ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮಗಳನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆ ಯತ್ನ

|
Google Oneindia Kannada News

ಬೆಂಗಳೂರು, ಆಗಸ್ಟ್ 23: ಮುದ್ದಾದ ಮಗುವನ್ನು ನೀರಿನ ಟಬ್‌ನಲ್ಲಿ ಮುಳುಗಿಸಿ ಕೊಂದ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ವಿಭೂತಿಪುರದಲ್ಲಿ ನಡೆದಿದೆ. ಹೆಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳನ್ನು ಸಾಕಿ ಸಲಹವುದು ಹೆತ್ತವರ ಆದ್ಯ ಕರ್ತವ್ಯವಾಗಿರುತ್ತದೆ. ಮಕ್ಕಳ ತಮ್ಮ ಬಿಂದಾಸ್ ಲೈಫ್‌ಗೆ ಅಡ್ಡಿಯಾಗುತ್ತಾರೆ. ತಾವೇ ಮಕ್ಕಳಿಗೆ ಎಲ್ಲಾ ನಾನಿಲ್ಲದಿದ್ದರೇ ಮಕ್ಕಳನ್ನು ನೋಡಿಕೊಳ್ಳುವವರು ಯಾರು ಎಂಬ ಮನೋವೇತನೆ ಸಹಿಸಲಾರದ ತಾಯಿ ತಾನು ಸಾಯಿವ ಮೊದಲು ಪುಟ್ಟ ಕಂದನನ್ನು ಕೊಂದು ನಂತರ ತಾನೂ ಸಾಯುತ್ತಾರೆ ಅಥವಾ ಸಾವಿನ ಬಾಗಿಲನ್ನು ತಟ್ಟಿ ಬದುಕುಳಿದು ಬಿಡುತ್ತಾರೆ.

ಸಂಪಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ನಾಲ್ಕನೇ ಮಹಡಿಯಿಂದ ತಾಯಿಯೇ ತನ್ನ ಮಗುವನ್ನ ಬಿಸಾಕಿ ಸಾಯಿಸಿದ‌ ಪ್ರಕರಣ ಮಾಸುವ ಮುನ್ನವೇ ಮತ್ತೊಂದು‌ ದುರಂತಕ್ಕೆ ರಾಜಧಾನಿ ನಡೆದಿದೆ. ಸುಮಾರು ಮೂರೂವರೆ ವರ್ಷದ ಹೆಣ್ಣುಮಗುವನ್ನ ನೀರಿನ ಟಬ್ ನಲ್ಲಿ ಮುಳುಗಿಸಿ ಹತ್ಯೆ‌ಮಾಡಿ ತಾನು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೆಯೊಂದರಲ್ಲಿ‌‌ ಈ‌ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ 3 ವರ್ಷದ ಹೆಣ್ಣು ಮಗು ಹತ್ಯೆಯಾದರೆ ತಾಯಿ ಗಾಯತ್ರಿದೇವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ವಿಫಲ ಯತ್ನ‌ ನಡೆಸಿದ್ದಾಳೆ. ಸದ್ಯ ಮಹಿಳೆಯು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

 ತಾಯಿ ಆತ್ಮಹತ್ಯೆಯ ಹಿನ್ನೆಲೆ ಊರಿಗೆ ಹೋಗಿದ್ದ ಪತಿ

ತಾಯಿ ಆತ್ಮಹತ್ಯೆಯ ಹಿನ್ನೆಲೆ ಊರಿಗೆ ಹೋಗಿದ್ದ ಪತಿ

ವಿಭೂತಿಪುರದ ಬಾಡಿಗೆ ಮನೆಯೊಂದರಲ್ಲಿ ತಮಿಳುನಾಡು ಮೂಲದ ಗಾಯತ್ರಿದೇವಿ- ನರೇಂದ್ರನ್ ದಂಪತಿ ವಾಸವಾಗಿದ್ದರು. ಇವರ ದಾಂಪತ್ಯಕ್ಕೆ ಐದು ವರ್ಷ ತುಂಬಿತ್ತು. ಇದಕ್ಕೆ ಸಾಕ್ಷಿವೆಂಬಂತೆ ಮೂರುವರೆ ವರ್ಷದ ಸಂಯುಕ್ತಾ ಎಂಬ ಹೆಣ್ಣು ಮಗುವಿತ್ತು. ಖಾಸಗಿ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ನರೇಂದ್ರನ್ ಕಾರ್ಯನಿರ್ವಹಿಸುತ್ತಿದ್ದರೆ ಪತ್ನಿ ಗೃಹಿಣಿಯಾಗಿದ್ದಳು‌. ಕೌಟುಂಬಿಕ ಕಲಹ ಹಿನ್ನೆಲೆ ಕಳೆದ 20 ದಿನಗಳ ಹಿಂದೆ ತಮಿಳುನಾಡಿನ ಈರೋಡ್ ನಲ್ಲಿ ವಾಸವಾಗಿದ್ದ ನರೇಂದ್ರನ್ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ‌ ನಿಟ್ಟಿನಲ್ಲಿ ಊರಿಗೆ ಹೋಗಿದ್ದ ನರೇಂದ್ರನ್ ಸೋಮವಾರ ಮುಂಜಾನೆ ವಾಪಸ್ ಆದಾಗ ಶಾಕ್ ಎದುರಾಗಿತ್ತು.

