ಸೊಳ್ಳೆಗಳು ಕೆಲವರನ್ನು ಮಾತ್ರ ಹುಡುಕಿ ಕಚ್ಚೋದೇಕೆ? ಈ ಬ್ಲಡ್‌ ಗ್ರೂಪ್ ವ್ಯಕ್ತಿಗಳು ಸೊಳ್ಳೆಗಳಿಗೆ ಬಲು ಇಷ್ಟ!

ಕೆಲವರಿಗೆ ಸೊಳ್ಳೆಗಳು ಹೆಚ್ಚಾಗಿ ಕಚ್ಚುತ್ತವೆ. ಎಲ್ಲರೂ ಜೊತೆಯಲ್ಲಿಯೇ ಕುಳಿತಿದ್ದರೂ ಕೆಲವರಿಗೆ ಮಾತ್ರ ಸೊಳ್ಳೆ ಕಚ್ಚುತ್ತದೆ. ಇದು ಯಾಕೆ ಎನ್ನುವ ಯೋಚನೆ ನಿಮ್ಮ ಮನಸ್ಸಿನಲ್ಲಿಯೂ ಬಂದಿರಬಹುದು. ಇದಕ್ಕೆ ಕಾರಣ ಮನುಷ್ಯರ ಮೈಯ್ಯಲ್ಲಿ ಹರಿಯುವ ರಕ್ತ. ಕೆಲವು ಬ್ಲಡ್‌ ಗ್ರೂಪ್‌ ಎಂದರೆ ಸೊಳ್ಳೆಗಳಿಗೆ ತುಂಬಾ ಇಷ್ಟವಂತೆ. ಹಾಗಾಗಿ ಆ ಬ್ಲಡ್‌ ಗ್ರೂಪ್‌ ಇರುವ ಜನರನ್ನೇ ಸೊಳ್ಳೆ ಹುಡುಕಿ ಹುಡುಕಿ ಕಚ್ಚುತ್ತದೆ ಎನ್ನಲಾಗುತ್ತದೆ. ಹಾಗಂತ ಸೊಳ್ಳೆ ಕಚ್ಚುವುದಕ್ಕೆ ರಕ್ತದ ಗ್ರೂಪ್‌ ಒಂದೇ ಮಾನದಂಡವಲ್ಲ.

ಸಂಶೋಧನೆ ಹೇಳುವುದೇನು?

O ರಕ್ತದ ಗುಂಪಿನ ಜನರಿಗೆ ಸೊಳ್ಳೆಗಳು ಸ್ವಲ್ಪ ಹೆಚ್ಚು ಕಚ್ಚುತ್ತದೆ. ಸಂಶೋಧನೆಯ ಪ್ರಕಾರ, ಕೆಲವು ಸೊಳ್ಳೆ ಪ್ರಭೇದಗಳು A ಬ್ಲಡ್‌ ಗ್ರೂಪ್‌ ನವರಿಗಿಂತ O ರಕ್ತದ ಗುಂಪಿನ ಜನರತ್ತ ಹೆಚ್ಚು ಆಕರ್ಷಿತವಾಗುತ್ತದೆಯಂತೆ. ಇಲ್ಲಿ B ಬ್ಲಡ್‌ ಗ್ರೂಪ್‌ ಇರುವವರು ಮಧ್ಯದಲ್ಲಿ ಬರುತ್ತಾರೆ.

Mosquitoes Favourite Blood Group

ಸೊಳ್ಳೆಗಳು ಯಾವ ರಕ್ತದ ಪ್ರಕಾರವನ್ನು ಇಷ್ಟಪಡುತ್ತವೆ?

ಸೊಳ್ಳೆಗಳು ದೂರದಿಂದಲೇ ರಕ್ತದ ಪ್ರಕಾರವನ್ನು ಗುರುತಿಸುವುದಿಲ್ಲ. ಅವು ಜನರು ಉಸಿರಾಡಿ ಬಿಡುವ ಇಂಗಾಲದ ಡೈಆಕ್ಸೈಡ್, ದೇಹದ ಉಷ್ಣತೆ ಮತ್ತು ಚರ್ಮದಿಂದ ಬಿಡುಗಡೆಯಾಗುವ ಪರಿಮಳಗಳ ಮೂಲಕ ಯಾರಿಗೆ ಕಚ್ಚಬೇಕು ಎನ್ನುವುದನ್ನು ನಿರ್ಧಾರ ಮಾಡುತ್ತದೆ. ಇದಲ್ಲದೆ, ಚರ್ಮದ ಮೇಲ್ಮೈಯಲ್ಲಿರುವ ಹೆಚ್ಚುವರಿ ಸಂಕೇತಗಳಿಗೂ ಅವುಗಳು ಪ್ರತಿಕ್ರಿಯಿಸಬಹುದು. ಇದರಲ್ಲಿ ವ್ಯಕ್ತಿಯ ರಕ್ತದ ಗುಂಪು ಕೂಡಾ ಸೇರಿದೆ.

