ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಿತ್ ಶಾ ವಿರುದ್ಧ ಅಪಪ್ರಚಾರ, ಬಿಜೆಪಿಯಿಂದ ದೂರು ದಾಖಲು

By Sachhidananda Acharya
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ನವೆಂಬರ್ 1ರಂದು ಕನ್ನಡ ಧ್ವಜದ ಬದಲು ಪಕ್ಷದ ಧ್ವಜ ಹಾರಿಸುವಂತೆ ಅಮಿತ್ ಶಾ ಕರೆ ನೀಡಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಎಂದು ದೂರಿರುವ ರಾಜ್ಯ ಬಿಜೆಪಿ ಘಟಕ ಈ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

'mybengalooru.com' ಹಾಗೂ 'namma nechchina mukhyamantri', 'ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ' ಪೇಜಿನ ಮೂಲಕ ಈ ರೀತಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಬಿಜೆಪಿ ತನ್ನ ದೂರಿನಲ್ಲಿ ತಿಳಿಸಿದೆ.

Misrepresentation against Amit Shah, Complaint filed by Karnataka BJP

ಈ ರೀತಿಯ ವೆಬ್ಸೈಟ್ ಹಾಗೂ ಫೇಸ್ಬುಕ್ ಪೇಜ್ ಗಳ ಮೂಲಕ ಅಪಪ್ರಚಾರ ನಡೆಸಲಾಗುತ್ತಿದ್ದು ಇದರ ಹಿಂದೆ ಇರುವವರನ್ನು ಬಂಧಿಸಬೇಕು. ಈ ರೀತಿಯ ಸುದ್ದಿಯಿಂದ ಬಿಜೆಪಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಮುಜುಗರವಾಗಿದೆ. ಹೀಗಾಗಿ ಈ ಸುದ್ದಿಯನ್ನು ಪ್ರಚಾರ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಸೆಕ್ಷನ್ 499ರ ಪ್ರಕಾರ ಮೊಕದ್ದಮೆ ದಾಖಲಿಸಬೇಕು ಎಂದು ರಾಜ್ಯ ಬಿಜೆಪಿ ಘಟಕ ಒತ್ತಾಯಿಸಿದೆ.

English summary
The state BJP unit lodged complaint against Facebook pages and Websites for misrepresenting BJP national president Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X