Namma Metro: ಬೆಂಗಳೂರಲ್ಲಿ 2032ರ ಹೊತ್ತಿಗೆ 1-2 ಕಿ.ಮೀ. ವ್ಯಾಪ್ತಿಯಲ್ಲೂ ಮೆಟ್ರೋ ವಿಸ್ತರಣೆ, ಸರ್ಕಾರದ ಕ್ರಿಯಾ ಯೋಜನೆ, ಮಾಹಿತಿ
ಬೆಂಗಳೂರು, ಮಾರ್ಚ್ 10: ಮುಂದಿನ ಒಂದು ದಶಕದಲ್ಲಿ (2032) ಬೆಂಗಳೂರಿನ ಜನತೆಗೆ ಒಂದರಿಂದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಲಭ್ಯವಾಗುವಂತೆ ನಾಲ್ಕು ಹೊಸ ಮೆಟ್ರೋ ಮಾರ್ಗಗಳು ಸಿದ್ಧಗೊಳ್ಳಲಿವೆ ಎಂಬ ಸುಳಿವನ್ನು ರಾಜ್ಯ ಸರ್ಕಾರ ನೀಡಿದೆ.
ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಬೇಕು ಎಂಬ ಉದ್ದೇಶ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ. ಈ ಸಂಬಂಧ ಸಿದ್ಧಪಡಿಸಿದ ಕ್ರಿಯಾ ಯೋಜನೆಯಲ್ಲಿ ಬೆಂಗಳೂರು ನಾಗರಿಕರಿಗೆ ಅವರ ಕೆಲಸ ಅಥವಾ ನಿವಾಸದ ಸುತ್ತಮುತ್ತಲಿನ 1 ರಿಂದ 2 ಕಿಮೀ ಒಳಗೆ ಸಂಚಾರಕ್ಕೆ ಅವಕಾಶ ಸಾಧ್ಯವಾಗುಂತೆ ಮೆಟ್ರೋ ಒದಗಿಸಲು ನಾಲ್ಕು ಹೊಸ ಮೆಟ್ರೋ ಮಾರ್ಗಗಳನ್ನು ಕ್ರಿಯಾ ಯೋಜನೆಯ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಕ್ರಿಯಾ ಯೋಜನೆಯಲ್ಲಿ ಅಂಕಿಅಂಶ ಇಲಾಖೆ ಮತ್ತು ಉದ್ಯಮ ಸಂಸ್ಥೆ ಫಿಕ್ಕಿ ಹೊರತಂದಿದೆ. ಇದರ ಪ್ರಕಾರ, ಪ್ರಸ್ತಾಪಿತ ಈ 04 ಹೊಸ ಮೆಟ್ರೋ ಮಾರ್ಗಗಳು ಒಟ್ಟು 59 ಕಿಲೋ ಮೀಟರ್ ಉದ್ದದ ಹೊಸ ಮೆಟ್ರೋ ಮಾರ್ಗಗಳಿಗೆ 27,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ನಗರದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 56 ಕಿಲೋ ಮೀಟರ್ ಮೆಟ್ರೋ ಜಾಲವನ್ನು ಹೊಂದಿದೆ.
ಮೆಟ್ರೋ ಯೋಜನೆಯ ಹಂತ-3 ರ ಅಡಿಯಲ್ಲಿ ಬರುವ ಹೊಸ ