ಬಿಎಂಆರ್‌ಸಿಎಲ್‌ನ ಹೊಸ ನಿರ್ಧಾರದಿಂದ ಪ್ರಯಾಣಿಕರಿಗೆ ಸಮಸ್ಯೆ
Recommended Video

ಬೆಂಗಳೂರು, ಡಿಸೆಂಬರ್ 20: ಬಿಎಂಆರ್‌ಸಿಎಲ್ ತೆಗೆದುಕೊಂಡಿರುವ ಹೊಸ ನಿರ್ಧಾರದಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಮಸ್ಯೆ ಎದುರಿಸುವಂತಾಗಿದೆ.
ನಮ್ಮ ಮೆಟ್ರೋ ಒಳಗೆ ಪ್ರವೇಶಿಸಿದ ಬಳಿಕ ಓಎಫ್‌ಸಿ ಬಳಿ ಇರುವ ರೀಚಾರ್ಜ್ ಕೇಂದ್ರವನ್ನು ಮುಚ್ಚಿದೆ. ಇದರಿಂದ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳಲು ಪರದಾಡುವಂತಾಗಿದೆ. ಟೋಕನ್ ಖರೀದಿರುವ ಮುಖ್ಯ ಕೌಂಟರ್‌ನಲ್ಲೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬೇಕಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಲಿದೆ.
ನಿಲ್ದಾಣದಲ್ಲಿ ಮುಖ್ಯ ಕೌಂಟರ್ ಮುಂಭಾಗ ಸಾಲು ನಿಲ್ಲುವುದನ್ನು ತಪ್ಪಿಸಲು ಸ್ಮಾರ್ಟ್ ಕಾರ್ಡ್ ಖರೀದಿಗೆ ಉತ್ತೇಜನ ನೀಡಲಾಗುತ್ತಿದೆ. ಈ ಕೌಂಟರ್‌ನ ಮುಂದೆ ಸ್ಮಾರ್ಟ್‌ಕಾರ್ಡ್ ನಲ್ಲಿರುವ ಹಣವನ್ನು ಸ್ಕ್ಯಾನ್ ಮಾಡಿ ತೋರಿಸುವ ಯಂತ್ರವೂ ಇದೆ. ಹೀಗಾಗಿ ಪ್ರಯಾಣಿಕರು ತಮ್ಮ ಕಾರ್ಡ್‌ನಲ್ಲಿನ ಮೊತ್ತ ತಿಳಿಯಲು ಈ ಕೌಂಟರ್ ಬಳಿಯೇ ಬರುತ್ತಾರೆ.

ಟೋಕನ್ ಬದಲು ರೀಚಾರ್ಜ್ ಮಾಡಿಸಿಕೊಳ್ಳಲು ಸರತಿ
ಇಷ್ಟು ದಿನ ಟೋಕನ್ ಕೊಳ್ಳಲು ಸರತಿಯಲ್ಲಿ ನಿಲ್ಲಬೇಕು ಎನ್ನುವ ಕಾರಣಕ್ಕೆ ಸ್ಮಾರ್ಟ್‌ಕಾರ್ಡ್ ಸೇವೆ ಆರಂಭಿಸಿತ್ತು. ಅದಕ್ಕೆ ರಿಚಾರ್ಜ್ ಮಾಡಿಸಿಕೊಳ್ಳಲು ಪ್ರತ್ಯೇಕ ಕೌಂಟರ್‌ಗಳನ್ನು ಕೂಡ ತೆರೆದಿತ್ತು. ಆದರೆ ಇದೀಗ ಆ ಕೌಂಟರ್‌ಗಳನ್ನು ಮುಚ್ಚಲಿದ್ದು ಇದರಿಂದ ಪ್ರಯಾಣಿಕರು ರಿಚಾರ್ಜ್ ಮಾಡಿಸಿಕೊಳ್ಳಲು ಟೋಕನ್ ತೆಗೆದುಕೊಳ್ಳುವವರ ಸಾಲಿನಲ್ಲಿಯೇ ನಿಲ್ಲಬೇಕಾಗಿದೆ.

