ಅಂಚೆಯಣ್ಣನ ಕೆಲಸಕ್ಕೆ ಈಗ್ಲೂ ಬೇಡಿಕೆ ಇದೆಯಣ್ಣಾ!

ಅಂಚೆ ಇಲಾಖೆಯ ಪೋಸ್ಟ್ ಗೆ ಕಾಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರಬಹುದು. ಆದರೆ ಅಂಚೆ ಇಲಾಖೆಯ ಪೋಸ್ಟ್ ಮನ್ ಪೋಸ್ಟ್ ಗಂತೂ ಭಾರಿ ಬೇಡಿಕೆಯಿದೆ. ( ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ )
ಏನಪ್ಪಾ ಅಂದರೆ ಅಂಚೆ ಇಲಾಖೆಗೆ ತಕ್ಷಣಕ್ಕೆ 248 ಅಂಚೆಯಣ್ಣಂದಿರು ಬೇಕಾಗಿದ್ದಾರೆ. ಓ! ಅದಾ ಹೋಗಿ ಹೋಗಿ ಈ ಕಾಲದಲ್ಲಿ ಯಾರ್ರೀ ಪೋಸ್ಟ್ ಮನ್ ಆಗಲಿಕ್ಕೆ ಇಷ್ಟ ಪಡ್ತಾರೆ ಎಂದು ಮೂಗು ಮುರಿಯಬೇಡಿ. ಏಕೆಂದರೆ 1.3 ಲಕ್ಷ ಮಂದಿ postman ಆಗೋದಿಕ್ಕೆ ನಾವ್ ರೆಡಿ ಎಂದು ಪೋಸ್ಟಿಗೆ ಅಪ್ಲೈ ಮಾಡಿದ್ದಾರೆ. ಅಂದರೆ ಒಂದು ಹುದ್ದೆಗೆ 500ಕ್ಕೂ ಹೆಚ್ಚು ಮಂದಿ.
ಅಯ್ಯೋ ಬಿಡ್ರೀ ಎಲ್ಲೋ ಗ್ರಾಮ, ಪಟ್ಟಣ ಪ್ರದೇಶಗಳಲ್ಲಿ ಜನ ಇದಕ್ಕೆ ಅಪ್ಲೈ ಮಾಡಿರಬಹುದು. ರಾಜಧಾನಿ ಬೆಂಗಳೂರಿನಲ್ಲಂತೂ ಯಾರೂ ಅಪ್ಲೈ ಮಾಡಿರೋಲ್ಲ ಎಂದು ಭಾವಿಸಿದರೆ ಮತ್ತೆ ಎಡವಿದಂತೆಯೇ. ಏಕೆಂದರೆ 40 ಸಾವಿರ ಮಂದಿ ಬೆಂಗಳೂರಿಗರು postman ಪೋಸ್ಟಿಗೆ ಅಪ್ಲೈ ಮಾಡಿ, ಕೆಲಸಕ್ಕಾಗಿ ಕಾಯುತ್ತಿದ್ದಾರೆ. ಮೈಸೂರು, ಧಾರವಾಡದಲ್ಲಿ ತಲಾ 12 ಸಾವಿರ ಮಂದಿ ಪೋಸ್ಟಿಗೆ ಅಪ್ಲೈ ಮಾಡಿದ್ದಾರೆ.
ನಾಳಿದ್ದು ಭಾನುವಾರ ಫೆ. 9ರಂದು ಹುದ್ದೆಗಾಗಿ ಲಿಖಿತ ಪರೀಕ್ಷೆ ನಡೆಯಲಿದೆ. ಒಂದು ವೇಳೆ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಲಕ್ ಚೆನ್ನಾಗಿದ್ದು, ಸೆಲೆಕ್ಟ್ ಆಗಿಬಿಟ್ಟರೆ, ನಂತರ ಮುಂದಿನ 10 ವರ್ಷಗಳಲ್ಲಿ ಮತ್ತೆ 3 ಇಲಾಖಾ ಪರೀಕ್ಷೆಗಳನ್ನೂ ಯಶಸ್ವಿಯಾಗಿ ಬರೆದರೆ Group-B officer ಸಹ ಆಗಬಹುದು. ಸೋ ಆಲ್ ದಿ ಬೆಸ್ಟ್!
Job Security: ಅಂದಹಾಗೆ, ಈ ಹಿಂದೆ postman ನೇಮಕಾತಿಯು ತಾತ್ಕಾಲಿಕವಾಗಿ ನಡೆಯುತ್ತಿತ್ತು. ಸಂಬಳವೂ ಕಡಿಮೆಯಿರುತ್ತಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಅಥವಾ pink slip ಸಾಮ್ರಾಜ್ಯದಲ್ಲಿ ಜನ ಮತ್ತೆ ಸರಕಾರದ ಕಾಯಂ ಉದ್ಯೋಗವನ್ನೇ ಬಯಸುತ್ತಿದ್ದಾರಾ?












Click it and Unblock the Notifications