ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮೂಲದ ಮೆಟ್ರೋರೈಡ್‌ನಲ್ಲಿ ಜಾಗತಿಕ ಸಂಸ್ಥೆ ಹೂಡಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಭಾರತದ ಮೊದಲ ಎಐ-ಆಧಾರಿತ ಎಲೆಕ್ಟ್ರಿಕ್ ಮೊಬಿಲಿಟಿ ಪ್ಲಾಟ್‌ಫಾರ್ಮ್ ಆಗಿರುವ ಮೆಟ್ರೋರೈಡ್ ಇಂದು ನ್ಯೂಜೆರ್ಸಿಯ ಸಿಲಿಕಾನ್ ವ್ಯಾಲಿಯಾದ್ಯಂತ ಇರುವ ಏಂಜೆಲ್ ಇನ್‌ವೆಸ್ಟ್‌ಗಳಿಂದ ಸೀಡ್ ಫಂಡಿಂಗ್ ಪಡೆಯುತ್ತಿರುವುದಾಗಿ ಘೋಷಣೆ ಮಾಡಿದೆ. ಮತ್ತು ಭಾರತದಲ್ಲಿನ ಹಿರಿಯ ಜಾಗತಿಕ ಪ್ರತಿನಿಧಿಗಳಾಗಿರುವ ಶೈಲೇಶ್ ಪೊಡ್ವಾಲ್, ಸುಧೀರ್ ಪೈ, ಭಗೀರಥ್ ತನ್ನಾ ಮತ್ತು ಖ್ಯಾತ ಉದ್ಯಮಿ ಸುಶಾಂತ್ ದಿವಾಕರ್ ಅವರೂ ಸಹ ಈ ಸೀಡ್ ಫಂಡಿಂಗ್‌ಗೆ ನೆರವಾಗುತ್ತಿದ್ದಾರೆ. ಈ ನಿಧಿಯನ್ನು ಬೆಂಗಳೂರು ಮತ್ತು ದೆಹಲಿ ಎನ್‌ಸಿಆರ್‌ನಲ್ಲಿರುವ ತನ್ನ ಎಲ್ಲಾ ಹಸಿರು ಮತ್ತು ಸಂಪೂರ್ಣವಾಗಿ ಇವಿ ಸಾರಿಗೆ ವ್ಯವಸ್ಥೆಯುನ್ನು ವಿಸ್ತರಣೆ ಮಾಡಲು ಬಳಸಿಕೊಳ್ಳಲಿದೆ. ಇದರ ಭಾಗವಾಗಿ ತನ್ನ ಎಐ ಎಂಜಿನ್-ವಿಐಕೆಐಯನ್ನು ಉನ್ನತೀಕರಣಕ್ಕಾಗಿ ಈ ನಿಧಿಯನ್ನು ವಿನಿಯೋಗಿಸಲಿದೆ.

ಗಿರೀಶ್ ನಾಗಪಾಲ್ ಮತ್ತು ಕಾಮನ್ ಅಗರವಾಲ್ ಅವರು ಬಂಡವಾಳ ಹೂಡಿ 2020ರಲ್ಲಿ ಈ ಕಂಪನಿಯನ್ನು ಆರಂಭಿಸಿದ್ದರು. ಕಾರ್ಪೊರೇಟ್ ಪಾರ್ಕ್ಸ್, ಮೆಟ್ರೋ ನಿಲ್ದಾಣಗಳು, ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಇನ್ನಿತರೆ ಕ್ಷೇತ್ರಗಳಲ್ಲಿನ ಮೊದಲ ಮತ್ತು ಕಟ್ಟ ಕಡೆಯ ಸಂಪರ್ಕದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಈ ಕಂಪನಿಯನ್ನು ಆರಂಭಿಸಲಾಗಿತ್ತು. ಕಂಪನಿಯು ತನ್ನ ಎಐ-ಚಾಲಿತ ಕ್ಲೌಡ್ ಆಧಾರಿತ ಅಪ್ಲಿಕೇಷನ್ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದ್ದು, ಇದರ ಮೂಲಕ ತನ್ನ ಗ್ರಾಹಕರಿಗೆ ನೂರಕ್ಕೆ ನೂರರಷ್ಟು ಹಸಿರುವ ಸಾರಿಗೆ ಪರಿಹಾರಗಳನ್ನು ಒದಗಿಸುತ್ತಿದೆ. ಇದಲ್ಲದೇ, ಮೆಟ್ರೋರೈಡ್ ತನ್ನ ಎಲೆಕ್ಟ್ರಿಕ್ ವಾಹನಗಳೊಂದಿಗೆ ಇವಿ ಅಳವಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನ ನೀಡುತ್ತಿದೆ.

