Get Updates
Get notified of breaking news, exclusive insights, and must-see stories!

ಬನ್ನೇರುಘಟ್ಟ ಉದ್ಯಾನ ಉಳಿವಿಗೆ ಸಂಸದ ರಾಜೀವ್ ಕೇಂದ್ರಕ್ಕೆ ಮೊರೆ

ಬೆಂಗಳೂರು, ಸೆ.26: ಕರ್ನಾಟಕದ ರಾಜಧಾನಿ ಬೆಂಗಳೂರಿನ ಉಸಿರಾಗಿರುವ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನ್ನು ಅಕ್ರಮ ಗಣಿಗಾರಿಕೆ ಆಪೋಷಣೆ ತೆಗೆದುಕೊಳ್ಳುತ್ತಿದ್ದು, ಉದ್ಯಾನವನ್ನು ರಕ್ಷಿಸಲು ಪರಿಶೀಲನಾ ಸಮಿತಿ ರಚಿಸಬೇಕೆಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪರಿಸರ ಸಚಿವ ಹರ್ಷವರ್ಧನ್ ಅವರಿಗೆ ಪತ್ರ ಬರೆದಿರುವ ರಾಜೀವ್ ಚಂದ್ರಶೇಖರ್ ಒಂದು ವೇಳೆ ಅಕ್ರಮ ಗಣಿಗಾರಿಕೆಯನ್ನು ತಡೆಯದಿದ್ದರೆ ಮುಂದೊಂದು ದಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಲಿದ್ದಾರೆ.

ರಾಜ್ಯ ಸರ್ಕಾರ ಜೂನ್ 15, 2016 ರಂದು ಪ್ರಕಟಿಸಿದ ಕರಡು ಅಧಿಸೂಚನೆಯ ಪ್ರಕಾರ 268.96 ಚ.ಕಿ.ಮೀ. ರಷ್ಟಿದ್ದ ಪರಿಸರ ಸೂಕ್ಷ್ಮ ವಲಯವನ್ನು ರಾಜ್ಯ ಸರ್ಕಾರವು 181.57 ಚ.ಕಿ.ಮೀ ಗೆ ಕಡಿಮೆ ಮಾಡಲು ಯತ್ನಿಸಿತ್ತು.

MP Rajeev writes center to form supervision committee on Bannerughatta park

ಪ್ರಸ್ತುತ ಅಧಿಸೂಚನೆಗಳ ಕಾಲಾವಧಿ ಮುಗಿದಿರುವುದರಿಂದ ಕೇಂದ್ರ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಲು ನೀಡಿದ್ದ ಆದೇಶಕ್ಕೆ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆಯನ್ನು ನೀಡಿರುವುದಿಲ್ ಎಂದು ಹೇಳಿದ್ದಾರೆ.

ಯಾವುದೇ ಅಧಿಸೂಚನೆ ಜಾರಿಯಲ್ಲಿರುವುದರಿಂದ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯು ಬಫರ್ ಝೋನ್ ಆಗಿ ಪರಿವರ್ತನೆಗೊಂಡು ರಸ್ತೆ ಅಗಲೀಕರಣ, ಗಣಿಗಾರಿಕೆ ಮುಂತಾದ ನಿರ್ಬಂಧಿತ ಚಟುವಟಿಕೆಗಳಿಗೆ ಕಾರಣವಾಗಿದೆ.

ಬೆಂಗಳೂರು ಬೇಡಿಕೆಗಳೇನೇನು?

1. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ), ಬೆಂಗಳೂರು, ರವರು ಮೇ 14ರಂದು ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು(ಅರಣ್ಯ, ಪರಿಸರ ಮತ್ತು ಜೀವಿಶಾಸ್ತರ ಇಲಾಖೆ, ಬೆಂಗಳೂರು) ರವರಿಗೆ ಪತ್ರ ಬರೆದು ಶ್ರೀ ಮೈಕಲ್ ಎಫ್ ಸಲ್ಡಾನ, ನಿವೃತ್ತ ನ್ಯಾಯಾಧೀಶರ ಆಪಾದನೆಯಂತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ, ಬ್ಲಾಸ್ಟಿಂಗ್ ಮತ್ತು ಇನ್ನಿತರ ಚಟುವಟಿಕೆಗಳು ನಡೆಯುತ್ತಿದೆ ಎಂಬ ಅಂಸವು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ.

ಆದರೆ ದಿನಾಂಕ 14.06.2018 ರಂದು ಅರಣ್ಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭಾ ನಡಾವಳಿಗಳಲ್ಲಿ ಇಲ್ಲಿ ಗಣಿಗಾರಿಕಾ ಚಟುವಟಿಕೆಗಳು ನಡೆಯುತ್ತಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.

2. ಅಕ್ರಮ ಗಣಿಗಾರಿಕಾ ಮಾಫಿಯಾ ಸ್ಥಗಿತಗೊಳಿಸಿ ಸ್ಥಳೀಯ ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕಿದೆ, ದಂಡ ವಿಧಿಸುವ ಬದಲು ಒಂದು ಸಲದ ನಿರ್ದಿಷ್ಟ ಮೊತ್ತ ನಿಗದಿಪಡಿಸಲು ಗಣಿ ಮಾಫಿಯಾ ಸರ್ಕಾರದ ಮೇಲೆ ಒತ್ತಾಯ ಮಾಡುತ್ತಿದೆ. ಇದು ನಡೆದರೆ ಕಾನೂನಿಗೆ ವಿರುದ್ಧವಾಗುತ್ತದೆ. ಕಾನೂನು ಬದ್ಧ ದಂಡವನ್ನು ವಿಧಿಸಬೇಕು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಈ ವಿನಾಶವನ್ನು ತಡೆಯಲು ಕೇಂದ್ರ ಪರಿಸರ ಸಚಿವಾಲಯವು ಒಂದು ಪರಿಶೀಲನಾ ಸಮಿತಿಯನ್ನು ರಚಿಸಿ ಗಣಿಗಾರಿಕೆಯಿಂದ ಉಂಟಾಗುತ್ತಿರುವ ಹಾನಿಯನ್ನು ಅಂದಾಜಿಸಬೇಕು ಎಂದು ಪತ್ರ ಬರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+