ಕ್ರೂರತ್ವದ ವಿರುದ್ಧ ಸಾತ್ವಿಕ ಅಭಿಯಾನ: #BeefFest vs #MilkFest
ಬೆಂಗಳೂರು, ಜೂನ್ 6: ಕೇಂದ್ರ ಸರ್ಕಾರದ ವಿವಾದಿತ ಗೋಹತ್ಯೆ ನಿಷೇಧ ಕಾಯ್ದೆವನ್ನು ವಿರೋಧಿಸಿ ದೇಶದ ಹಲವೆಡೆ ಆರಂಭವಾಗಿದ್ದ ಬೀಫ್ ಫೆಸ್ಟ್ ಗೆ ಪ್ರತಿಯಾಗಿ ಶ್ರೀ ರಾಮಚಂದ್ರಾಪುರ ಮಠ ಮಿಲ್ಕ್ ಫೆಸ್ಟ್ ಅನ್ನು ಆರಂಭಿಸಿದೆ. ದೇಸೀ ಹಸುಗಳ ಮಹತ್ವವನ್ನು ಅರ್ಥಮಾಡಿಸುವುದಕ್ಕಾಗಿ ಆರಂಭವಾಗಿರುವ ಈ ಫೆಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ಜೂನ್ 11 ಭಾನುವಾರದಂದು ಬೆಂಗಳೂರಿನ ವಿಜಯನಗರದ ಶ್ರೀಭಾರತಿ ವಿದ್ಯಾಲಯದಲ್ಲಿ ಮಧ್ಯಾಹ್ನ 3 ಗಂಟೆಗೆ ಮಿಲ್ಕ್ ಫೆಸ್ಟ್ ನಡೆಯಲಿದೆ.
ಈ ಬಾರಿ ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದ್ದ ಸಮಯದಲ್ಲೂ ಗೋವುಗಳಿಗೆ ಮೇವು ಒದಗಿಸುವ ಸಲುವಾಗಿ ರಾಮಚಂದ್ರಾಪುರ ಮಠದಿಂದ ಆರಂಭವಾಗಿದ್ದ #GiveUpAMeal ಅಭಿಯಾನ ಲಕ್ಷಾಂತರ ಜನರನ್ನು ತಲುಪಿ ಕ್ರಾಂತಿಯನ್ನೇ ಮಾಡಿತ್ತು. ಒಂದು ಹೊತ್ತಿನ ಊಟ ಬಿಟ್ಟು ಅದರಿಂದಾಗಿ ಉಳಿಸಿದ ಹಣವನ್ನು ಪುಣ್ಯಕೋಟಿಗೆ ಮೇವು ಒದಗಿಸಲಿಕ್ಕಾಗಿ ವ್ಯಯಿಸುವ ಈ ಅಭೂತಪೂರ್ವ ಕಲ್ಪನೆಗೆ ಲಕ್ಷಾಂತರ ಜನರು ಬೆಂಬಲ ಸೂಚಿಸಿದ್ದರು. ಅದರಂತೆಯೇ ಇದೀಗ #MilkFest ಅಭಿಯಾನ ಸಹ ಆರಂಭವಾಗಿದೆ. ಈ ಹೋರಾಟಕಕೆ ಟ್ವಿಟ್ಟರ್ ಮೂಲಕವೂ ಬೆಂಬಲ ಸೂಚಿಸಬಹುದು.['ಬಿಲೀಫ್ ಫೆಸ್ಟ್' ಆಚರಿಸುವಂತೆ ಯುವ ಬ್ರಿಗೇಡ್ ಕರೆ, ಏನಿದು ಬಿಲೀಫ್ ಫೆಸ್ಟ್!]
ಗೋಹತ್ಯೆಯಂಥ ಮಹಾಪಾಪ ಮಾಡುವವರಿಗೆ ಗೋವಿನ ಮಹತ್ವವನ್ನು ಅರ್ಥಮಾಡಿಸುವ ಸಾತ್ವಿಕ ಹೋರಾಟ ಇದು.
