ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ತಾಯಿಯಿಂದಲೇ ಮಗನ ಕೊಲೆ- ತಾನೂ ಆತ್ಮಹತ್ಯೆ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ಜನ್ಮವನ್ನು ಕೊಟ್ಟ ತಾಯಿ ದೇವರಿಗೆ ಸಮಾನಳು. ಜನ್ಮದಾತೆಗೆ ಕಾನೂನಿನಲ್ಲಿ ಜನ್ಮ ನೀಡಲು ಅವಾಶವನ್ನು ನೀಡಿದೆಯೇ ಹೊರತು ಹೆತ್ತ ಮಕ್ಕಳನ್ನು ಕೊಲ್ಲಲು ಅವಕಾಶವಿಲ್ಲ. ಆದರೆ ತಾಯಿಯೇ ಮಗನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೊಸಗುಡ್ಡದ ಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರಿನ ಹೊಸಗುಡ್ಡದಹಳ್ಳಿ ನಿವಾಸಿಯಗಿರುವ ಸುಮಾರು 48 ವರ್ಷದ ಲಕ್ಷ್ಮಮ್ಮ ಮತ್ತು 13 ವರ್ಷದ ಮದನ್ ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.

ಬೆಂಗಳೂರಿನ ಸಂಶೋಧಕ ಡಾ.ನರಸಿಂಹಮೂರ್ತಿಗೆ ಫಾರ್ಮಾಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್ ಬೆಂಗಳೂರಿನ ಸಂಶೋಧಕ ಡಾ.ನರಸಿಂಹಮೂರ್ತಿಗೆ ಫಾರ್ಮಾಸಿಟಿಕಲ್ ಗ್ಲೋಬಲ್ ಹೆಲ್ತ್​ ಅವಾರ್ಡ್

ತಾಯಿಯೇ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಮಕ್ಕಳನ್ನು ನಿರ್ದಯವಾಗಿ ಕೊಲ್ಲುವ ತಾಯಂದಿರು ಮಾನಸಿಕ ಖಿನ್ನತೆಯಿಂದಲೋ ಜೀವನದ ಒತ್ತಡದ ಕಾರಣಕ್ಕಾಗಿಯೋ ಅಥವಾ ತಾವು ಆತ್ಮಹತ್ಯೆಯನ್ನು ಮಾಡಿಕೊಂಡ ಬಳಿಕ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂಬ ಚಿಂತನೆಯಲ್ಲಿಯೋ ತಾವು ಸಾಯುವುದಲ್ಲದೇ ಮಕ್ಕಳನ್ನು ಕೊಲ್ಲುತ್ತಿದ್ದಾರೆ. ಇಂಥದ್ದೇ ಘಟನೆಯು ಹೊಸ ಗುಡ್ಡದ ಹಳ್ಳಿಯಲ್ಲಿ ನಡೆದಿದೆ.

ಸಾಂಸಾರಿಕವಾಗಿ ಉಂಟಾದ ಕಲಹಗಳು ಕೆಲವೊಮ್ಮೆ ಎದುರಿಸಲಾರದಷ್ಟು ಕುಬ್ಜರನ್ನಾಗಿ ಮಾಡಿಬಿಡುತ್ತದೆ. ಆದರೆ ಲಕ್ಷ್ಮಮ್ಮ ಸ್ವಂತ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರು. ಸಹೋದರನ ಕುಟುಂಬದಲ್ಲಿನ ಸಮಸ್ಯೆಗೆ ಸಹೋದರಿ ಬಲಿಯಾಗಿ ಹೋಗಿದ್ದಾಳೆ.

ಆತ್ಮಹತ್ಯೆಯ ಕಾರಣ ಬಿಚ್ಚಿಟ್ಟ ತಾಯಿ

ಆತ್ಮಹತ್ಯೆಯ ಕಾರಣ ಬಿಚ್ಚಿಟ್ಟ ತಾಯಿ

ಬೆಂಗಳೂರಿನ ಹೊಸಗುಡ್ಡದಹಳ್ಳಿ ನಿವಾಸಿಯಗಿರುವ ಸುಮಾರು 48 ವರ್ಷದ ಲಕ್ಷ್ಮಮ್ಮ ಮತ್ತು 13 ವರ್ಷದ ಮದನ್ ನೇಣಿಗೆ ಶರಣಾಗಿದ್ದರು. ಸಾಯುವ ಮುನ್ನ ಲಕ್ಷ್ಮಮ್ಮ ಆತ್ಮಹತ್ಯೆ ಮುನ್ನ ಆಡಿಯೋ ಮಾಡಿಟ್ಟಿದ್ದಾರೆ. ಲಕ್ಷ್ಮಮ್ಮ ಸಹೋದರ ಸಿದ್ದೇಗೌಡ ಮತ್ತು ರಂಜಿತ ಎಂಬುವವರಿಗೆ ಮದುವೆ ಮಾಡಲಾಗಿತ್ತು. ಆದರೆ ಸಿದ್ದೇಗೌಡ ಮತ್ತು ರಂಜಿತ ದಂಪತಿಗಳ ನಡುವೆ ಗಲಾಟೆ ನಡೆಯುತ್ತಿತ್ತು. ಈ ಸಂಬಂಧ ಕೆರಗೂಡು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದ ರಂಜಿತ. ಗಂಡ ಸಿದ್ದೇಗೌಡ ,ಲಕ್ಷ್ಮಮ್ಮ, ಆಕೆಯ ಪತಿ ಶಿವಲಿಂಗೇಗೌಡ ಸೇರಿದಂತೆ ಒಬ್ಬತ್ತು ಜನರ ಮೇಲೆ ಕೇಸ್ ದಾಖಲಾಗಿತ್ತು. ಪೊಲೀಸರು, ಕೋರ್ಟ್ ಅಂತಾ ಕಿರುಕುಳವಾಗತ್ತೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಡಿಯೋದಲ್ಲಿ ಲಕ್ಷ್ಮಮ್ಮ ತಿಳಿಸಿದ್ದಾರೆ.

