ಬೆಂಗಳೂರು; ಮಗುವನ್ನು 4ನೇ ಮಹಡಿಯಿಂದ ಎಸೆದ ತಾಯಿ
ಬೆಂಗಳೂರು, ಆಗಸ್ಟ್ 05: ಹೆತ್ತತಾಯಿ ತನ್ನ ಮಗುವನ್ನು 4 ಅಂತಸ್ತಿನ ಕಟ್ಟಡದಿಂದ ಎಸೆದು ಕೊಲೆ ಮಾಡಿದ್ದಾಳೆ. ಆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟಿಸಿದ್ದಾಳೆ. ತಾಯಿ ಸುಷ್ಮಾ ಐದು ವರ್ಷದ ಮಗುವನ್ನು ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಷ್ಮಾಳನ್ನು ಸಂಪಗಿ ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಸಂಪಗಿರಾಮನಗರದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಕಿರಣ್ ಮತ್ತು ಸುಷ್ಮಾ ದಂಪತಿ ವಾಸವಾಗಿದ್ದರು. ಸುಮಾರು 6 ವರುಷದ ದ್ವಿತಿ ಮತ್ತು ಕಿರಣ್ ತಾಯಿಯು ಮನೆಯಲ್ಲಿ ಒಟ್ಟಿಗಿದ್ದರು. ದ್ವಿತಿಗೆ ಮಾತು ಬರುತ್ತಿರಲಿಲ್ಲ. ಇದರಿಂದ ಸುಷ್ಮಾ ಬೆಸತ್ತಿದ್ದಳು ಎಂಬ ಮಾಹಿತಿ ಇದೆ.
ಮಗುವನ್ನು ಆಟವಾಡಿಸಿಕೊಂಡು ಬರುವುದಾಗಿ ಹೇಳಿ ಕರೆದುಕೊಂಡು ಹೋದ ಸುಷ್ಮಾ ಮೊದಲು ದ್ವಿತಿ ಕೈಹಿಡಿದು ವಾಕ್ ಮಾಡಿಸುತ್ತಾಳೆ. ಆ ಬಳಿಕ ತಾನೇ ದ್ವಿತಿಯನ್ನು ಎತ್ತಿಕೊಂಡು ಕೊಲೆಯ ಉದ್ದೇಶದಿಂದಲೇ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಎಸೆದಿದ್ದಾಳೆ.
ಮಗುವನ್ನು ಎಸೆದು ತಾನು ಆತ್ಮಹತ್ಯೆಯನ್ನು ಮಾಡಿಕೊಳ್ಳುವ ರೀತಿಯಲ್ಲಿ ಗ್ರಿಲ್ ಮೇಲೆ ಕಳಿತು ಕಾಪಾಡಿ ಎಂದು ಕೂಗಿದ್ದಾಳೆ. ಆದರೆ ಕೆಲ ನಿಮಿಷದಲ್ಲೇ ಅಕ್ಕಪಕ್ಕದ ನಿವಾಸಿಗಳು ಬಂದು ಸುಷ್ಮಾರನ್ನು ಗ್ರಿಲ್ ಮೇಲಿಂದ ಕೆಳಕ್ಕೆ ಎಳೆದು ಕಾಪಾಡಿದ್ದಾರೆ.

ತಾಯಿಯೇ ಮಗುವನ್ನು ಎಸೆಯುತ್ತಿರುವ ದೃಶ್ಯ
ಸಂಪಗಿರಾಮನಗರ ನಿವಾಸಿಯಾಗಿದ್ದ ಸುಷ್ಮಾ ತನ್ನ ಮಗುವನ್ನು ಆಟವಾಡಿಸಿಕೊಂಡು ಬರುವುದಾಗಿ ಅತ್ತೆಗೆ ಹೇಳಿ ಹೋಗಿದ್ದಳು. ನಾಲ್ಕನೇ ಮಹಡಿಯಲ್ಲಿ ಆಟವಾಡಿಸುತ್ತ ವಾಕ್ ಮಾಡಿದ್ದಾಳೆ. ಪಾಪ ಮುಗ್ದ ಕಂದಮ್ಮ ಅಮ್ಮನ ಕೈಹಿಡಿದು ವಾಕ್ ಮಾಡುತ್ತಿರುತ್ತದೆ. ಬಳಿ ದ್ವಿತಿಯನ್ನು ಎರಡು ಕೈಗಳಿಂದ ಎತ್ತಿಕೊಂಡು ಥ್ರೋ ಬಾಲ್ ಎಸೆಯುವಂತೆ ಎಸೆದಿದ್ದಾಳೆ. ಆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟಿಸಿದ್ದಾಳೆ. ಈ ವೇಳೆ ಅಕ್ಕಪಕ್ಕದ ನಿವಾಸಿಗಳು ಸುಷ್ಮಾಳನ್ನು ಕಾಪಾಡಿದ್ದಾರೆ. ಆದರೆ ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಿಮಾನ್ಸ್‌ಗೆ ಸೇರಿಸುವ ಮಾರ್ಗಮಧ್ಯೆ ಸಾವು
ನಾಲ್ಕನೇ ಮಹಡಿಯಿಂದ ಸುಷ್ಮಾ ತನ್ನ ಮಗಳು ದ್ವಿತಿಯನ್ನು ಎಸೆದಿದ್ದಳು. ನೆಲಕ್ಕೆ ಅಪ್ಪಳಿಸಿದ ಪುಟ್ಟ ಕಂದಮ್ಮ ರಕ್ತದ ಮಡುವಿನಲ್ಲಿ ವಿಲ ವಿಲ ಒದ್ದಾಡುತ್ತಿತ್ತು. ಈ ವೇಳೆ ಸ್ಥಳೀಯರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನರ್ಸಿಂಗ್ ಹೋಂ ಬಂದ ತಕ್ಷಣ ಚಿಕಿತ್ಸೆ ನೀಡಿ ಸಿಪಿಆರ್ ಮಾಡಿದ್ದ ಡಾಕ್ಟರ್ ಮೋಹಿನಿಯವರು ಕಾರ್ಡಿಯಾ ಪಲ್ಮನರಿ ರಿಟ್ರಾಕ್ಷನ್ (ಸಿಪಿಆರ್) ಮಾಡಿದ ನಂತರ ಮಗುವಿಗೆ ಉಸಿರಾಟ ಬಂದಿತ್ತು. ಸಿಪಿಆರ್ ಮಾಡಿದ ನಂತರ ಮಗುವಿಗೆ ಪಲ್ಸ್ ಮತ್ತು ಉಸಿರಾಟ ಬಂದಿತ್ತು. ತಕ್ಷಣ ಮಗುವನ್ನು ನಿಮ್ಹಾನ್ಸ್ ಶಿಫ್ಟ್ ಮಾಡಲು ಸೂಚನೆ ನೀಡಿದ್ದರು. ಆದರೆ ನಿಮ್ಹಾನ್ಸ್ ಗೆ ಕರೆದೊಯ್ಯುವ ವೇಳೆ ಮಾರ್ಗದಲ್ಲೇ ಮಗು ಮೃತಪಟ್ಟಿದೆ.