ಸರಾಸರಿ 2.01 ನಿಮಿಷಕ್ಕೆ ಒಂದು ರೈಡ್

ಸರಾಸರಿ 2.01 ನಿಮಿಷಕ್ಕೆ ಒಂದು ರೈಡ್

ಮೆಟ್ರೋರೈಡ್ ಆರಂಭವಾಗಿ ಕೇವಲ 6 ತಿಂಗಳಲ್ಲಿ ಸುಮಾರು 60,000 ಗ್ರಾಹಕರಿಗೆ ಸೇವೆಗಳನ್ನು ಒದಗಿಸಿದೆ. ಅಂದರೆ, ಸರಾಸರಿ 2.01 ನಿಮಿಷಕ್ಕೆ ಒಂದು ರೈಡ್ ಸೇವೆಯನ್ನು ನೀಡುತ್ತಿದೆ. ಮೆಟ್ರೋರೈಡ್ ಪ್ರತಿ ವಾರ ಶೇ.20 ರ ಪ್ರಮಾಣದಲ್ಲಿ ಬೆಳವಣಿಗೆ ಹೊಂದುತ್ತಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಆರಂಭವಾದ ಈ ಸ್ಟಾರ್ಟಪ್ ತನ್ನ ಯಶಸ್ಸಿಗೆ ಗ್ರಾಹಕರ ಉತ್ಸಾಹಪೂರ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅತ್ಯಲ್ಪ ಸಮಯದಲ್ಲಿ ಕಂಪನಿಯು ನಾಸ್ಕಾಮ್‌ನ ಎನ್‌ಐಪಿಪಿ ಮೊಬಿಲಿಟಿ ಚಾಲೆಂಜ್ 2020, ಆಕ್ಟ್4ಗ್ರೀನ್-ಇಂಡಿಯಾ & ಯುಕೆ ಸರ್ಕಾರದ ಕ್ಲೀನ್‌ಟೆಕ್ ಕೋಹೊರ್ಟ್, ಕ್ಲೆಮೇಟ್ ಲಾಂಚ್‌ಪ್ಯಾಡ್‌ನಂಥ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದುಕೊಂಡಿದೆ.

ಮೆಟ್ರೋರೈಡ್‌ನ ಸಿಇಒ ಗಿರೀಶ್ ನಾಗಪಾಲ್

ಮೆಟ್ರೋರೈಡ್‌ನ ಸಿಇಒ ಗಿರೀಶ್ ನಾಗಪಾಲ್

ಮೆಟ್ರೋರೈಡ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಗಿರೀಶ್ ನಾಗಪಾಲ್ ಅವರು ಮಾತನಾಡಿ, ''ಮೆಟ್ರೋರೈಡ್‌ನಂತಹ ಹೊಸ ಪೀಳಿಗೆಯ ಮೊಬಿಲಿಟಿ ಸ್ಟಾರ್ಟಪ್‌ಗಳ ಮೇಲಿನ ವಿಶ್ವಾಸ ಮತ್ತು ನಂಬಿಕೆಯನ್ನು ಈ ನಿಧಿಗಳು ತೋರಿಸುತ್ತವೆ. ನಮ್ಮ ಹಂಚಿಕೊಳ್ಳುವ ಇ-ಮೊಬಿಲಿಟಿ ಪರಿಹಾರವು ಕೈಗೆಟುಕುವ ದೈನಂದಿನ ಪ್ರಯಾಣಕ್ಕೆ ಪೂರಕವಾಗಿದೆ. ನಾವು ವಿಶೇಷವಾಗಿ ಇಂತಹ ಪರೀಕ್ಷೆಯ ಸಮಯದಲ್ಲಿ ಈ ನಿಧಿಯನ್ನು ಪಡೆದುಕೊಳ್ಳಲು ನಮಗೆ ಹೆಮ್ಮೆ ಮತ್ತು ಸಂತೋಷವಾಗುತ್ತಿದೆ. ಸಾರ್ವಜನಿಕರು ತಮ್ಮ ಇಂಧನ ಆಧಾರಿತ ಸಾರಿಗೆ ವ್ಯವಸ್ಥೆಯನ್ನು ಬಿಡಬೇಕು ಮತ್ತು ಇವಿ ಕ್ರಾಂತಿಕಾರಕ ವಾಹನಗಳನ್ನು ಬಳಕೆ ಮಾಡಬೇಕೆಂದು ನಾವು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೇವೆ,'' ಎಂದರು.

ಸಿಟಿಒ ಕಾಮನ್ ಅಗರವಾಲ್

ಸಿಟಿಒ ಕಾಮನ್ ಅಗರವಾಲ್

ಮೆಟ್ರೋರೈಡ್‌ನ ಸಹ-ಸಂಸ್ಥಾಪಕ ಮತ್ತು ಸಿಟಿಒ ಕಾಮನ್ ಅಗರವಾಲ್ ಅವರು ಮಾತನಾಡಿ, ''ಸ್ಕೇಲೇಬಿಲಿಟಿ, ಆಟೋಮೇಷನ್ ಮತ್ತು ಸಂಪರ್ಕಿತ ಅನುಭವ- ಈ ಮೂರು ಉದ್ದೇಶಗಳನ್ನು ಇಟ್ಟುಕೊಂಡು ಮುಂದೆ ಸಾಗುತ್ತಿದ್ದೇವೆ. ಎಐ ನಮಗೆ ಒಂದು ಆಯ್ಕೆಯೇನೂ ಅಲ್ಲ. ನಮ್ಮ ಎಐ ಎಂಜಿನ್ ವಿಐಕೆಐ ನಾವು ಮಾಡುವ ಪ್ರತಿಯೊಂದರ ಹೃದಯದಲ್ಲಿದೆ. ನೂರಕ್ಕೆ ನೂರರಷ್ಟು ಕ್ಲೌಡ್ ಆಧಾರಿತ ಮೊಬೈಲ್ ಅಪ್ಲಿಕೇಷನ್ ಪ್ರಯಾಣಿಕರಿಗೆ ತ್ವರಿತ ಮತ್ತು ತಡೆರಹಿತವಾದ ಇವಿ ರೈಡ್ ಅನ್ನು ನೀಡಲು ನೆರವಾಗುತ್ತದೆ. ಇದರ ಜೊತೆಗೆ ಎಐ ಆಧಾರಿತ ಫ್ರಾಡ್ ಡೆಟೆಕ್ಷನ್ ಸಿಸ್ಟಂ ಹೊಂದಿರುವ ಏಕೈಕ ಸ್ಟಾರ್ಟಪ್ ನಮ್ಮದಾಗಿದೆ. ಈ ಹೊಸ ಬಂಡವಾಳವನ್ನು ನಾವು ನಮ್ಮ ತಂತ್ರಜ್ಞಾನ ಪರಿಹಾರಗಳನ್ನು ಮತ್ತಷ್ಟು ಬಲಗೊಳಿಸಲು ಮತ್ತು ಕ್ಷಿಪ್ರ ವಿಸ್ತರಣೆಗೆ ಬಳಸಿಕೊಳ್ಳಲಿದ್ದೇವೆ,'' ಎಂದು ತಿಳಿಸಿದರು.

Recommended Video

ಭಾರತದ 12 ನಗರಗಳ ಮುಳುಗಡೆ ಕಂನ್ಫರ್ಮ್:ಎಚ್ಚರಿಕೆ ಕೊಟ್ಟ NASA | Oneindia Kannada
ಹೂಡಿಕೆದಾರದಲ್ಲಿ ಒಬ್ಬರಾಗಿರುವ ಶೈಲೇಶ್ ಪೊಡ್ವಾಲ್

ಹೂಡಿಕೆದಾರದಲ್ಲಿ ಒಬ್ಬರಾಗಿರುವ ಶೈಲೇಶ್ ಪೊಡ್ವಾಲ್

ಸಿಲಿಕಾನ್ ವ್ಯಾಲಿಯ ಹೂಡಿಕೆದಾರದಲ್ಲಿ ಒಬ್ಬರಾಗಿರುವ ಶೈಲೇಶ್ ಪೊಡ್ವಾಲ್ ಅವರು ಮಾತನಾಡಿ, ''ನಗರ ಪ್ರದೇಶದಲ್ಲಿ ಪ್ರಯಾಣದ ಜಾಗತಿಕ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಮತ್ತು ಸುಸ್ಥಿರತೆಯನ್ನು ಕೇಂದ್ರೀಕರಿಸಿ ಮೆಟ್ರೋರೈಡ್ ತೆಗೆದುಕೊಂಡಿರುವ ವಿಧಾನವು ನಮ್ಮನ್ನು ರೋಮಾಂಚನಗೊಳಿಸಿದೆ. ಕೋವಿಡ್ ಸಮಯದಲ್ಲಿಯೂ ಸಹ ಕಂಪನಿಯು ಅನೇಕ ಶ್ಲಾಘನೀಯ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಈ ದಿಸೆಯಲ್ಲಿ ನಾವು ಮೆಟ್ರೋರೈಡ್‌ನ ಬದ್ಧತಾ ಮತ್ತು ಸಮರ್ಥ ತಂಡದ ಭಾಗವಾಗಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ'' ಎಂದರು.

English summary
Bengaluru based startup MetroRide, India’s first AI-based electric mobility platform has announced its funding from a consortium of global investors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X