* ಗೋವಿಗೆ ಭಾರತೀಯರ ಹೃದಯದಲ್ಲಿ ಮಹೋನ್ನತ ಸ್ಥಾನ ಏಕಿದೆ?
* ದೇಶಿ ಹಸುವಿನ ಉತ್ಪನ್ನಗಳ ಉಪಯೋಗವೇನು?
* ಗೋಮಾಂಸ ಭಕ್ಷಣೆ ಸಮಾಜದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮವೇನು?
ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಿ, ಗೋವಿನ ಬಗೆಗೆ ಪ್ರೀತಿ, ಗೌರವ ಬೆಳಸಿಕೊಳ್ಳುವುದಕ್ಕಾಗಿ ಈ ಮಿಲ್ಕ್ ಫೆಸ್ಟ್. ಇಂದು ಬೆಳಗ್ಗೆ 6.00 ಗಂಟೆಯಿಂದಲೇ ಟ್ವೀಟ್ಟರ್ ನಲ್ಲಿ ಅಭಿಯಾನ ಆರಂಭವಾಗಿದ್ದು, ಇದಕ್ಕೆ ಬೆಂಬಲ ನೀಡುವವರು #MilkFest ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಬೆಂಬಲವನ್ನು ಸೂಚಿಸಬಹುದು.[ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು]
ಈಗಾಗಲೇ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿರುವ #MilkFest ಗೆ ಬೆಂಬಲ ಸೂಚಿಸಿದ ಕೆಲವರ ಟ್ವಿಟ್ಟರ್ ಹೇಳಿಕೆಗಳು ಇಲ್ಲಿವೆ.
|
ಕೆಂಪು ಹಿಂಸೆ ಮತ್ತು ಶ್ವೇತ ಶಾಂತಿ!
| Array |
ಮತ್ತೊಂದು ಹಸಿರು ತ್ತು ಶ್ವೇತ ಕ್ರಾಂತಿ
|
ಇದು ಸಕಾಲ
ಮಿಲ್ಕ್ ಫೆಸ್ಟ್ ಆರಂಭಿಸುವುದಕ್ಕೆ ಇದು ಸಕಾಲ. ಬನ್ನಿ, ನಮ್ಮನ್ನು ಬೆಂಬಲಿಸಿ ಎಂದು ಗಿರೀಶ್ ಆಳ್ವ ಎನ್ನುವರು ಟ್ವೀಟ್ ಮಾಡಿದ್ದಾರೆ.
|
ದೇವರು ಕೊಟ್ಟ ಅಮೃತ
ದೇವರು ಕೊಟ್ಟ ಅಮೃತವನ್ನು ಕುಡಿಯುವವುದನ್ನು ಬಿಟ್ಟು ಮನುಷ್ಯ ಸೃಷ್ಟಿಸಿದ ವಿಷವನ್ನು ಸೇವಿಸುವುದು ಸರಿಯೇ? ಎಂದು ಅನುರಾಧಾ ಪಾರ್ವತಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಕ್ರೂರತ್ವಕ್ಕೆ, ಸಾತ್ವಿಕ ಹಾದಿಯಲ್ಲಿ ಉತ್ತರ
ಬೀಫ್ ಫೆಸ್ಟ್ ಎಂಬ ಕ್ರೂರ ನಡೆಗೆ, ಮಿಲ್ಕ್ ಫೆಸ್ಟ್ ಎಂಬ ಸಾತ್ವಿಕ ಹಾದಿಯಲ್ಲಿ ಪ್ರತಿಕ್ರಿಯೆ ನೀಡಲಾಗುತ್ತಿದೆ. ಬನ್ನಿ, ಬೆಂಬಲಿಸಿ ಎಂದು ಶಿಶಿರ ಎನ್ನುವವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications