• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಮೊಟ್ಟ ಮೊದಲ ಎಐ ಆಧಾರಿತ ಎಲೆಕ್ಟ್ರಿಕ್ ಸಾರಿಗೆ ಆರಂಭ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 14: ಭಾರತದ ಮೊದಲ ಎಐ- ಚಾಲಿತ ಎಲೆಕ್ಟ್ರಿಕ್ ಸಾರಿಗೆ ವೇದಿಕೆಯಾಗಿರುವ ಮೆಟ್ರೋರೈಡ್ ತನ್ನ ಸೇವೆಯನ್ನು ಇದೀಗ ಬೆಂಗಳೂರಿನ ಇಂದಿರಾನಗರದಲ್ಲಿಯೂ ಆರಂಭಿಸಿದೆ. ಇದರ ಮೂಲಕ ಪ್ರಯಾಣಿಕರು ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ತಮ್ಮ ಸ್ಥಳಗಳನ್ನು ತಲುಪಲು ಎಲೆಕ್ಟ್ರಿಕ್ ಆಟೋಗಳನ್ನು ಬಳಸಬಹುದಾಗಿದ್ದು, ಇದರ ಆರಂಭಿಕ ಪ್ರಯಾಣ ದರ 10 ರೂಪಾಯಿಗಳಿಂದ ಆರಂಭವಾಗಲಿದೆ.

ಪ್ರಸ್ತುತ ಮೆಟ್ರೋರೈಡ್ 100 ಅಡಿ ರಸ್ತೆ ಮಾರ್ಗವಾಗಿ ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಎಂಬಸಿ ಗಾಲ್ಫ್ ಲಿಂಕ್ಸ್(ಇಜಿಎಲ್) ಅನ್ನು ಸಂಪರ್ಕಿಸಲಿದೆ. ಇದರ ಮೂಲಕ ಪ್ರಯಾಣಿಕರು ತಮ್ಮ ಮೆಟ್ರೋ ಪ್ರಯಾಣವನ್ನು ಕೈಗೆಟುಕುವ ದರದಲ್ಲಿ, ತ್ವರಿತವಾಗಿ ಮತ್ತು ಕಾರ್ಬನ್ ಮುಕ್ತವಾಗಿ ಕೈಗೊಳ್ಳಲು ಸಹಕಾರಿಯಾಗಲಿದೆ.

 ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಬೆಂಗಳೂರಿನ ಮೊದಲ ನಿಯೋ ಮೆಟ್ರೋ ಎಲೆಕ್ಟ್ರಾನಿಕ್‌ಸಿಟಿಯಲ್ಲಿ ಬೆಂಗಳೂರಿನ ಮೊದಲ ನಿಯೋ ಮೆಟ್ರೋ

ಈ ಸೇವೆಯನ್ನು ಆರಂಭಿಸಿದ ಸಂದರ್ಭದಲ್ಲಿ ಮಾತನಾಡಿದ ಮೆಟ್ರೋರೈಡ್‍ನ ಸಿಇಒ ಮತ್ತು ಸಹ-ಸಂಸ್ಥಾಪಕ ಗಿರೀಶ್ ನಾಗಪಾಲ್ ಅವರು, ''ನಮ್ಮ ನಗರಗಳಲ್ಲಿ ಇರುವ ಮೊದಲ ಮತ್ತು ಕೊನೆಯ ಸ್ಥಳಗಳ ನಡುವಿನ ಸಂಪರ್ಕದ ಸಮಸ್ಯೆಯನ್ನು ಬಗೆಹರಿಸಲು ನಾವು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ನಾವು ಸರ್ಕಾರ, ನಮ್ಮ ಮೆಟ್ರೋ ಮತ್ತು ಸಂಚಾರ ವಿಭಾಗದ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಜನರು ಹಸಿರು ಸಾರಿಗೆ ಪರಿಹಾರಗಳು ಮತ್ತು ಹಂಚಿಕೆ ಸಾರಿಗೆ ವ್ಯವಸ್ಥೆಗಳತ್ತ ಗಮನಹರಿಸುವಂತೆ ಮಾಡುವಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ'' ಎಂದರು.