ಪ್ರಯಾಣಿಕರಿಗೆ ಕಿರಿಕಿರಿ
ಸಾಮಾನ್ಯವಾಗಿ ಪ್ರಯಾಣಿಕರಿಗೆ ಈ ಮಾಹಿತಿ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ ಪ್ರತಿ ಸಲ ಬರುವ ಹಾಗೆಯೇ ಆ ಕೌಂಟರ್ ಬಳಿ ಬಂದು ರಿಚಾರ್ಜ್ ಮಾಡಲು ಕೇಳುತ್ತಾರೆ. ಮಖ್ಯ ಕೌಂಟರ್‌ನಲ್ಲಿ ಈಗಾಗಲೇ ಟೋಕನ್‌ಗೆ ಸಾಲು ನಿಲ್ಲುವವರ ಉದ್ದದ ಸಾಲು ಸೃಷ್ಟಿಯಾಗುತ್ತಿದೆ. ಈ ಹೊಸ ನಿರ್ಧಾರದಿಂದ ಸಾಲು ಮತ್ತಷ್ಟು ಉದ್ದವಾಗಲಿದ್ದು, ಪ್ರಯಾಣಿಕರಿಗೆ ಅನನುಕೂಲವಾಗಲಿದೆ.

ಭದ್ರತಾ ಸಿಬ್ಬಂದಿ ಕೊರತೆ
ಭದ್ರತಾ ಸಿಬ್ಬಂದಿ ಎರಡು ಕೌಂಟರ್‌ನಲ್ಲಿ ನಿಂತು ನಿರ್ವಹಣೆ ಮಾಡಬೇಕಾಗುತ್ತದೆ. ಇದು ಕಷ್ಟವಾಗಿರುವುದರಿಂದ ನಿಂತು ನಿರ್ವಹಣೆ ಮಾಡಬೇಕಾಗುತ್ತದೆ. ಇದು ಕಷ್ಟವಾಗಿರುವುದರಿಂದ ಒಂದೇ ಕಡೆ ವ್ಯವಸ್ಥೆ ಮಾಡಲಾಗಿದೆ. ನಿರ್ಗಮಿಸುವವರು ಎಎಫ್‌ಸಿ ಗೇಟ್ ಮೇಲೆ ಸ್ಮಾರ್ಟ್ ಕಾರ್ಡ್ ಇಟ್ಟರೆ ಹಣ ಪಾವತಿಯಾಗುತ್ತದೆ. ಅದರಲ್ಲಿ ಹಣವಿಲ್ಲದಿದ್ದರೆ ಗೇಟ್ ಮುಚ್ಚುತ್ತದೆ. ಅಂತಹ ಸಂದರ್ಭದಲ್ಲಿ ಮಾತ್ರ ಇಲ್ಲಿ ರಿಚಾರ್ಜ್ ಮಾಡಿಸಬೇಕು.

ಓಎಫ್‌ಸಿ ಗೇಟ್ ಬಳಿ ಸಿಬ್ಬಂದಿಯೇ ಇಲ್ಲ
ಮೆಟ್ರೋ ಹತ್ತಲು ನಿಲ್ದಾಣದೊಳಗೆ ಪ್ರವೇಶಿಸಬೇಕಿದ್ದರೆ ಓಎಫ್‌ಸಿ ಗೇಟ್ ಬಳಿ ಕಾರ್ಡ್ ಅಥವಾ ಟೋಕನ್ ಇಟ್ಟು ಮುಂದೆ ಬರಬೇಕು ಇದರ ಬಗ್ಗೆ ಮಾಹಿತಿ ನೀಡಲು ಅಥವಾ ಪ್ರಯಾಣಿಕರ ತೊಂದರೆಗಳಿಗೆ ಸ್ಪಂದಿಸಲು ಸಿಬ್ಬಂದಿಗಳು ಇರುತ್ತಿದ್ದರು. ಆದರೆ ಆ ಸಿಬ್ಬಂದಿಗಳನ್ನು ಕೂಡ ತೆಗೆಯಲಾಗಿದೆ.












Click it and Unblock the Notifications