ಬೆಂಗಳೂರಿನಲ್ಲಿ 'ಸನ್ನಿ ನೈಟ್' ಹಾಟೆಸ್ಟ್ ಪಾರ್ಟಿ ರದ್ದು

ಬೆಂಗಳೂರು, ಡಿಸೆಂಬರ್ 15: ಈ ಬಾರಿಯ ನ್ಯೂ ಇಯರ್ ಪಾರ್ಟಿಯನ್ನು ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಜೊತೆ ಆಚರಿಸುತ್ತೇವೆ ಎಂದು ಡಿಸೆಂಬರ್ 31ರ ರಾತ್ರಿಗೆ ಕಾಯುತ್ತಿದ್ದ ಪಡ್ಡೆ ಹೈಕ್ಳಿಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ನಿರಾಸೆ ಮೂಡಿಸಿದ್ದಾರೆ.

ಡಿಸೆಂಬರ್ 31ರ ರಾತ್ರಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆಯಲಿರುವ 'ಸನ್ನಿ ನೈಟ್ಸ್' ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಶುಕ್ರವಾರ ನಗರ ಪೊಲೀಸ್ ಕಮಿಷನರ್ ಗೆ ನಿರ್ದೆಶನ ನೀಡಿದರು. ಹಲವರು ಕಲಾವಿದರು ಇದ್ದಾರೆ. ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಎಂದು 'ಸನ್ನಿ ನೈಟ್ಸ್' ಆಯೋಜಕರಿಗೆ ಸಲಹೆ ನೀಡಿದರು. ಸನ್ನಿ ಆಗಮನದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.

Minister Ramalinga Reddy instructs to police not allow 'Sunny-nights' in Bengaluru

ಡಿಸೆಂಬರ್ 31 ರ ಸಂಜೆ 6 ಗಂಟೆಯಿಂದಲೇ 'ನ್ಯೂ ಇಯರ್ ಪಾರ್ಟಿ' ಯನ್ನು ಮಾನ್ಯತಾ ಟೆಕ್ ಪಾರ್ಕ್ ನ ವೈಟ್ ಆರ್ಚಿಡ್ ಹಾಲ್ ನಲ್ಲಿ 'ಸನ್ನಿ ನೈಟ್ಸ್' ಇವೆಂಟ್ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿತ್ತು.

'ಸನ್ನಿ ಲಿಯೋನ್' ಕರೆಸಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಇದರಿಂದ ಕರ್ನಾಟಕ ಹಾಗೂ ಭಾರತೀಯ ಸಂಸ್ಕೃತಿಗೆ ದಕ್ಕೆ ಉಂಟಾಗುತ್ತದೆ. ಇದರಿಂದ ಸನ್ನಿ ನೈಟ್ಸ್ ನ್ನು ರದ್ದು ಮಾಡುವಂತೆ ಗೆ ಕರವೇ ಆಗ್ರಹಿಸಿತ್ತು.

ಈ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿ ಅವರು 'ಸನ್ನಿ ನೈಟ್ಸ್' ಎನ್ನುವ ಕಾರ್ಯಕ್ರಮ ರದ್ದುಗೊಳಿಸುವಂತೆ ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+