ಸತ್ಯ ಹೇಳಿದ್ದಕ್ಕಾಗಿ ಕೆ.ಎನ್ ರಾಜಣ್ಣ ತಲೆದಂಡ: ಜೆಡಿಎಸ್...KN Rajanna
ಬೆಂಗಳೂರು, ಆಗಸ್ಟ್ 11: ಮಧುಗಿರಿ ಶಾಸಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದಿಢೀರ್ ರಾಜಕೀಯ ಬೆಳವಣೆಯಲ್ಲಿ ಅವರ ನಿರ್ಧಾರ ಅಚ್ಚರಿ ಮೂಡಿಸಿದೆ. ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಂಬಂಧ ಜೆಡಿಎಸ್ ಪಕ್ಷ ಪ್ರತಿಕ್ರಿಯಿಸಿ ಟ್ವಿಟ್ ಮಾಡಿದೆ. ಮತಗಳ್ಳತನ ಕುರಿತು ರಾಹುಲಾ ಗಾಂಧಿ ಅವರ ಆರೋಪ ವಿರುದ್ಧ ಸತ್ಯ ಹೇಳಿದ್ದಕ್ಕೆ ಅವರ ತಲೆದಂಡವಾಗಿದೆ ಎಂದು ತಿಳಿಸಿದೆ.
ಸತ್ಯ ಹೇಳಿ ಸಚಿವ ಸ್ಥಾನ ಕಳೆದುಕೊಂಡ ಕೆ.ಎನ್ ರಾಜಣ್ಣ ಶಿರ್ಷಿಕೆಯಡಿ ಜೆಡಿಎಸ್ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿದೆ. ಭಾರತೀಯ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭತ್ವ ಇಲ್ಲ ಎನ್ನುವುದು ಸಹಕಾರ ಸಚಿವ ರಾಜಣ್ಣ ಅವರ ರಾಜೀನಾಮೆಯಿಂದ ಜಗಜ್ಜಾಹೀರಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಾಣ ಬಿಟ್ಟಿದೆ.

ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿಯವರು ಬೆಂಗಳೂರಿನ ಮಹಾದೇವಪುರ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ ಎಂದು ಆರೋಪಿಸಿದ್ದರು. ಮತಗಳ್ಳತನ ಸುಳ್ಳು ಆರೋಪಗಳ ಬಗ್ಗೆ ಸತ್ಯವನ್ನು ಹೇಳಿದ್ದಕ್ಕಾಗಿ ಸಚಿವ ರಾಜಣ್ಣ ಅವರ ತಲೆದಂಡವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಒತ್ತಾಯದ ಮೇರೆಗೆ ರಾಜೀನಾಮೆ ನೀಡಿದ್ದಾರೆ. ಇಟಲಿ ಕಾಂಗ್ರೆಸ್ ಪಕ್ಷದಲ್ಲಿ ಗುಲಾಮಗಿರಿಗಷ್ಟೇ ಬೆಲೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಜೆಡಿಎಸ್ ಲೇವಡಿ ಮಾಡಿದೆ.
ಸೆಪ್ಟಂಬರ್ ಕ್ರಾಂತಿ, ಪಕ್ಷದ ವಿರುದ್ಧ ಹೇಳಿಕೆ
ರಾಹುಲ್ ಗಾಂಧಿಯವರು ಮತಗಳ್ಳತನ ಆರೋಪ ಮಾಡಿದ್ದರು. ಚುನಾವಣೆ ಆಯೋಗದ ವಿರುದ್ಧ ಹರಿಹಾಯ್ದುರು. ಇದೀಗ ಅವರಿಗೆ ತಮ್ಮ ಆರೋಪಗಳಿಗೆ ಸಾಕ್ಷ್ಯ, ದಾಖಲೆಗಳನ್ನು ಒದಗಿಸುವಂತೆ ಚುನಾವಣೆ ಆಯೋಗ ನೋಟಿಸ್ ನೀಡಿದೆ. ರಾಹುಲ್ ಗಾಂಧಿ ಆರೋಪಕ್ಕೆ ರಾಜಣ್ಣ ಅವರು ಮತಗಳ್ಳತನ ನಡೆದಿರುವುದು ನಿಜ. ನಾವು ಮೊದಲು ನೋಡಿಕೊಳ್ಳದೇ ಈಗ ಹೇಳುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಪಕ್ಷದ ವಿರುದ್ಧವೇ ಮಾತನಾಡಿದ್ದರು.
ಅಲ್ಲದೇ ಇತ್ತೀಚೆಗೆ ಅವರು ಸೆಪ್ಟಂಬರ್, ಇಲ್ಲವೇ ಆಕ್ಟೋಬರ್‌ನಲ್ಲಿ ಬದಲಾವಣೆ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಥಾನ ಕುರಿತು ಮಾತನಾಡಿದ್ದಾರೆ. ಕಳೆದ ಅಧಿವೇಶನದಲ್ಲಿ ಸಿಡಿ, ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ್ದರು. ಇದೆಲ್ಲ ಕಾರಣಗಳಿಂದ ಇಂದು ಅವರ ತಲೆದಂಡವಾಗಿದೆ. ಪಕ್ಷದ ವಿರುದ್ಧ ಮಾತನಾಡಿದ ಹೀಗೆ ಆಗುತ್ತದೆ ಕಾಂಗ್ರೆಸ್ ವಿರುದ್ಧ ವಿಪಕ್ಷಗಳು ದೂರಿವೆ.












Click it and Unblock the Notifications