲಿದೆ?

      ರಾಕೇಶ್, ಕುಡಿದು ಸತ್ತರು ಎಂದು ಎಲ್ಲಿದೆ ರಿಪೋರ್ಟ್ ಎಂದು ಪ್ರಶ್ನಿಸುವ ಮೂಲಕ ಶಾಸಕ ಬೈರತಿ ಸುರೇಶ್ ಅವರು ಅನರ್ಹ ಶಾಸಕ ಎಂಟಿಬಿ ನಾಗರಾಜು ಅವರಿಗೆ ತಿರುಗೇಟು ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಸಾವಿಗೆ ಬೈರತಿ ಸುರೇಶ್ ಕಾರಣ ಎಂಬ ಎಂಟಿಬಿ ನಾಗರಾಜು ಹೇಳಿದ್ದರು.

      ಎಂಟಿಬಿ ನಾಗರಾಜ್‌ಗೆ ಕೇವಲ ಅವರ ಕುಟುಂಬ ಮುಖ್ಯ

      ಎಂಟಿಬಿ ನಾಗರಾಜ್‌ಗೆ ಕೇವಲ ಅವರ ಕುಟುಂಬ ಮುಖ್ಯ

      ಎಂಟಿಬಿ ನಾಗರಾಜ್‌ಗೆ ಕೇವಲ ಅವರ ಕುಟುಂಬ ಮುಖ್ಯ. ಆದರೆ ಸಿದ್ದರಾಮಯ್ಯ ಆ ರೀತಿ ಅಲ್ಲ ಅಹಿಂದ ವರ್ಗದಿಂದ ಎಲ್ಲರನ್ನು ಸಿದ್ದರಾಮಯ್ಯ ಪೋಷಿಸುತ್ತಿದ್ದಾರೆ. ಎಂಟಿಬಿ ನಾಗರಾಜ್‌ಗೆ ಸೋಲಿನ ಭಯ ಕಾಡುತ್ತಿದೆ. ಆದ್ದರಿಂದ ಈ ರೀತಿ ಬಾಲಿಶವಾದ ಹೇಳಿಕೆ ಕೊಡುತ್ತಿದ್ದಾರೆ. ಸಣ್ಣ ಮಕ್ಕಳು ಕೂಡ ಕೊಡದಂತಹ ಹೇಳಿಕೆಗಳನ್ನು ಎಂಟಿಬಿ ನಾಗರಾಜ್ ಕೊಡುತ್ತಿದ್ದಾರೆ. ಅವರಿಗೆ ನಮ್ಮ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ಮಾಡಿದರು.

      ರಾಜಕೀಯಕ್ಕೆ ಬಂದು 8 ವರ್ಷ ಆಯ್ತು

      ರಾಜಕೀಯಕ್ಕೆ ಬಂದು 8 ವರ್ಷ ಆಯ್ತು

      ಇದೇ ವೇಳೆ ಬೈರತಿ ಸುರೇಶ್ ಬಚ್ಚಾ ಎಂದು ಹೇಳಿದ್ದ ಎಂಟಿಬಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಬೈರತಿ, ನಾನು ರಾಜಕೀಯಕ್ಕೆ ಬಂದು 8 ವರ್ಷ ಆದಮೇಲೆಯೂ ನನ್ನ ಬಚ್ಚಾ ಎಂದು ಕರೆದರೆ ಏನ್ ಹೇಳಲಿ. ಅವರು ಹುಟ್ಟಿದ ತಕ್ಷಣ ಶಾಸಕರಾಗಿದ್ರಾ? ನಿನ್ನೆ ತನಕ ಯಾವುದೇ ಅಸಮಾಧಾನ ನನ್ನ ಮೇಲೆ ಇರಲಿಲ್ಲ. ಇದ್ದಕ್ಕಿದ್ದಂತೆ ನನ್ನ ಮೇಲೆ ಈಗ ಅಸಮಾಧಾನ ಶುರುವಾಗಿದೆ. ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದರೆ ಆರೋಪ ಮಾಡೋದಾ ಎಂದು ಪ್ರಶ್ನಿಸಿದರು.

      ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿ ಮನೆ ಸೇರಿದ್ದಾರೆ

      ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿ ಮನೆ ಸೇರಿದ್ದಾರೆ

      ಕಾಂಗ್ರೆಸ್ಸಿನಿಂದ ಗೆದ್ದು, ಇವರು ಈಗ ಬಿಜೆಪಿ ಮನೆ ಸೇರಿದ್ದಾರೆ. ಆದರೆ ಬೇರೆಯವರು ಯಾವ ಪಕ್ಷದಿಂದ ಬಂದರು ಎಂದು ಹೇಳೋಕೆ ಏನು ನೈತಿಕತೆ ಇದೆ ಅವರಿಗೆ. ಎಂಟಿಬಿ ಸಂಸ್ಕಾರ ಬಿಟ್ಟು ಮಾತನಾಡುತ್ತಾರೆ. ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾನು ಪಕ್ಷದ ರಾಜಕಾರಣ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+