ಕೆಆರ್ ಪುರದಿಂದ ಬೈಯಪ್ಪನಹಳ್ಳಿಗೆ ಮೆಟ್ರೋ ಫೀಡರ್ ಬಸ್: ಟಿಕೆಟ್ ಬೆಲೆ, ಸಮಯದ ವಿವರಗಳು ಇಲ್ಲಿದೆ
ಬೆಂಗಳೂರು, ಮಾರ್ಚ್. 27: ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರಿಂದ ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಮಾರ್ಗ ಉದ್ಘಾಟನೆಯಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ಪ್ರಯಾಣಿಕರಿಗೆ ಸುಗಮ ಪ್ರಯಾಣಕ್ಕಾಗಿ ಅನುಕೂಲವಾಗಲು ಫೀಡರ್ ಬಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
BMTC Bus schedule from KR PURA Metro Station to BYAPANAHALLI
— Outer Ring Road Companies Association ® (@0RRCA) March 27, 2023
BMTC Buses are available at a frequency of 5 minutes pic.twitter.com/x2JAPnC5F5
ಮೆಟ್ರೋ ಫೀಡರ್ ಬಸ್ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿಗೆ ಕಾರ್ಯನಿರ್ವಹಿಸಲಿದ್ದು, ಇದು ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈಗಾಗಲೇ ಕೆ.ಆರ್. ಪುರ - ವೈಟ್‌ಫೀಲ್ಡ್ ಮೆಟ್ರೋ ಮಾರ್ಗವು ಕಾರ್ಯನಿರ್ವಹಿಸುತ್ತಿದ್ದು, ಮೆಟ್ರೋ ಫೀಡರ್ ಬಸ್ ಸೇವೆ ಮೆಟ್ರೋ ನಿಲ್ದಾಣಗಳಿಗೆ ತಲುಪಲು ಹೆಚ್ಚು ಉಪಯುಕ್ತವಾಗಲಿವೆ.

ಮೆಟ್ರೋ ಫೀಡರ್ ಬಸ್ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿಗೆ ಕಾರ್ಯನಿರ್ವಹಿಸಲಿದ್ದು, ಬೆಳಗ್ಗೆ 7 ರಿಂದ ರಾತ್ರಿ 11 ರವರೆಗೆ ಅಂದರೆ ಮೆಟ್ರೋ ನಿಲ್ದಾಣಗಳಲ್ಲಿ ಕೊನೆಯ ಮೆಟ್ರೋ ಹೊರಡುವವರೆಗೂ ಬಸ್‌ಗಳು ಕಾರ್ಯ ನಿರ್ವಹಿಸಲಿವೆ. ಈ ಮಾರ್ಗದಲ್ಲಿ ಮೆಟ್ರೋ ಫೀಡರ್ ಬಸ್ ದರ ಒಂದು ಕಡೆಗೆ 10 ರೂಪಾಯಿಯಾಗಲಿದೆ. ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿಗೆ ಹತ್ತು ನಿಮಿಷಗಳ ಪ್ರಯಾಣವಿದೆ.
ಇನ್ನು, ವೈಟ್‌ಫೀಲ್ಡ್ (ಕಾಡುಗೋಡಿ)-ಕೆಆರ್ ಪುರ ಮೆಟ್ರೋ ಮಾರ್ಗದ ಪ್ರಾರಂಭದ ಮೊದಲ ದಿನದಲ್ಲಿ ಆರಂಭಿಕ ಸಮಸ್ಯೆಗಳು ಕಂಡು ಬಂದಿವೆ. ಹಳೆ ಮದ್ರಾಸ್ ರಸ್ತೆಯ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಹೊರಗೆ ಕೆಆರ್ ಪುರ ಮೆಟ್ರೊ ನಿಲ್ದಾಣಕ್ಕೆ ಹೋಗಲು ಫೀಡರ್ ಬಸ್ ಹಿಡಿಯಲು ಬಂದ ಜನರಿಗೆ ನಿರಾಸೆಯಾಗಿದೆ. ಬಸ್ ವೇಳಾಪಟ್ಟಿ, ಯಾವಾಗ ಬರುತ್ತೆ ಏನು ಮಾಹಿತಿಯಿಲ್ಲದೆ ಪರದಾಡಿದ್ದಾರೆ.
ಪರಿಣಾಮವಾಗಿ, ಬಿಎಂಟಿಸಿ ಬಸ್‌ಗಳಿಗೆ ಜನರು ಹತ್ತಿದ್ದಾರೆ. ಆದರೆ, ಕಿಕ್ಕಿರಿದು ತುಂಬಿದ ಬಸ್ಸು ಅವರನ್ನು ಮೆಟ್ರೋ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಟಿನ್ ಫ್ಯಾಕ್ಟರಿಗೆ ಬಿಟ್ಟಿದೆ. ಬಸ್ ಕೆಆರ್ ಪುರ ನಿಲ್ದಾಣಕ್ಕೆ ಹೋಗುವುದಾಗಿ ಕಂಡಕ್ಟರ್ ಹೇಳಿದ್ದರು . ಆದರೆ ಒಂದು ಕಿಲೋಮೀಟರ್ ನಂತರ, ಟಿನ್ ಫ್ಯಾಕ್ಟರಿಯಲ್ಲಿ ಇಳಿದು ಇನ್ನೊಂದು ಬಸ್‌ಗೆ ಹೋಗಲು ಹೇಳಿದ್ದಾರೆ ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.

ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಿಂದ ಹಲವಾರು ಬಸ್ಸುಗಳು ಓಡಾಡುತ್ತಿದ್ದರೂ ಕೂಡ, ಕೆಆರ್ ಪುರ ಮೆಟ್ರೋ ನಿಲ್ದಾಣಕ್ಕೆ ಫೀಡರ್ ಸೇವೆ ಎಂದು ಯಾವುದು ಸೂಚಿಸಿಲ್ಲ. ಹತಾಶೆಗೊಂಡ ಸವಾರರು ಕೆಆರ್ ಪುರಂ ರೈಲು ನಿಲ್ದಾಣದ ಕಡೆಗೆ ಹೋಗುವ ಬಸ್‌ಗಳನ್ನು ಹತ್ತಿದ್ದಾರೆ.
ಇತ್ತ, ಕೆಆರ್ ಪುರ ಮೆಟ್ರೋ ನಿಲ್ದಾಣದಲ್ಲು ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ. ಕೆಲವು ನಿರ್ಗಮನ ಗೇಟ್‌ಗಳು ಓಪನ್ ಆಗದೆ ಸಮಸ್ಯೆಗಳನ್ನು ಎದುರಿಸಿವೆ. ನಿಲ್ದಾಣದ ಹೊರಗೆ ಬಸ್‌ಗಾಗಿ ಕಾಯುತ್ತಿದ್ದ ಜನರನ್ನು ಪೊಲೀಸ್ ಅಧಿಕಾರಿಯೊಬ್ಬರು ಬಸ್ ನಿಲ್ದಾಣಕ್ಕೆ ಬಂದರು, ಇಲ್ಲಿ ಯಾವುದೇ ಬಸ್ ನಿಲ್ಲುವುದಿಲ್ಲ ಎಂದು ಹೇಳಿ ಕಳುಹಿಸಿರುವ ಘಟನೆಗಳು ನಡೆದಿವೆ. ನಿಲ್ದಾಣದಿಂದ ಹೊರನಡೆಯುತ್ತಿರುವ ಪ್ರಯಾಣಿಕರು ಬಸ್‌ಗಳು, ಫೀಡರ್ ಸೇವೆಗಳು ಇಲ್ಲದಿರುವ ಬಗ್ಗೆ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ. 20 ನಿಮಿಷಗಳ ನಂತರ ಫೀಡರ್ ಬಸ್ ಬಂದಾಗ, ಪ್ರಯಾಣಿಕರು ಅದನ್ನು ಹತ್ತಲು ಪೈಪೋಟಿ ನಡೆಸಿದ ಘಟನೆಗಳು ವರದಿಯಾಗಿವೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಕೆಆರ್ ಪುರ - ವೈಟ್‌ಫಿಲ್ಡ್ ಮಾರ್ಗವನ್ನು ಉದ್ಘಾಟಿಸಿದ್ದಾರೆ. 12 ನಿಲ್ದಾಣಗಳನ್ನು ಹೊಂದಿರುವ ಮಾರ್ಗದ ವಾಣಿಜ್ಯ ಕಾರ್ಯಾಚರಣೆ ಭಾನುವಾರ ಪ್ರಾರಂಭವಾಗಿದೆ. ಉದ್ಘಾಟನೆಗೂ ಮುನ್ನ ಹೊಸ ಕಾರಿಡಾರ್‌ನಲ್ಲಿ ಆರು ಮೆಟ್ರೋ ನಿಲ್ದಾಣಗಳ ಹೆಸರನ್ನು ಬದಲಾಯಿಸಲು ಬೆಂಗಳೂರು ಮೆಟ್ರೋ ಅಧಿಕಾರಿಗಳು ನಿರ್ಧರಿಸಿದ್ದರು.
ಕೆ.ಆರ್. ಪುರಂ ನಿಲ್ದಾಣವನ್ನು ಕೃಷ್ಣರಾಜಪುರ (ಕೆ.ಆರ್. ಪುರ), ಮಹದೇವಪುರ ಮೆಟ್ರೋ ನಿಲ್ದಾಣವನ್ನು ಸಿಂಗಯ್ಯಪ್ಪನಪಾಳ್ಯ ನಿಲ್ದಾಣ, ಹೂಡಿ ಜಂಕ್ಷನ್ ಮೆಟ್ರೋ ನಿಲ್ದಾಣವನ್ನು ಹೂಡಿ, ಕಾಡುಗೋಡಿ ಮೆಟ್ರೋ ನಿಲ್ದಾಣವನ್ನು ಕಾಡುಗೋಡಿ ಟ್ರೀ ಪಾರ್ಕ್ ಎಂದೂ, ಚನ್ನಸಂದ್ರವನ್ನು ಹೋಮ್ ಫಾರ್ಮ್ ಚನ್ನಸಂದ್ರ ಮತ್ತು ವೈಟ್‌ಫೀಲ್ಡ್ ಅನ್ನು ವೈಟ್‌ಫೀಲ್ಡ್ (ಕಾಡುಗೋಡಿ) ಎಂದು ಮರುನಾಮಕರಣ ಮಾಡಲಾಗಿದೆ.












Click it and Unblock the Notifications