ಸಿಎಂ ಸಾಹೇಬ್ರೇ ಭ್ರಷ್ಟಾಚಾರಕ್ಕೆ ಮೊದ್ಲು ಕಡಿವಾಣ ಹಾಕ್ರೀ!

ಬೆಂಗಳೂರು, ಫೆಬ್ರವರಿ, 09: ರಾಜ್ಯದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು ಸರ್ಕಾರ ಕೈ ಕಟ್ಟಿ ಕುಳಿತುಕೊಂಡಿದೆ ಎಂದು ಆಮ್ ಆದ್ಮಿ ಪಾರ್ಟಿ ಗಂಭೀರ ಆರೋಪ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಮ್ ಆದ್ಮಿ ಪಾರ್ಟಿ ರಾಜ್ಯ ಸಹ-ಸಂಚಾಲಕರು ಹಾಗೂ ಮಾಧ್ಯಮ ಉಸ್ತುವಾರಿ, ಶಿವಕುಮಾರ್ ಚೆಂಗಲರಾಯ, ದೇಶದಲ್ಲೆಡೆ ಸಶಕ್ತ ಲೋಕಪಾಲ ಮಸೂದೆ ಜಾರಿಯಾಗಬೇಕು ಎಂದು ಒತ್ತಾಯ ಮಾಡಿದರು.[ಆಮ್ ಆದ್ಮಿ ಪಾರ್ಟಿ ಲಂಚ ಮುಕ್ತ ಅಭಿಯಾನ]

Mr. CM, Please curb widespread corruption in Karnataka!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಸಂಪೂರ್ಣ ಹದಗೆಟ್ಟಿದ್ದು ಜನರು ಪರಿತಪಿಸುವಂತಾಗಿದೆ. ಲೋಕಾಯುಕ್ತವಿಲ್ಲದ ಸಂಧರ್ಭದಲ್ಲಿ ಜನಸಾಮಾನ್ಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಲಂಚಮುಕ್ತ ಅಭಿಯಾನವನ್ನು ಆರಂಭಿಸಿತ್ತು. ಈವರೆಗೂ ಸಾವಿರಾರು ದೂರು ಹಾಗು ಕರೆಗಳು ನಮ್ಮ ಸಹಾಯವಾಣಿಗೆ ಬರುತ್ತಿದ್ದು ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ಕಾರ್ಯಕರ್ತರು ಅವುಗಳಲ್ಲಿ ಕೆಲವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ಕಗ್ಗದಾಸಪುರ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಂತೆ ವಿಜ್ಞಾನ ನಗರ ನಿವಾಸಿಯಾದ ಜೋ ಕ್ರಾಸ್ಟಾ ಎಂಬುವವರ ತಂದೆ ನಮಗೆ ಟಿ.ಡಿ.ರಂಗನಾಥ್ ಎಂಬ ಬಿಬಿಎಂಪಿ ಕಂದಾಯ ಅಧಿಕಾರಿ ಖಾತೆ ವರ್ಗಾವಣೆಗೆ ಲಂಚ ಕೇಳುತ್ತಿದ್ದಾರೆ ಎಂಬ ದೂರನ್ನು ನೀಡಿದ್ದರು. ಇದನ್ನು ಆಧರಿಸಿ ರಂಗನಾಥ್ ಅವರಿಗೆ ಕರೆ ಮಾಡಿ ಕ್ರಾಸ್ಟಾರವರ ಅರ್ಜಿಯನ್ನು ತುರ್ತಾಗಿ ವಿಲೇವಾರಿ ಮಾಡುವಂತೆ ವಿನಂತಿ ಹಾಗೂ ಒತ್ತಡವನ್ನು ಹೇರಲಾಗಿತ್ತು.[ಕೇಜ್ರಿವಾಲ್‌ಗೆ 364 ರು. ಡಿಡಿ ಬಂದದ್ದಾದರೂ ಯಾಕೆ?]

Mr. CM, Please curb widespread corruption in Karnataka!

ಆದರೆ ಕಾಲಹರಣ ಮಾಡಲಾಗುತ್ತಿದೆಯೇ ವಿನಃ ಕೆಲಸ ಮಾಡಿಕೊಡಲಾಗಿಲ್ಲ. ಈ ನಡುವೆ ಜೋ ಕ್ರಸ್ಟಾರವರ ತಂದೆ ಡಿಸೆಂಬರ್ ನಲ್ಲಿ ವಿಧಿವಶರಾಗುತ್ತಾರೆ. ಮಗ ಖಾತೆವರ್ಗಾವಣೆಗೆ ತೆರಳಿದರೆ 8 ಸಾವಿರ ರೂಪಾಯಿ ಲಂಚ ನೀಡಿವಂತೆ ಕೇಳಲಾಗುತ್ತಿದೆ. ಇದಾದ ಮೇಲೆ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ರಾಜ್ಯ ಸಹ-ಸಂಚಾಲಕರಾದ ರವಿಕೃಷ್ಣಾರೆಡ್ಡಿಯವರ ನೇತ್ರತ್ವದಲ್ಲಿ ಕುಟುಕು ಕಾರ್ಯಚರಣೆ ನಡೆಸಿ ಅಧಿಕಾರಿ ಲಂಚ ಸ್ವೀಕರಿಸುವ ವೇಳೆ ರೆಡ್ -ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ.

ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ಸರ್ಕಾರಿ ಹಾಗೂ ಬಿಬಿಎಂಪಿ ಕಚೇರಿಗಳಲ್ಲಿ ಲಂಚ ಮುಕ್ತ ವಾತಾವರಣ ನಿರ್ಮಿಸಲು ಬೇಕಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳನ್ನು ಹೋರಾಟವನ್ನು ಉಗ್ರಗೊಳಿಸಲಾಗುವುದು ಎಂದು ಶಿವಕುಮಾರ್ ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+