ಕೋವಿಡ್ ರೋಗಿಗಳಿಗೆ ರಾಮಯ್ಯ ಆಸ್ಪತ್ರೆಯಲ್ಲಿ 500 ಬೆಡ್

ಬೆಂಗಳೂರು, ಜುಲೈ 27 : ಬೆಂಗಳೂರು ನಗರದಲ್ಲಿ ಕೋವಿಡ್ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ನಗರದ ದೊಡ್ಡ ಖಾಸಗಿ ಆಸ್ಪತ್ರೆಯಾದ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ 500 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಾಗಿಡಲಾಗಿದೆ.

ಶನಿವಾರ ಉಪ ಮುಖ್ಯಮಂತ್ರಿ ಮತ್ತು ಮಲ್ಲೇಶ್ವರ ಕ್ಷೇತ್ರದ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ಈ ಕುರಿತು ಆಸ್ಪತ್ರೆ ಭರವಸೆ ನೀಡಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವರು, ಕೋವಿಡ್ ರೋಗಿಗಳ ವಾರ್ಡ್‌ಗಳನ್ನು ವೀಕ್ಷಣೆ ಮಾಡಿದರು.

ಆಸ್ಪತ್ರೆಯ ಸಿಇಒ ಶ್ರೀನಿವಾಸಮೂರ್ತಿ ಅವರು ಈ ಕುರಿತು ಮಾಹಿತಿ ನೀಡಿದರು, "ಆಸ್ಪತ್ರೆಯಲ್ಲಿ 500 ಬೆಡ್‌ಗಳನ್ನು ಮೀಸಲಿಡಲಾಗಿದೆ. ಇವುಗಳಲ್ಲಿ 340 ಬೆಡ್‌ಗಳು ಈಗ ಭರ್ತಿಯಾಗಿವೆ" ಎಂದು ಉಪ ಮುಖ್ಯಮಂತ್ರಿಗಳಿಗೆ ತಿಳಿಸಿದರು.

MS Ramaiah Hospital To Reserve 500 Beds For Covid Patients

ಅಶ್ವತ್ಥ ನಾರಾಯಣ ಅವರು 10 ವೆಂಟಿಲೇಟರ್ ಮತ್ತು 10 ಡಯಾಲಿಸಿಸ್ ಯಂತ್ರಗಳನ್ನು ಆಸ್ಪತ್ರೆಗೆ ಒದಗಿಸುವ ಭರವಸೆ ನೀಡಿದರು. ಕೆಲವು ಔಷಧಗಳ ಅಗತ್ಯವೂ ಇದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಉಪ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿತು.

ಬೆಂಗಳೂರು ನಗರದಲ್ಲಿ 1950 ಕೊರೊನಾ ವೈರಸ್ ಸೋಂಕಿನ ಪ್ರಕರಣ ಭಾನುವಾರ ದಾಖಲಾಗಿದೆ. ನಗರದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 33,155ಕ್ಕೆ ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+