ಇಲ್ಲಿ ರಕ್ತದ ಮಾದರಿಯನ್ನು ಅನುಸರಿಸಿಕೊಂಡೇ ಸೊಳ್ಳೆ ಕಚ್ಚುತ್ತದೆ ಎನ್ನುವುದು ಕೂಡಾ ಸಂಪೂರ್ಣ ಸತ್ಯ ಅಲ್ಲ. ಚರ್ಮದ ಮೂಲಕ ನೈಸರ್ಗಿಕವಾಗಿ ರಕ್ತದ ಗುಂಪಿನ ಗುರುತುಗಳನ್ನು ಬಿಡುಗಡೆ ಮಾಡುವವರನ್ನು ಬ್ಲಡ್‌ ಗ್ರೂಪ್‌ ಆಧಾರದಲ್ಲಿ ಸೊಳ್ಳೆಗಳು ಗುರತಿಸಿ ಅವರ ರಕ್ತ ಹೀರುತ್ತದೆ. ಇನ್ನು ಒಂದೇ ಬ್ಲಡ್‌ ಗ್ರೂಪಿನ ಇಬ್ಬರಿಗೆ ಸೊಳ್ಳೆ ಕಡಿತದ ಅನುಭವ ಒಂದೇ ರೀತಿ ಇರಬೇಕು ಎಂದೇನಿಲ್ಲ.

ಸೊಳ್ಳೆ ಆಕರ್ಷಣೆಯನ್ನು ಹೆಚ್ಚಿಸುವ ಇತರ ಅಂಶಗಳು

1.ವಯಸ್ಕರಲ್ಲಿ ವ್ಯಾಯಾಮದ ಸಮಯದಲ್ಲಿ ಬಿಡುಗಡೆಯಾಗುವ ಹೆಚ್ಚಿನ ಇಂಗಾಲದ ಡೈಆಕ್ಸೈಡ್.

2.ಚರ್ಮದ ಉಷ್ಣತೆಯಲ್ಲಿನ ಹೆಚ್ಚಳ

3.ಲ್ಯಾಕ್ಟಿಕ್ ಆಮ್ಲ ಮತ್ತು ಅಮೋನಿಯದಂತಹ ಬೆವರಿನ ಅಂಶಗಳು

4.ಚರ್ಮದ ಮೇಲೆ ವಾಸಿಸುವ ಸಾಮಾನ್ಯ ಬ್ಯಾಕ್ಟೀರಿಯಾಗಳ ಮಿಶ್ರಣ

5.ಸೊಳ್ಳೆಗಳು ವ್ಯಕ್ತಿಯನ್ನು ನೋಡಲು ಸುಲಭವಾಗಿಸುವ ಕಪ್ಪು ಬಟ್ಟೆಗಳು

6.ಗರ್ಭಧಾರಣೆ, ಇದು ದೇಹದ ಉಷ್ಣತೆ ಮತ್ತು ಉಸಿರಾಟದ ಮಾದರಿಗಳನ್ನು ಬದಲಾಯಿಸಬಹುದು.

7.ಸೊಳ್ಳೆ ಚಟುವಟಿಕೆಯ ಹೆಚ್ಚಾಗಿರುವ ಸಮಯದಲ್ಲಿ ಹೊರಗೆ ಇರುವುದು

ಈ ಪ್ರಭಾವಗಳು ರಕ್ತದ ಪ್ರಕಾರಕ್ಕಿಂತ ಹೆಚ್ಚಾಗಿರುವುದರಿಂದ, A ಅಥವಾ B ಬ್ಲಡ್‌ ಗ್ರೂಪ್‌ ಹೊಂದಿರುವ ವ್ಯಕ್ತಿಗೆ O ಗ್ರೂಪ್‌ ಇರುವ ವ್ಯಕ್ತಿಗಿಂತ ಕಡಿಮೆ ಪ್ರಮಾಣದಲ್ಲಿ ಸೊಳ್ಳೆ ಕಚ್ಚುವುದು.

ಸೊಳ್ಳೆ ಕಚ್ಚಿದ ನಂತರ ಆಗುವ ರಿಯಾಕ್ಷನ್‌?

