ಹಸಿ ಕಸ ನಿರ್ವಹಣೆ ಉತ್ತೇಜನಕ್ಕೆ ತೆರಿಗೆ ವಿನಾಯ್ತಿಗಾಗಿ ಅಭಿಯಾನ
ಬೆಂಗಳೂರು, ಅ.3: ಬೆಂಗಳೂರು ನಗರ ಕಸ ವಿಚಾರಣೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಮಲ್ಲೇಶ್ವರ ಶಾಸಕ ಅಶ್ವತ್ಥನಾರಾಯಣ ಹಸಿ ಕಸವನ್ನು ಮನೆಯಲ್ಲೇ ಕಾಂಪೋಸ್ಟ್ ಮಾಡುವಂತಹ ನಾಗರಿಕರಿಗೆ ಘನತ್ಯಾಜ್ಯ ತೆರಿಗೆ ಸೆಸ್ ನಿಂದ ವಿನಾಯ್ತಿ ನೀಡಬೇಕೆಂಬ ಹೊಸ ಉಪಾಯ ಒಂದನ್ನು ಬಿಬಿಎಂಪಿ ಮುಂದೆ ಇರಿಸಿದ್ದಾರೆ.
ಈ ಕುರಿತು ಚೇಂಜ್ ಡಾಟ್ ಆರ್ಗ್ ವೆಬ್‌ಸೈಟ್ ಮೂಲಕ ಅಭಿಯಾನವೊಂದನ್ನು ಆರಂಭಿಸಿರುವ ಶಾಸಕ ಅಶ್ವತ್ಥನಾರಾಯಣ, ಹಸಿಕಸವನ್ನು ಮನೆಯಲ್ಲೇ ಕಾಂಪೋಸ್ಟ್ ಮಾಡಿಕೊಳ್ಳುವ ನಾಗರಿಕರಿಗೆ ಘನ್ಯತ್ಯಾಜ್ಯ ಸೆಸ್ ನಲ್ಲಿ ವಿನಾಯ್ತಿ ನೀಡಿದರೆ ಹಸಿಕಸವನ್ನು ಮನೆಯಲ್ಲೇ ಕಾಂಪೋಸ್ಟ್ ಮಾಡುವ ಮೂಲಕ ವಿಭಿನ್ನ ಬಗೆಯ ಬಳಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮನವಿ ಮಾಡಿದ್ದಾರೆ.
Petition to: @CMofKarnataka @DrParameshwara @BBMP_MAYOR
— Dr. Ashwathnarayan (@drashwathcn) October 2, 2018
As part of #SwachhataHiSeva movement and on the occasion of #SwachhBharatDiwas, petition to Waive Off ‘SWM Cess' for individual households & apartments who compost wet waste. Please Sign, RT & Share! https://t.co/aHrr8Sr9Tg
ನಗರದಲ್ಲಿ ಪ್ರತಿನಿತ್ಯ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ, ಇದಕ್ಕೆ ಉತ್ತರ ಕಂಡುಕೊಳ್ಳುವುದು ಸುಲಭವಲ್ಲ, ಮನೆಯಲ್ಲಿ ಅಪಾರ್ಟ್ ಮೆಂಟ್ ಸಮುಚ್ಛಯಗಳಲ್ಲಿ ಕಾಂಪೋಸ್ಟ್ ತಯಾರಿಸುತ್ತಿರುವವರಿಗೆ ಉತ್ತೇಜನ ನೀಡಬೇಕಾದ ಅಗತ್ಯವಿದೆ.

ಅದರ ಬದಲು ಬಿಬಿಎಂಪಿ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಿದೆ. ಕಸವನ್ನು ಪಾಲಿಕೆಗೆ ನೀಡುವವರಿಗೆ ಹಾಗೂ ಕಾಂಪೋಸ್ಟ್ ತಯಾರಿಸುವವರಿಗೆ ಒಂದೇ ಸೆಸ್ ವಿಧಿಸುವುದು ಅನ್ಯಾಯವಾಗುತ್ತದೆ ಹಾಗಾಗಿ ಕಾಂಪೋಸ್ಟ್ ಮಾಡುವವರಿಗೆ ತೆರಿಗೆಯಲ್ಲಿ ವಿನಾಯ್ತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.











Click it and Unblock the Notifications