 ಫ್ಯಾನಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಪತ್ನಿ

ಫ್ಯಾನಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಪತ್ನಿ

ನರೇಂದ್ರನ್ ಊರಿನಿಂದ ವಾಪಸ್‌ ಬಂದು ಮನೆ ಬಾಗಿಲು ತಟ್ಟಿದರೂ ಕದ ತೆರೆಯದ ಕಂಡು ಆತಂಕ ವ್ಯಕ್ತಪಡಿಸಿ ನರೇಂದ್ರನ್ ಬಲವಂತವಾಗಿ ಡೋರ್ ಓಪನ್ ಮಾಡಿ‌ ಒಳ ನುಗ್ಗಿದ್ದಾಗ ಅಲ್ಲೊಂದು ದೊಡ್ಡ ಆಘಾತ ಎದುರಾಗಿತ್ತು. ಮೂರುವರೆ ವರ್ಷದ ಮಗುವನ್ನು ನೀರಿನ ಬಕೆಟ್ ನಲ್ಲಿ‌ ಮುಳುಗಿಸಿ ಹತ್ಯೆ ಮಾಡಿ ಬಳಿಕ ಗಾಯಿತ್ರಿದೇವಿ ಫ್ಯಾನಿಗೆ ನೇಣು ಬಿಗಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ನೋಡಿದ ನರೇಂದ್ರನ್ ಆತಂಕದಿಂದಲೇ‌ ಪತ್ನಿಯನ್ನು ಕೆಳಗಿಳಿಸಿದಾಗ ಉಸಿರಾಡುತ್ತಿರುವುದನ್ನು ಗಮನಿಸಿದ್ದಾನೆ.‌ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಾಯತ್ರಿದೇವಿಯನ್ನ ಐಸಿಯುನಲ್ಲಿ ಇರಿಸಿ ವೈದ್ಯರು ಚಿಕಿತ್ಸೆ ನೀಡುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ‌.

 ತಾನು ಸತ್ತರೆ ಮಗುವನ್ನು ನೋಡಿಕೊಳ್ಳುವರು ಯಾರು ಇಲ್ಲ

ತಾನು ಸತ್ತರೆ ಮಗುವನ್ನು ನೋಡಿಕೊಳ್ಳುವರು ಯಾರು ಇಲ್ಲ

ಮಗು ಹತ್ಯೆ ಮಾಡುವ ತಾಯಿ ಗಾಯತ್ರಿದೇವಿ ಡೆತ್ ನೋಟ್ ಬರೆದಿರುವ ಪತ್ರ ಪೊಲೀಸರಿಗೆ ಲಭ್ಯವಾಗಿದೆ‌. ತನಗೆ ಬಂದಿರುವ ಸಂಕಷ್ಟವನ್ನ‌ ನಿಭಾಯಿಸುವ ಶಕ್ತಿ ನನ್ನಲ್ಲಿ‌ ಇಲ್ಲ. ನಾನು ಸತ್ತರೆ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲ. ಹೀಗಾಗಿ ಮಗುವನ್ನ ಸಾಯಿಸಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

 ಮಕ್ಕಳನ್ನು ಕೊಲ್ಲುತ್ತಿರುವ ತಾಯಂದಿರು

ಮಕ್ಕಳನ್ನು ಕೊಲ್ಲುತ್ತಿರುವ ತಾಯಂದಿರು

ಬನಶಂಕರಿ‌‌ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿಪುರದ ನಿವಾಸವೊಂದರಲ್ಲಿ ಆಗಸ್ಟ್ 8 ರಂದು ಮನೆಯಲ್ಲಿ ತಾಯಿ-ಮಗಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷ ಸೇವಿಸಿ ದಂತ ವೈದ್ಯೆ ಶೈಮಾ (39) ಮಗಳು ಆರಾಧನ (10) ಮೃತರಾಗಿದ್ದರು.

ಅದೇ‌ ರೀತಿ ಆಗಸ್ಟ್ 4 ರಂದು ಸಂಪಂಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ವೊಂದರ ನಾಲ್ಕನೇ‌ ಮಹಡಿಯಿಂದ ತಾಯಿ ಸುಷ್ಮಾ‌ ಎಂಬಾಕೆ‌ ಐದು ವರ್ಷದ ಮಗುವನ್ನು‌ ಥ್ರೋ ಬಾಲ್‌ ನಂತೆ ಬಿಸಾಕಿ ಹತ್ಯೆ ಮಾಡಿದ್ದಳು.‌ ಮಗು ಬಿಸಾಕುವ ದೃಶ್ಯ ಸಿಸಿಟಿವಿ ಸೆರೆಯಾಗಿ ಎಲ್ಲೆಡೆ ವೈರಲ್ ಆಗಿತ್ತು. ಆದರೆ ತನಗೆ ಆತ್ಮಹತ್ಯೆ ಮಾಡಿಕೊಳ್ಳು ಧೈರ್ಯ ಸಾಲದೇ ನಾಟಕವಾಡಿದ್ದಳು. ಇನ್ನು ಹೆಚ್‌ಎಎಲ್‌ ನ ವಿಭೂತಿ ಪುರದಲ್ಲಿ ಮೂರನೇ ಘಟನೆ ನಡೆದಿದ್ದು ಮಗುವನ್ನು ಕೊಂದ ಗಾಯತ್ರಿದೇವಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

Recommended Video

ಯಡಿಯೂರಪ್ಪಗೆ ಉನ್ನತ ಹುದ್ದೆ ಸಿಕ್ಕನಂತರ ಬಿಜೆಪಿ ಪಕ್ಷದಲ್ಲೇ ಇಬ್ಬರಿಗೆ ಶುರುವಾಯಿತೇ ನಡುಕ? | Oneindia Kannada

English summary
An incident took place in Bengaluru Vibhutipur where the mother who killed her cute child by drowning her in a tub of water tried to commit suicide. A case has been registered at HAL police station, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X