• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಕ್ರಮ ಹಣ ವರ್ಗಾವಣೆ; ಮಧುಕರ್ ಅಂಗೂರ್‌ಗೆ ಇಡಿ ನೋಟಿಸ್

|

ಬೆಂಗಳೂರು, ನವೆಂಬರ್ 29: ಬೆಂಗಳೂರಿನ ಅಲಯನ್ಸ್‌ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್ ಅಂಗೂರ್‌ಗೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದೆ. ವಿಶ್ವವಿದ್ಯಾಲಯದ ಹಣವನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಆರೋಪ ಅವರ ಮೇಲಿದೆ.

ಜಾರಿ ನಿರ್ದೇಶನಾಲಯ (ಇಡಿ) ಡಿಸೆಂಬರ್‌ 2ರಂದು ವಿಚಾರಣೆಗೆ ಆಗಮಿಸುವಂತೆ ಮಧುಕರ್ ಅಂಗೂರ್‌ಗೆ ಸೂಚನೆ ನೀಡಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಹಿನ್ನಲೆಯಲ್ಲಿ ಅಕ್ಟೋಬರ್ 9ರಂದು ಇಡಿ ಮಧುಕರ್‌ ಅಂಗೂರ್‌ ವಿಚಾರಣೆ ನಡೆಸಿತ್ತು.

ಡಾ. ಅಯ್ಯಪ್ಪ ದೊರೆ ಹತ್ಯೆ; ಸುಧೀರ್ ಅಂಗೂರ್ ಬಂಧನ

ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮಧುಕರ್‌ ಅಂಗೂರ್‌ಗೆ ಸಮನ್ಸ್ ನೀಡಲಾಗಿದೆ. ಅಮೆರಿಕ ದೇಶದ ಪೌರತ್ವ ಹೊಂದಿರುವ ಅವರು, ವಿಶ್ವವಿದ್ಯಾಲಯದ ಹಣವನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಯ್ಯಪ್ಪ ದೊರೆ ಹತ್ಯೆ; 9 ಕೋಟಿ ವ್ಯವಹಾರ ಕೊಲೆಯಲ್ಲಿ ಅಂತ್ಯ!

100 ಕೋಟಿ ರೂಪಾಯಿಗಳ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿರುವ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಸಿಐಆರ್‌ ದಾಖಲಿಸಿದೆ. ಮಧುಕರ್‌ ಅಂಗೂರ್‌ ಮತ್ತು ಸಹವರ್ತಿಗಳ ಬ್ಯಾಂಕ್‌ ಖಾತೆ ವಿವರ, ಸ್ಥಿರ ಮತ್ತು ಚಿರಾಸ್ತಿ ವಿವರ, 10 ವರ್ಷಗಳ ಆದಾಯ ತೆರಿಗೆ ಪಾವತಿ ವಿವರ ಸಲ್ಲಿಸುವಂತೆಯೂ ಸೂಚಿಸಿದೆ.

ಅಲಯನ್ಸ್‌ ವಿವಿ ಮಾಜಿ ಉಪ ಕುಲಪತಿ ಅಯ್ಯಪ್ಪ ದೊರೆ ಹತ್ಯೆ

ಫೆಮಾ ಮತ್ತು ಪಿಎಂಎಲ್‌ಎ ಎರಡೂ ಕಾಯ್ದೆಯ ಅಡಿಯಲ್ಲಿ ಇಡಿ ಮಧುಕರ್ ಅಂಗೂರ್‌ ವಿಚಾರಣೆ ನಡೆಸಲಿದೆ. 2010 ರಿಂದ 2017ರ ತನಕ ಮಧುಕರ್‌ ಅಂಗೂರ್‌ ಕುಲಪತಿ ಸ್ಥಾನದಲ್ಲಿದ್ದರು. ಆಗ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪವಿದೆ.

ಮಧುಕರ್ ಅಂಗೂರ್‌ಗೆ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ. ಅವರು ಪ್ರಸ್ತುತ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ದೊಡ್ಡ ಮೊತ್ತವನ್ನು ಅವರು ಪಾವತಿಸಿದ್ದರು.

ಜಾರಿ ನಿರ್ದೇಶನಾಲಯದ ತನಿಖೆಗೆ ಸಹಕಾರ ನೀಡಿ, ಸಮನ್ಸ್‌ನಲ್ಲಿ ನೀಡಲಾದ ಸೂಚನೆಯಂತೆ ವಿಚಾರಣೆಗೆ ಆಗಮಿಸದಿದ್ದರೆ ಬಂಧಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

English summary
Enforcement directorate summons to former chancellor of Alliance University Dr. Madhukar Angur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X