ಹುತಾತ್ಮ ನಿರಂಜನ್ ಮನೆಗೆ ಬಿಬಿಎಂಪಿಯಿಂದ ಇದೆಂಥ ಗೌರವ?
ಬೆಂಗಳೂರು, ಆಗಸ್ಟ್ 11 : ಪಠಾಣ್‌ಕೋಟ್‌ನಲ್ಲಿ ಜನವರಿ 4ರಂದು ನಡೆದ ಉಗ್ರರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬೆಂಗಳೂರಿನ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ಮನೆ ರಾಜ ಕಾಲುವೆ ಒತ್ತುವರಿ ತೆರವಿನಲ್ಲಿ ಸಿಲುಕಿದ್ದು ಗೊತ್ತೆ ಇದೆ. ಮೊದಲೇ ಆತಂಕದಲ್ಲಿದ್ದ ನಿರಂಜನ್ ಕುಟುಂಬಕ್ಕೆ ಬಿಬಿಎಂಪಿ ಮತ್ತೊಂದು ಆಘಾತದ ಸುದ್ದಿಯನ್ನು ನೀಡಿದೆ.
ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯಿರುವ ದೊಡ್ಡಬೊಮ್ಮಸಂದ್ರದಲ್ಲಿರುವ ನಿರಂಜನ್ ಮನೆ ಮುಂದಿನ ಮೂರು ಪಿಲ್ಲರ್ ಗಳನ್ನು ಧ್ವಂಸ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದ್ದ ಬಿಬಿಎಂಪಿ ಹೊಸ ಸರ್ವೆ ಹೆಸರಲ್ಲಿ ಮತ್ತೊಂದು ಪಿಲ್ಲರ್ ತೆರವು ಮಾಡುತ್ತೇನೆ ಎಂದು ಹೇಳಿದೆ.[ಹುತಾತ್ಮ ಲೆ.ಕ ನಿರಂಜನ್ ಮನೆ ಒಡೆಯುವುದೆ ಬಿಬಿಎಂಪಿ?]

ಬಿಬಿಎಂಪಿ ಮೊದಲು ಹೇಳಿದ ಪ್ರಕಾರ ತೆರವಿಗೆ ಅವಕಾಶ ಮಾಡಿಕೊಟ್ಟಿದ್ದೇವು. ಈಗ ಸಪೋರ್ಟ್ ಗಾಗಿ ನೀಡಿದ್ದ ಪಿಲ್ಲರ್ ಗಳನ್ನು ಧ್ವಂಸ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೇ ಕಾಲವಕಾಶ ಸಹ ನೀಡುತ್ತಿಲ್ಲ ಎಂದು ಮನೆಯಲ್ಲಿ ವಾಸವಿದ್ದ ಶಶಾಂಕ್ ಹೇಳುತ್ತಾರೆ.[ರಾಜಕಾಲುವೆ ಒತ್ತುವರಿ ವಿವರ ಈಗ ವೆಬ್‌ಸೈಟ್‌ನಲ್ಲಿ ಲಭ್ಯ]
ಒಮ್ಮೆ ಹೀಗೆ ಹೇಳುವ ಪಾಲಿಕೆ ಮತ್ತೊಂದು ದಿನ ಬಂದು ಇನ್ನಷ್ಟು ಜಾಗ ಹೋಗುತ್ತದೆ ಎಂದು ಹೇಳುತ್ತದೆ. ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅವಕಾಶ ನೀಡುತ್ತಿಲ್ಲ. ಮನೆಗೆ ಆಧಾರ ನೀಡಲು ಬೇರೆ ಪಿಲ್ಲರ್ ನಿರ್ಮಿಸಕೊಳ್ಳುವುದಕ್ಕಾದರೂ ಬಿಬಿಎಂಪಿ ಅವಕಾಶ ನೀಡಬೇಕು ಎಂದು ಶಶಾಂಕ್ ಮನವಿ ಮಾಡುತ್ತಾರೆ. ಒಟ್ಟಿನಲ್ಲಿ ದೇಶಕ್ಕೆ ಪ್ರಾಣ ತ್ಯಾಗ ಮಾಡಿದ ಯೋಧನ ಮುಕ್ಕಾಲು ಭಾಗ ಮನೆ ರಾಜ ಕಾಲುವೆ ಹೆಸರಲ್ಲಿ ನೆಲಸಮವಾಗಲಿದೆ.
-
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಬೆಂಗಳೂರು ಉತ್ತರ: ಮಳೆಗಾಲಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ, ರಸ್ತೆ ಅಗಲೀಕರಣ, ಟಿ.ಡಿ.ಆರ್ ಬಗ್ಗೆ ಮಹತ್ವದ ಚರ್ಚೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications