ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತೆ; ದೇಶ ಬೆಳೆಯುತ್ತೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆ; ಪಿಂಕ್ ಮೆಟ್ರೋಲೈನ್‌ಗೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಶಾಕಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಚಿವ ರಾಮಲಿಂಗಾರೆಡ್ಡಿ ಅವರು, ಗುಲಾಬಿ ಮಾರ್ಗದ ಮೆಟ್ರೋ ಕಾಮಗಾರಿಗಳ ವಿವರವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ, ಸಂಸದರು, ಸಚಿವರು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನವೆಂಬರ್ 13ರಂದು ಬೆಂಗಳೂರಿನ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ (Pink Line) 7.5 ಕಿ.ಮೀ. ಉದ್ದದ ಮೊದಲ ಕಾರ್ಯಾಚರಣಾ ವಿಭಾಗದ ಉದ್ಘಾಟನೆ ನಡೆಯುತ್ತಿರುವುದು ಸಂತಸದ ವಿಚಾರ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗವು ಬೆಂಗಳೂರು ದಕ್ಷಿಣದ ಸಾರಿಗೆ ವ್ಯವಸ್ಥೆಗೆ ಹೊಸ ವೇಗ ನೀಡಲಿದೆ. ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲಿರುವ ಈ ಯೋಜನೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

Minister Ramalinga Reddy Bengaluru Growth Will Drive Karnataka s and India s Progress

2013-14ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ನಾನು ಸಾರಿಗೆ ಸಚಿವನಾಗಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಇನ್ನೊಂದು ಮಹತ್ವದ ಸಂಗತಿಯೆಂದರೆ, 2014ರ ಜನವರಿ 30ರಂದು ಯುಪಿಎ ಸರ್ಕಾರದ ಅವಧಿಯಲ್ಲಿಯೇ ಕೇಂದ್ರ ಸಚಿವ ಸಂಪುಟವು ನಮ್ಮ ಮೆಟ್ರೋದ ಎರಡನೇ ಹಂತಕ್ಕೆ ಅನುಮೋದನೆ ನೀಡಿತು. ಗೊಟ್ಟಿಗೆರೆ-ನಾಗವಾರ ಮಾರ್ಗವೂ ಈ ಯೋಜನೆಯ ಭಾಗವಾಗಿತ್ತು. ಇದೇ ಮಾರ್ಗವು ಇಂದು ಗುಲಾಬಿ ಮಾರ್ಗವಾಗಿ ಅಭಿವೃದ್ಧಿಯಾಗುತ್ತಿದೆ.

ವಿಶ್ವ ಕನ್ನಡ ಸಮ್ಮೇಳನ;
ವಿಶ್ವ ಕನ್ನಡ ಸಮ್ಮೇಳನ;

ಅಂದರೆ, ಇಂದು ಉದ್ಘಾಟನೆಯಾಗುತ್ತಿರುವ ಗುಲಾಬಿ ಮಾರ್ಗದ ಮೂಲ ಯೋಜನೆಗೆ ಅಗತ್ಯವಾದ ಕೇಂದ್ರ ಮಟ್ಟದ ಅನುಮೋದನೆ ಯುಪಿಎ ಸರ್ಕಾರದ ಅವಧಿಯಲ್ಲಿಯೇ ದೊರೆತಿತ್ತು. ಬೆಂಗಳೂರು ಮೆಟ್ರೋ ಅಭಿವೃದ್ಧಿಗೆ ಯುಪಿಎ ಸರ್ಕಾರ ಹಾಕಿಕೊಟ್ಟ ಅಡಿಪಾಯ, ಕರ್ನಾಟಕದ ವಿವಿಧ ಸರ್ಕಾರಗಳ ನಿರಂತರ ಪ್ರಯತ್ನ ಮತ್ತು ನಂತರದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರವನ್ನು ಇತಿಹಾಸ ಮರೆಯಬಾರದು.

ಮೆಟ್ರೋ ಯೋಜನೆಗೆ ಶೇ.84 ವೆಚ್ಚ ಕರ್ನಾಟಕದ್ದೇ, ಕೇಂದ್ರದ ಪಾಲು ಶೇ.16 ಮಾತ್ರ; ಸಚಿವ ಕೃಷ್ಣಬೈರೇಗೌಡ: ತೇಜಸ್ವಿ ಸೂರ್ಯಗೆ ಮುಖಭಂಗ!
ಮೆಟ್ರೋ ಯೋಜನೆಗೆ ಶೇ.84 ವೆಚ್ಚ ಕರ್ನಾಟಕದ್ದೇ, ಕೇಂದ್ರದ ಪಾಲು ಶೇ.16 ಮಾತ್ರ; ಸಚಿವ ಕೃಷ್ಣಬೈರೇಗೌಡ: ತೇಜಸ್ವಿ ಸೂರ್ಯಗೆ ಮುಖಭಂಗ!