ಬೆಂಗಳೂರು ಮೂಲದ ಮೆಟ್ರೋರೈಡ್‌ನಲ್ಲಿ ಜಾಗತಿಕ ಸಂಸ್ಥೆ ಹೂಡಿಕೆ ಬೆಂಗಳೂರು ಮೂಲದ ಮೆಟ್ರೋರೈಡ್‌ನಲ್ಲಿ ಜಾಗತಿಕ ಸಂಸ್ಥೆ ಹೂಡಿಕೆ

   ವಿರಾಟ್ & ಎಬಿಡಿ ಗೆ ಕಾಡ್ತಿದೆ ದೊಡ್ಡ ಸಮಸ್ಯೆ!| Oneindia Kannada
   ಕಾಮನ್ ಅಗರ್ವಾಲ್ ಮಾತನಾಡಿ

   ಕಾಮನ್ ಅಗರ್ವಾಲ್ ಮಾತನಾಡಿ

   ಮೆಟ್ರೋರೈಡ್‍ನ ಸಿಟಿಒ ಮತ್ತು ಸಹ-ಸಂಸ್ಥಾಪಕ ಕಾಮನ್ ಅಗರ್ವಾಲ್ ಅವರು ಮಾತನಾಡಿ, ''ಇಂದಿರಾನಗರವು ಬೆಂಗಳೂರಿನ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಟೆಕ್ ಪಾರ್ಕ್‍ಗಳು ಮತ್ತು ಕಚೇರಿಗಳು ಇದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸುವ 100 ಅಡಿ ರಸ್ತೆಯಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ. ನಮ್ಮ ಅತ್ಯಂತ ಸರಳವಾದ ಆ್ಯಪ್ ದೈನಂದಿನ ಪ್ರಯಾಣಿಕರು ಕೇವಲ 2 ಕ್ಲಿಕ್‍ಗಳೊಂದಿಗೆ ರೈಡ್ ಅನ್ನು ಬುಕ್ ಮಾಡಲು ನೆರವಾಗುತ್ತದೆ. ಇದರ ಮೂಲಕ ಯಾವುದೇ ಸಮಸ್ಯೆ ಇಲ್ಲದೇ ಮತ್ತು ಚಿಲ್ಲರೆ ಸಮಸ್ಯೆ ಇಲ್ಲದೇ ಸುಲಭದ ಪ್ರಯಾಣ ಅನುಭವವನ್ನು ಹೊಂದಬಹುದಾಗಿದೆ'' ಎಂದು ತಿಳಿಸಿದರು.

   ಕೇವಲ 7 ತಿಂಗಳಲ್ಲಿ 75,000 ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ

   ಕೇವಲ 7 ತಿಂಗಳಲ್ಲಿ 75,000 ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ

   ಈ ಸೇವೆಯನ್ನು ಆರಂಭಿಸಿದ ಕೇವಲ 7 ತಿಂಗಳಲ್ಲಿ 75,000 ಕ್ಕೂ ಹೆಚ್ಚು ಗ್ರಾಹಕರು ಸೇವೆಯ ಪ್ರಯೋಜನ ಪಡೆದಿದ್ದಾರೆ. ಸರಾಸರಿ ಪ್ರತಿ ರೈಡ್‍ಗೆ ಕಾಯುವ ಸಮಯ 2.01 ನಿಮಿಷಗಳಾಗಿದೆ. ದಿನನಿತ್ಯದ ಪ್ರಯಾಣ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವ ಉದ್ದೇಶದಿಂದ ಆರಂಭವಾದ ಈ ಸೇವೆಗೆ ಗ್ರಾಹಕರ ಉತ್ಸಾಹಪೂರ್ಣ ಪ್ರತಿಕ್ರಿಯೆ ದೊರೆಯುತ್ತಿದ್ದು, ಇದರ ಯಶಸ್ಸಿಗೆ ಕಾರಣವಾಗಿದೆ.

