ತಾಯಂದಿರ ಸರಣಿ ಸಾವು: ಜಿಲ್ಲಾಸ್ಪತ್ರೆಗೆ ಹೆರಿಗೆಗೆ ಬಾರದ ಬಾಣಂತಿಯರು

ಬೆಂಗಳೂರು, ಡಿಸೆಂಬರ್ 16: ಬಳ್ಳಾರಿ, ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಹೆರಿಗೆಗೆ ಬಂದ ನೂರಾರು ಬಾಣಂತಿಯರ ಸಾವಾಗಿದೆ. ಕಳಪೆ ಔಷಧಿಯಿಂದ ತಾಯಂದಿರು ಮೃತಪಟ್ಟಿದ್ದಾರೆ ಎಂಬುದು ತನಿಖೆಯಿಂದ ದೃಢವಾಗಿದೆ. ಈ ಬಗ್ಗೆ ಬಿಜೆಪಿಯು ರಾಜ್ಯ ಸರ್ಕಾರದ ಮೇಲೆ ಮುಗಿ ಬಿದಿದ್ದು, ರಾಜ್ಯದಲ್ಲಿ ಈ ವಿಷಯ ಭಾರೀ ಚರ್ಚೆ ಆಗುತ್ತಿದೆ. ಇತ್ತ ಮಹಿಳೆಯರು ಹೆರಿಗೆ ಸರ್ಕಾರ ಆಸ್ಪತ್ರೆಗೆ ಹೆರಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಳ್ಳಾರಿಯಲ್ಲಿ ಖಾಸಗಿ ಆಸ್ಪ್ರೆಯತ್ತ ಬಾಣಂತಿಯರು ಮುಖ ಮಾಡಿದ್ದಾರೆ.

ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಲು ಗರ್ಭಿಣಿ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ.

Mothers Do Not Come to Bellary District Hospital for Delivery R Ashok Lashes on Congress Govt

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಡವರಿಗೆ ಪಾಲಿಗೆ ಸಂಜೀವನಿಯಾಗಿದ್ದ ಸರ್ಕಾರಿ ಆಸ್ಪತ್ರೆಗಳು ತಮ್ಮ ಸರ್ಕಾರ ನಿರ್ಲಕ್ಷ್ಯದಿಂದ ಸಾವಿನ ಕೂಪಗಳಾಗಿವೆ. ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಇಲ್ಲದ ಮೇಲೆ ಬಡವರು ಎಲ್ಲಿಗೆ ಹೋಗಬೇಕು? ಎಂದು ಅವರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಕೇವಲ ಸರ್ಕಾರಿ ಆಸ್ಪತ್ರೆಗಳ ಮೇಲೆ ಮಾತ್ರವಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸೇರಿದಂತೆ ಇಡೀ ಕರ್ನಾಟಕ ರಾಜ್ಯ ಸರ್ಕಾರದ ಮೇಲೆಯೇ ಜನರಿಗೆ ಭರವಸೆ ಇಲ್ಲದಂತಾಗಿದೆ. ಈ ಮೂಲಕ ಸರ್ಕಾರ ನಿರ್ಲಕ್ಷೆಯಿಂದ ಇಂತಹ ಘಟನೆಗಳು ಆಗಿವೆ ಎಂದು ಅವರು ದೂರಿದರು.

ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಇಳಿಕೆ

ಬಳ್ಳಾರಿ ಜಿಲ್ಲೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರು ಹೆರಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಳ್ಳಾರಿಯಲ್ಲಿ ತಾಯಂದಿರ ಸಾವಿನ ಬಳಿಕ ಹೆರಿಗೆ ಪ್ರಮಾಣ ಇಳಿಕೆ ಆಗಿದೆ. ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಯಿಂದ ತಾಯಂದಿರು, ಕುಟುಂಬಸ್ಥರು ರೋಸಿಹೋಗಿದ್ದಾರೆ. ಸರಣಿ ಸಾವುಗಳ ಬಳಿಕ ಹೆರಿಗೆಗಳ ಪ್ರಮಾಣ ಶೆಕಡಾ 50ರಷ್ಟು ಇಳಿಕೆ ಕಂಡಿದೆ. ಈ ಹಿಂದೆ 550ರಷ್ಟು ಮಾಸಿಕ ಹೆರಿಗೆಗಳು ಆಗುತ್ತಿದ್ದು, ಈಗ 300ಕ್ಕಿಂತ ಕಡಿಮೆ ಹೆರಿಗೆಗಳು ಆಗಿವೆ ಎಂದು ವರದಿ ಆಗಿದೆ.

ಬಳ್ಳಾರಿ ಜಿಲ್ಲಾಸ್ಪತ್ರೆಯು ಬಹಳಷ್ಟು ಹೆಸರಾಗಿತ್ತು. ಐಎಎಸ್, ಐಪಿಎಸ್ ಅಧಿಕಾರಿಗಳು, ನ್ಯಾಯಾಧೀಶರು ಸೇರಿದಂತೆ ವಿವಿಧ ಗಣ್ಯರ ಕುಟುಂಬಸ್ಥರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ತಾಯಂದಿರ ಸಾವು, ಆಸ್ಪತ್ರೆ ಅವ್ಯವಸ್ಥೆಗೆ ಹೆಸರಾಗಿದ್ದು, ರೋಗಿಗಳ ಸಂಖ್ಯೆ ಕಡಿಮೆ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+