ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕನ ನಿಗೂಢ ಸಾವು

ಬೆಂಗಳೂರು, ಮಾರ್ಚ್ 15: ಎರಡು ದಿನಗಳ ಹಿಂದೆ ಬಾಲಕ ಕಾಣೆಯಾಗಿದ್ದ ಪೋಷಕರು ಆತನ ಸ್ನೇಹಿತನ ಮನೆ, ಸಂಬಂಧಿಕರ ಮನೆ ಎಲ್ಲೆಲ್ಲೂ ಹುಡುಕಿ ಸುಸ್ತಾಗಿದ್ದರು ಆದರೆ ಮನೆಯ ಹೊರಭಾಗದಲ್ಲೇ ಆತ ಶವವಾಗಿ ಸಿಕ್ಕಿದೆ.

ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉದಯನಗರದಲ್ಲಿ ಬೆಳಕಿಗೆ ಬಂದಿದೆ.

ಕೆ.ಜಿ.ಎಫ್ ಮೂಲದ ಸುರೇಶ್(24) ಮೃತ ಯುವಕ. ಕಲೆಕ್ಟ್ ಮಾಡುತ್ತಿದ್ದ ಫೈನಾನ್ಸ್ ಹಣದ ವ್ಯವಹಾರದಲ್ಲಿ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ತನ್ನ ಮೊಬೈಲ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮನೆಯಲ್ಲಿ ಬಿಟ್ಟು ನಾಪತ್ತೆಯಾಗಿದ್ದನು.

Missing young boy found dead in next to his house

ಕಳೆದ ಒಂದೂವರೆ ವರ್ಷದಿಂದ ಉದಯನಗರ ಗಣೇಶ ದೇವಾಲಯ ಹಿಂಭಾಗದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದರು, ಆದರೆ ಗುರುವಾರ ಅಕ್ಕಪಕ್ಕದ ಮನೆಯವರಿಗೆ ಕೊಳೆತ ದೇಹದ ವಾಸನೆ ಬಂದ ಹಿನ್ನೆಲೆಯಲ್ಲಿ ಮನೆಗಳ ಓಣಿಯಲ್ಲಿ ನೋಡಿದಾಗ ಮೃತ ದೇಹ ಕಂಡುಬಂದಿದೆ.

ಈ ಬಗ್ಗೆ ಮಾಹಿತಿ ತಿಳಿದ ಮಹದೇವಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+