ಸೊಳ್ಳೆ ಕಚ್ಚಿದ ನಂತರ ತುರಿಕೆ ಕಾಣಿಸಿಕೊಳ್ಳುತ್ತದೆ, ಆ ಜಾಗದಲ್ಲಿ ಕೆಂಪು ಕಲೆ ಉಳಿದುಕೊಳ್ಳುತ್ತದೆ. ಕೆಲವು ದಿನಗಳವರೆಗೆ ಸಣ್ಣ ಉಬ್ಬು ಉಂಟಾಗಬಹುದು. ಇನ್ನು ಕೆಲವೊಮ್ಮೆ ತುಂಬಾ ಜನ ಜೊತೆಯಲ್ಲಿ ಕುಳಿತಿದ್ದರೂ ಒಬ್ಬರಿಗೆ ಮಾತ್ರ ಸೊಳ್ಳೆ ಕಚ್ಚುವುದನ್ನು ನೀವು ಗಮನಿಸಿರಬಹುದು. ಬಾಡಿ ಕೆಮೆಸ್ಟ್ರಿ, ಉಸಿರಾಟದ ಮಾದರಿಗಳು, ಚರ್ಮದ ಉಷ್ಣತೆ ಮತ್ತು ಸ್ಥಳೀಯ ಸೊಳ್ಳೆಯ ಪ್ರಭೇದಗಳು ಇದಕ್ಕೆ ಕಾರಣವಾಗಿರುತ್ತದೆ.

ಇಲ್ಲಿ ಅರ್ಥ ಮಾಡಿಕೊಳ್ಳಬೇಕಾದ ವಿಷಯ ಎಂದರೆ ಯಾರಿಗೆ ಸೊಳ್ಳೆ ಹೆಚ್ಚಿ ಕಚ್ಚುತ್ತದೆ ಅವರಿಗೆ ಅಪಾಯ ಹೆಚ್ಚು ಎಂದರ್ಥವಲ್ಲ. ಕೆಲವರಿಗೆ ಸೊಳ್ಳೆಗಳು ತುಂಬಾ ಕಚ್ಚಬಹುದು ಆದರೆ ಅವರಲ್ಲಿ ಅದರ ಪರಿಣಾಮ ಕಡಿಮೆ ಇರಬಹುದು. ಕೆಲವರಿಗೆ ಸೊಳ್ಳೆ ಅಷ್ಟೇನು ಕಚ್ಚದೆ ಹೋದರೂ ರಿಯಾಕ್ಷನ್‌ ತುಂಬಾ ಆಗಬಹುದು. ಅಂದರೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸೊಳ್ಳೆ ಕಚ್ಚಿದ ಕೂಡಲೇ ತುರಿಕೆ, ಕೆಂಪು ಕಲೆಗಳು, ಚರ್ಮ ಉಬ್ಬುವುದು, ಚರ್ಮದ ಅಲರ್ಜಿ ಹೀಗೆ ನಅನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಸೊಳ್ಳೆ ಕಚ್ಚಿದ ನಂತರ ಏನಾಗುತ್ತದೆ?

ಸೊಳ್ಳೆ ಕಡಿತದಿಂದ ಕೆಲವೊಂದು ರೋಗಲಕ್ಷಣಗಳು ಕಾಣಿಸುತ್ತದೆ. ಸೊಳ್ಳೆ ನಮ್ಮ ಚರ್ಮದ ಮೇಲೆ ಕುಳಿತು ರಕ್ತ ಹೀರುವಾಗ ಚರ್ಮಕ್ಕೆ ಲಾಲಾರಸವನ್ನು ಚುಚ್ಚುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ಆ ಲಾಲಾರಸದಲ್ಲಿರುವ ಪ್ರೋಟೀನ್‌ಗಳಿಗೆ ಪ್ರತಿಕ್ರಿಯಿಸುತ್ತದೆ. ಇದು ತುರಿಕೆ, ಉಬ್ಬುಗಳಿಗೆ ಕಾರಣವಾಗುತ್ತದೆ.