   ಗಿರೀಶ್ ನಾಗಪಾಲ್ ಮತ್ತು ಕಾಮನ್ ಅಗರವಾಲ್

   ಗಿರೀಶ್ ನಾಗಪಾಲ್ ಮತ್ತು ಕಾಮನ್ ಅಗರವಾಲ್

   ಗಿರೀಶ್ ನಾಗಪಾಲ್ ಮತ್ತು ಕಾಮನ್ ಅಗರವಾಲ್ ಅವರು ಬಂಡವಾಳ ಹೂಡಿ 2020ರಲ್ಲಿ ಈ ಕಂಪನಿಯನ್ನು ಆರಂಭಿಸಿದ್ದರು. ಕಾರ್ಪೊರೇಟ್ ಪಾರ್ಕ್ಸ್, ಮೆಟ್ರೋ ನಿಲ್ದಾಣಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿನ ಮೊದಲ ಮತ್ತು ಕಟ್ಟ ಕಡೆಯ ಸಂಪರ್ಕದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಈ ಕಂಪನಿಯನ್ನು ಆರಂಭಿಸಲಾಗಿತ್ತು. ಕಂಪನಿಯು ತನ್ನ ಎಐ-ಚಾಲಿತ ಕ್ಲೌಡ್ ಆಧಾರಿತ ಅಪ್ಲಿಕೇಷನ್ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದ್ದು, ಇದರ ಮೂಲಕ ತನ್ನ ಗ್ರಾಹಕರಿಗೆ ನೂರಕ್ಕೆ ನೂರರಷ್ಟು ಹಸಿರುವ ಸಾರಿಗೆ ಪರಿಹಾರಗಳನ್ನು ಒದಗಿಸುತ್ತಿದೆ. ಇದಲ್ಲದೇ, ಮೆಟ್ರೋರೈಡ್ ತನ್ನ ಎಲೆಕ್ಟ್ರಿಕ್ ವಾಹನಗಳೊಂದಿಗೆ ಇವಿ ಅಳವಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನ ನೀಡುತ್ತಿದೆ.

   ಸರಾಸರಿ 2.01 ನಿಮಿಷಕ್ಕೆ ಒಂದು ರೈಡ್ ಸೇವೆ

   ಸರಾಸರಿ 2.01 ನಿಮಿಷಕ್ಕೆ ಒಂದು ರೈಡ್ ಸೇವೆ

   ಮೆಟ್ರೋರೈಡ್ ಆರಂಭವಾಗಿ ಕೇವಲ 6 ತಿಂಗಳಲ್ಲಿ ಸುಮಾರು 60,000 ಗ್ರಾಹಕರಿಗೆ ಸೇವೆಗಳನ್ನು ಒದಗಿಸಿತ್ತು. ಅಂದರೆ, ಸರಾಸರಿ 2.01 ನಿಮಿಷಕ್ಕೆ ಒಂದು ರೈಡ್ ಸೇವೆಯನ್ನು ನೀಡುತ್ತಿದೆ. ಮೆಟ್ರೋರೈಡ್ ಪ್ರತಿ ವಾರ ಶೇ.20 ರ ಪ್ರಮಾಣದಲ್ಲಿ ಬೆಳವಣಿಗೆ ಹೊಂದುತ್ತಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಆರಂಭವಾದ ಈ ಸ್ಟಾರ್ಟಪ್ ತನ್ನ ಯಶಸ್ಸಿಗೆ ಗ್ರಾಹಕರ ಉತ್ಸಾಹಪೂರ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅತ್ಯಲ್ಪ ಸಮಯದಲ್ಲಿ ಕಂಪನಿಯು ನಾಸ್ಕಾಮ್‌ನ ಎನ್‌ಐಪಿಪಿ ಮೊಬಿಲಿಟಿ ಚಾಲೆಂಜ್ 2020, ಆಕ್ಟ್4ಗ್ರೀನ್-ಇಂಡಿಯಾ & ಯುಕೆ ಸರ್ಕಾರದ ಕ್ಲೀನ್‌ಟೆಕ್ ಕೋಹೊರ್ಟ್, ಕ್ಲೆಮೇಟ್ ಲಾಂಚ್‌ಪ್ಯಾಡ್‌ನಂಥ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದುಕೊಂಡಿದೆ.

   English summary
   MetroRide, India’s first AI-based electric mobility platform has begin operations from Indiranagar Metro Station in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X