ಮಗುವನ್ನು ಈ ಹಿಂದೆಯು ದೂರ ಮಾಡಲು ಯತ್ನ
ದ್ವಿತಿ ಎಂಬ ಕಂದಮ್ಮ ಕಾಲು ಜಾರಿ ಬಿದ್ದಿದೆ ಎಂದು ಸುಷ್ಮಾ ಹೇಳಿದ್ದಳು. ಆದರೆ ಸಿಸಿಟಿವಿ ಸತ್ಯವನ್ನು ಹೇಳಿತ್ತು. ಇದರಿಂದ ಸುಷ್ಮಾ ವಿರುದ್ದ ಪತಿ ಕಿರಣ್ ದೂರನ್ನು ನೀಡಿದ್ದಾರೆ. ಉದ್ದೇಶದಿಂದಲೇ ಕೊಲೆಯನ್ನು ಮಾಡಿದ್ದಾಳೆ ಎಂದು ಹೇಳಲಾಗಿದೆ. ಆದರೆ ತಾಯಿ ಸುಷ್ಮಾ ಎಸ್‌ಆರ್ ನಗರ ಪೊಲೀಸ್ ಠಾಣೆಗೆ ಕರೆತಂದಾಗಲು ತನ್ನದೇನು ತಪ್ಪಿಲ್ಲ ಎಂದು ನಾಟಕವಾಡಿದ್ದಾಳೆ. ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ ಪೊಲೀಸರು ಸಿಸಿಟಿವಿಯನ್ನು ತೋರಿಸಿದ ಬಳಿಕ ತಪ್ಪು ಒಪ್ಪಿಕೊಂಡಿದ್ದಾಳೆ. ಇನ್ನು ಕೆಲವು ತಿಂಗಳುಗಳ ಹಿಂದೆ ಮಗುವನ್ನು ಎಲ್ಲೋ ಬಿಟ್ಟು ಸಹ ಬಂದಿರುತ್ತಾಳೆ. ಆದರೆ ದ್ವಿತಿಯನ್ನು ಹುಡುಕುವಲ್ಲಿ ತಂದೆ ಕಿರಣ್ ಯಶಸ್ವಿಗಿದ್ದರು ಎಂಬುದು ತಿಳಿದುಬಂದಿದೆ.

ತಾಯಿ ಡೆಂಟಲ್ ಶಿಕ್ಷಣ ಮುಗಿಸಿದ್ದರು
ದ್ವಿತಿಗೆ ಸುಮಾರು 5 ವರುಷವಾಗಿತ್ತು. ದ್ವಿತಿ ಬುದ್ಧಿಮಾಂಧ್ಯ ಮಗುವಾಗಿತ್ತು, ಮಾತನಾಡಲು ಸಹ ಬರುತ್ತಿರಲಿಲ್ಲ, ತಾನೂ ಡೆಂಟಲ್ ಶಿಕ್ಷಣ ಮುಗಿಸಿದ್ದರು ಸಹ ಯಾವುದೇ ರೀತಿಯ ಪ್ರಾಕ್ಟೀಸ್ ಮಾಡುತ್ತಿರಲಿಲ್ಲ. ಇದರಿಂದಾಗಿ ಮಗುವನ್ನು ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದರು ಸುಷ್ಮಾ. ಮಗುವನ್ನು ನೋಡಿಕೊಳ್ಳಲು ಆಗದೇ ತನಗೆ ಸ್ವಾತಂತ್ರ್ಯವಿಲ್ಲ ಎಂಬ ಕಾರಣಕ್ಕೆ ದ್ವಿತಿಯನ್ನು ಕೊಲ್ಲವ ಉದ್ದೇಶದಿಂದ ಎಸೆದು ಕೊಲೆಯನ್ನು ಮಾಡಿದ್ದಾಳೆ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಕೌಟುಂಬಿಕ ಕಲಹಗಳು ನಡೆಯುತ್ತಿದ್ದವೇ ಎಂಬು ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.












Click it and Unblock the Notifications