Bengaluru Growth: ಗುಲಾಬಿ ಮಾರ್ಗದ ವೆಚ್ಚದ ವಾಸ್ತವ ಚಿತ್ರಣ

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಒಟ್ಟು 21.26 ಕಿ.ಮೀ. ಉದ್ದದ ಗುಲಾಬಿ ಮಾರ್ಗದ ಯೋಜನೆಯ ಮೂಲ ಅಂದಾಜು ವೆಚ್ಚ ₹8,730 ಕೋಟಿಯಾಗಿತ್ತು. ನಂತರದ ಪರಿಷ್ಕೃತ ಅಂದಾಜಿನ ಪ್ರಕಾರ ವೆಚ್ಚ ₹17,346 ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು ಸುಮಾರು ₹12,000 ಕೋಟಿ. ನಮ್ಮ ಮೆಟ್ರೋದ ಮೊದಲ, ಎರಡನೇ, 2A, 2B ಹಾಗೂ ಮೂರನೇ ಹಂತಗಳ ಒಟ್ಟು ಯೋಜನಾ ವೆಚ್ಚ ಮತ್ತು ಅಂದಾಜು ವೆಚ್ಚ ₹77,891 ಕೋಟಿ.

- ಕರ್ನಾಟಕ ಸರ್ಕಾರದ ಕೊಡುಗೆ - ₹65,291 ಕೋಟಿ (ಶೇ. 83.8).

- ಕೇಂದ್ರ ಸರ್ಕಾರದ ಕೊಡುಗೆ - ₹12,600 ಕೋಟಿ (ಶೇ. 16.2).

ನಮ್ಮ ಮೆಟ್ರೋ ಕನ್ನಡಿಗರ ತೆರಿಗೆ ಹಣ, ಕರ್ನಾಟಕ ಸರ್ಕಾರದ ಆರ್ಥಿಕ ಬದ್ಧತೆ, ಬೆಂಗಳೂರಿನ ಜನರ ಕನಸು ಹಾಗೂ ಹಲವು ದಶಕಗಳ ಅಭಿವೃದ್ಧಿಯ ಪಯಣದ ಪ್ರತೀಕವಾಗಿದೆ. ಗುಲಾಬಿ ಮಾರ್ಗದ ಉದ್ಘಾಟನೆ ಬೆಂಗಳೂರಿನ ಅಭಿವೃದ್ಧಿಗೆ ಮತ್ತೊಂದು ಮೈಲಿಗಲ್ಲಾಗಲಿ. ನಮ್ಮ ಮೆಟ್ರೋ ನಿರ್ಮಾಣದಲ್ಲಿ ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರ ಕೊಡುಗೆಗೆ ತಕ್ಕ ಗೌರವ ಹಾಗೂ ಮನ್ನಣೆ ದೊರೆಯಲಿ. ಬೆಂಗಳೂರು ಬೆಳೆದರೆ ಕರ್ನಾಟಕ ಬೆಳೆಯುತ್ತದೆ. ಕರ್ನಾಟಕ ಬೆಳೆದರೆ ದೇಶ ಬೆಳೆಯುತ್ತದೆ.

ಕರ್ನಾಟಕಕ್ಕೆ ನ್ಯಾಯ ಕೇಳಿದರೆ; ಕೇಂದ್ರದಿಂದ ವಿಚಿತ್ರ ಬಹುಮಾನ ಸಿಕ್ಕಿದೆ ಎಂದ ಸಚಿವ ಕೃಷ್ಣಬೈರೇಗೌಡ
ಕರ್ನಾಟಕಕ್ಕೆ ನ್ಯಾಯ ಕೇಳಿದರೆ; ಕೇಂದ್ರದಿಂದ ವಿಚಿತ್ರ ಬಹುಮಾನ ಸಿಕ್ಕಿದೆ ಎಂದ ಸಚಿವ ಕೃಷ್ಣಬೈರೇಗೌಡ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+