ನಲಪಾಡ್ ಪ್ರಕರಣ: ಸಚಿವ ಎಚ್.ಸಿ.ಮಹದೇವಪ್ಪ ಪುತ್ರನ ವಿಚಾರಣೆ
ಶಾಂತಿನಗರ ಕ್ಷೇತ್ರ ಕಾಂಗ್ರೆಸ್ ಶಾಸಕ ಎನ್‌ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮತ್ತು ಸಹಚರರು ವಿದ್ವತ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಭೋಸ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು.
ಫೆಬ್ರವರಿ 17ರಂದು ನಗರದ ಫರ್ಜಿ ಕೆಫೆಯಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಆತನ ಸಹಚರರು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದರು, ಆ ವೇಳೆ ಸಚಿವ ಎಚ್.ಸಿ.ಮಹದೇವಪ್ರಸಾದ್ ಅವರ ಪುತ್ರ ಸುನೀಲ್ ಅವರು ಕೂಡಾ ಅಲ್ಲೇ ಇದ್ದರು ಎನ್ನಲಾಗಿದೆ.
ಫರ್ಜಿ ಕೆಫೆಯ ಸಿಸಿಟಿವಿ ವೀಕ್ಷಿಸಿದ ಸಿಸಿಬಿ ಪೊಲೀಸರು ಗಲಾಟೆ ಆದ ದಿನ ಸುನೀಲ್ ಅವರು ಫರ್ಜಿ ಕೆಫೆಗೆ ಬಂದಿದ್ದನ್ನು ಗಮನಿಸಿದ್ದ ಪೊಲೀಸರು ಸುನೀಲ್‌ಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು.

ಇಂದು ಸಿಸಿಬಿ ಪೊಲೀಸರ ಮುಂದೆ ಹಾಜರಾದ ಸುನೀಲ್ ಭೋಸ್ ಅವರು ಹೇಳಿಕೆ ನೀಡಿದ್ದಾರೆ. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆರ್ಜಿ ಕೆಫೆಯಲ್ಲಿ ಘಟನೆ ನಡೆದ ವೇಳೆ ನಾನು ಅಲ್ಲಿದ್ದೆ ನಿಜ. ಆದರೆ ಯಾವ ಕಾರಣಕ್ಕೆ ಜಗಳ ನಡೆಯಿತು ಎಂಬುದು ಗೊತ್ತಿಲ್ಲ, ವಿದ್ವತ್ ಹಾಗೂ ನಲಪಾಡ್ ಕೂಡಾ ನನಗೆ ವೈಯಕ್ತಿಕವಾಗಿ ಪರಿಚಯ ಇಲ್ಲ ಎಂದು ಹೇಳಿದರು.












Click it and Unblock the Notifications