ತಮ್ಮನ ಪತ್ನಿಯಿಂದ ಅನಗತ್ಯ ಕಿರುಕುಳ ಆರೋಪ

ತಮ್ಮನ ಪತ್ನಿಯಿಂದ ಅನಗತ್ಯ ಕಿರುಕುಳ ಆರೋಪ

ಲಕ್ಷ್ಮಮ್ಮ ತನ್ನ ತಮ್ಮ ನೆಮ್ಮದಿಯಾಗಿ ಜೀವನವನ್ನು ಮಾಡಲಿ ಎಂದು ಮದುವೆಯನ್ನು ಮಾಡಿದ್ದರು. ತಮ್ಮ ಸಿದ್ದೇಗೌಡನಿಗೆ ರಂಜಿತಾ ಎಂಬ ಯುವತಿಯನ್ನು ಹುಡುಕಿ ಮದುವೆ ಮಾಡಿಕೊಟ್ಟಿದ್ದರು. ಸಿದ್ದೇಗೌಡ ನನ್ನ ತಮ್ಮಆತ ಸ್ವಲ್ಪ ಪೆದ್ದ, ರಂಜಿತಾ ಚೆನ್ನಾಗಿ ನೋಡಿಕೊಳ್ತಾಳೆ ಅಂತಾ ರಂಜಿತಾಳನ್ನ ಮದ್ವೆ ಮಾಡಿಸ್ಕೊಟ್ವಿ. ಮದ್ವೆ ಟೈಮಲ್ಲಿ 50 ಸಾವಿರ ಕೊಟ್ಟು, ಚೈನು ಕೊಟ್ಟು ಮದ್ವೆ ಮಾಡಿಸಿಕೊಟ್ಟಿದ್ದರು. ಆದರೆ ಈಗ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ನನ್ನ ತಮ್ಮನಿಗೋಸ್ಕರ ನಾನು ಸಾಯ್ತಿದಿನಿ ಎಂದು ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಲಕ್ಷ್ಮಮ್ಮ ಶರಣಾಗಿದ್ದಾಳೆ.

ಪೊಲೀಸರು , ಕೋರ್ಟ್‌ ಕೇಸ್‌ಗೆ ಹೆದರಿಕೆ

ಪೊಲೀಸರು , ಕೋರ್ಟ್‌ ಕೇಸ್‌ಗೆ ಹೆದರಿಕೆ

ಲಕ್ಷಮ್ಮ ತನ್ನ ಸಹೋದರ ಚನ್ನಾಗಿರಲಿ ಎಂದು ರಂಜಿತಾರನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ರಂಜಿತಾ ಮತ್ತು ಸಿದ್ದೇಗೌಡರ ನಡುವೆ ಹೊಂದಾಣಿ ಅನ್ನೋದು ಇರಲಿಲ್ಲ. ಇದರಿಂದಾಗಿ ಕುಟುಂಬದಲ್ಲಿ ಆಗಿಂದಾಗ್ಗೆ ಕಲಹಗಳು ಉಂಟಾಗುತ್ತಿತ್ತು. ಸಿದ್ದೇಗೌಡ ಮತ್ತು ರಂಜಿತಾ ನಡುವಿನ ಕಲಹ ಹೆಚ್ಚಾ ಬಳಿಕ ರಂಜಿತ ತನ್ನ ತವರು ಮನೆಯನ್ನು ಸೇರಿಕೊಂಡಿದ್ದಳು. ಆ ಬಳಿಕ ಕೆರಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವರದಕ್ಷಿಣ ಕಿರುಕುಳ ದಾಖಲಾದ ಮೇಲೆ ಪೊಲೀಸರು ಕೇಸು ಎಂದು ತನ್ನಿಂದ ತನ್ನ ಕುಟುಂಬಕ್ಕೆ ತೊಂದರೆಯಾಗುತ್ತದೆ ಎಂದು ಹೆದರಿದ ಲಕ್ಷ್ಮಮ್ಮ ಮಗನನ್ನು ನೇಣಿಗೇರಿಸಿ ತಾನೂ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ಬಗ್ಗೆ ಪೊಲೀಸರು ಹೇಳುವುದೇನು

ಆತ್ಮಹತ್ಯೆ ಬಗ್ಗೆ ಪೊಲೀಸರು ಹೇಳುವುದೇನು

ತಾಯಿಯೇ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಕ್ಷ್ಮಮ್ಮ ಮತ್ತು ಮದನ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆಲವು ಸಾಕ್ಷ್ಯಾಧಾರಗಳು ಲಭ್ಯವಾಗಿದೆ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

English summary
The birth mother is allowed by law to give birth but not allowed to kill the born children. But the incident where the mother killed her son and committed suicide took place in a village in Hosagudda Halli, Bengaluru, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X