ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು

ಬೆಂಗಳೂರು, ಮಾರ್ಚ್ 28:ನಮ್ಮ ಮೆಟ್ರೋ ಹತ್ತಬೇಕಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಬ್ಯಾಲೆನ್ಸ್ ಇರಲೇಬೇಕು ಎನ್ನುವ ಮೆಟ್ರೋ ನಿಗಮದ ಹೊಸ ನಿಯಮಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ನಿಯಮದ ಬಗ್ಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಜಾರಿ ಮಾಡಿದ್ದಾರೆ. 10 ರೂ ನೀಡಿ ಪ್ರಯಾಣಿಸುವವರ ಕಾರ್ಡ್‌ನಲ್ಲಿಯೂ ಕನಿಷ್ಠ 50 ರೂ ಇರಲೇಬೇಕು ಎಂದು ಮೆಟ್ರೋ ನಿಗಮ ಹೇಳುತ್ತಿದೆ.

ಕನಿಷ್ಠ 50ರೂ ಇದ್ದರಷ್ಟೇ ಮೆಟ್ರೋ ಗೇಟ್ ತೆರೆಯುತ್ತೆ

ಕನಿಷ್ಠ 50ರೂ ಇದ್ದರಷ್ಟೇ ಮೆಟ್ರೋ ಗೇಟ್ ತೆರೆಯುತ್ತೆ

ಕನಿಷ್ಠ 50ರೂ ಇದ್ದರಷ್ಟೇ ಪ್ರವೇಶಕ್ಕೆ ಗೇಟ್ ತೆರೆಯಲಿದೆ. ಪ್ರಯಾಣಿಕರು ಇಳಿಯುವ ನಿಲ್ದಾಣದಲ್ಲಿ ಟಾಪ್ ಅಪ್ ಸಮಸ್ಯೆ ಎದುರಾಗಬಾರದು ಎನ್ನುವ ಕಾರಣದಿಂದ ಈ ನಿಯಮ ಅನುಷ್ಠಾನಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಸಮರ್ಥಿಸಿಕೊಂಡಿದೆ.

ಯಾವುದೇ ಮುನ್ಸೂಚನೆ ಇಲ್ಲದೆ ಜಾರಿಗೆ

ಯಾವುದೇ ಮುನ್ಸೂಚನೆ ಇಲ್ಲದೆ ಜಾರಿಗೆ

ಮುನ್ಸೂಚನೆ ನೀಡದೆ ಏಕಾಏಕಿ ಈ ನಿಯಮ ಜಾರಿಗೊಳಿಸಿರುವ ಬಿಎಂಆರ್‌ಸಿಎಲ್ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಐಜ್ಞಾನಿಕ ನಿಯಮದ ವಿರುದ್ಧ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿದ ಜನದಟ್ಟಣೆ

ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿದ ಜನದಟ್ಟಣೆ

ಪ್ರತಿ ಮೆಟ್ರೋ ನಿಲ್ದಾಣದಲ್ಲಿ ಆಟೋಮ್ಯಾಟಿಕ್ ಫೇರ್ ಕಲೆಕ್ಟರ್ ಗೇಟ್ ಅಳವಡಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಅಥವಾ ಟೋಕನ್ ಅನ್ನು ಗೇಟ್ ಮೇಲಿರಿಸಿದಾಗ ತನ್ನಿಂದ ತಾನಾಗಿಯೇ ಗೇಟ್ ತೆರೆದುಕೊಳ್ಳುತ್ತದೆ. ಇದಕ್ಕೆ ತಕ್ಕಂತೆ ಎಎಫ್‌ಸಿ ಗೇಟ್‌ನ ತಂತ್ರಾಂಶ ಬದಲಾಯಿಸಲಾಗಿದೆ.

ಶೇ.50ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ

ಶೇ.50ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಹೊಂದಿದ್ದಾರೆ

ಪ್ರತಿದಿನ ಮೆಟ್ರೋದಲ್ಲಿ 3.5 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ನಾಯಂಡಹಳ್ಳಿ-ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಶೇ.59.84 ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಬಳಕೆ ಮಾಡುತ್ತಾರೆ. ನೇರಳೆ ಮಾರ್ಗದಲ್ಲಿ ಶೇ.34.14 ಹಾಗೂ ಹಸಿರು ಮಾರ್ಗದಲ್ಲಿ ಶೇ.40.16 ಟೋಕನ್ ಬಳಕೆದಾರರಿದ್ದಾರೆ.

ಬಿಎಂಆರ್‌ಸಿಎಲ್ ಮಾಹಿತಿ ನೀಡಿದ್ದು ರಾತ್ರಿ 9ಗಂಟೆಗೆ

ಸಂಜೆ ಹೊಸ ನಿಯಮ ಜಾರಿಗೊಳಿಸಿರುವ ಬಿಎಂಆರ್‌ಸಿಎಲ್ ರಾತ್ರಿ 9 ಗಂಟೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದೆ. ಪ್ರಯಾಣಿಕರು ಪ್ರತಿಭಟನೆ ಮಾಡಿದ ಬಳಿಕ ಎಚ್ಚೆತ್ತುಕೊಂಡಿರುವ ಬಿಎಂಆರ್‌ಸಿಎಲ್ ಬಳಿಕ ಮಾಹಿತಿ ನೀಡಿದೆ. ನಿಲ್ದಾಣದ ಸಿಬ್ಬಂದಿಗಳಿಗೂ ಸೂಕ್ತ ಮಾಹಿತಿ ಇರಲಿಲ್ಲ. ಇವತ್ತು 50 ಅಂತಾರೆ ನಾಳೆ 500 ರೂ ಮಾಡಿದರೆ ಏನು ಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+