ಸೊಳ್ಳೆ ಕಡಿತದಿಂದ ಉಂಟಾಗುವ ರಿಯಾಕ್ಷನ್‌ ನಿಮಿಷಗಳಿಂದ ಗಂಟೆಗಳಲ್ಲಿ ಪ್ರಾರಂಭವಾಗುತ್ತವೆ. ಆ ಪ್ರದೇಶದಲ್ಲಿ ಸಣ್ಣ ಕೆಂಪು ಉಬ್ಬು, ತುರಿಕೆ, ಸೌಮ್ಯವಾದ ಊತ ಉಂಟಾಗಬಹುದು. ಮಕ್ಕಳಲ್ಲಿ ಮತ್ತು ವಿಶೇಷವಾಗಿ ಸೂಕ್ಷ್ಮವಾಗಿರುವ ಜನರಲ್ಲಿ, ರಿಯಾಕ್ಷನ್‌ ದೊಡ್ಡದಾಗಿರಬಹುದು. ಕೆಲವರಲ್ಲಿ ರಿಯಾಕ್ಷನ್‌ ಜನರಲ್ಲಿ ಹೆಚ್ಚು ತೀವ್ರವಾಗಿರುವುದು. ಕೆಲವರಲಿ ತುರಿಕೆ ಎಷ್ಟರ ಮಟ್ಟಿಗೆ ಕಾಣಿಸಿಕೊಳ್ಳುತ್ತದೆ ಎಂದರೆ ರಕ್ತ ಬರುವಷ್ಟು ತುರಿಸಿಕೊಳ್ಳುತ್ತಾರೆ. ಇದು ಮತ್ತೊಂದು ಸೋಂಖಿಗೆ ಕಾರಣವಾಗಬಹುದು.

ವೈದ್ಯರ ಬಳಿ ಯಾವಾಗ ಹೋಗಬೇಕು?

ಹೆಚ್ಚಿನ ಸೊಳ್ಳೆ ಕಡಿತಗಳಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವುದಿಲ್ಲ. ಆದರೆ ಕೆಲವು ಲಕ್ಷಣಗಳು ಕಂಡು ಬಂದಾಗ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತೆ. ಉಸಿರಾಟದ ತೊಂದರೆ, ತುಟಿ ಅಥವಾ ಮುಖದಲ್ಲಿನ ಊತ, ದೌರ್ಬಲ್ಯ ಕಂಡು ಬಂದಾಗ ತಕ್ಷಣ ವೈದ್ಯರ ಬಳಿ ತೆರಳಬೇಕು. ಇದು ಅಲರ್ಜಿಯ ಲಕ್ಷಣಗಳಾಗಿರಬಹುದು. ಇನ್ನು ಸೊಳ್ಳೆ ಕಚ್ಚಿದ ಜಾಗದಲ್ಲಿ ಊದಿಕೊಂಡು ಕೀವು ತುಂಬಿದರೆ ವೈದ್ಯರ ಬಳಿ ತೋರಿಸಬೇಕು. ಯಾಕೆಂದರೆ ಇದು ಚರ್ಮದ ಸೋಂಕನ್ನು ಸೂಚಿಸುತ್ತದೆ.

ಜ್ವರ, ತೀವ್ರ ತಲೆನೋವು, ಮೈ ಕೈ ನೋವು, ದದ್ದು, ಅಸಾಮಾನ್ಯ ಆಯಾಸ, ವಾಂತಿ ಲಕ್ಷಣಗಳು ಕಂಡು ಬಂದರೂ ನಿರ್ಲಕ್ಷಿಸಬಾರದು. ಇದು ಸಾಮಾನ್ಯ ರಿಯಾಕ್ಷನ್‌ನ ಲಕ್ಷಣಗಳಲ್ಲ. ಇದರ ಕಾರಣವನ್ನು ಕಂಡುಹಿಡಿಯಲು ಅಗತ್ಯ ರಕ್ತ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ. ಸಾಮಾನ್ಯ ಸೊಳ್ಳೆ ಕಡಿತಕ್ಕೆ ಸಾಮಾನ್ಯವಾಗಿ ಪರೀಕ್ಷೆ ಅಗತ್ಯವಿರುವುದಿಲ್ಲ.

ಇನ್ನು ಸೊಳ್ಳೆ ಕಚ್ಚಿರುವ ಕಾರಣದಿಂದ ತುಂಬಾ ತುರಿಕೆ ಉಂಟಾಗಿದ್ದರೆ ಸ್ವಚ್ಛವಾದ, ಕೋಲ್ಡ್ ಕಂಪ್ರೆಸ್‌ನೊಂದಿಗೆ ಆ ಜಾಗವನ್ನು ತಂಪಾಗಿಸಿ ಇಡಬಹುದು. ಹೀಗೆ ಮಾಡುವುದರಿಂದ ತುರಿಕೆ ಕಡಿಮೆಯಾಗುವುದು. ಜೊತೆಗೆ ವೈದ್ಯರು ಶಿಫಾರಸು ಮಾಡಿದ ಆ್ಯಂಟಿ ಸ್ಕ್ರಾಚ್‌ಕ್ರೀಂಗಳು ಅಥವಾ ಅಲರ್ಜಿ ಔಷಧಿಗಳನ್ನು ಬಳಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+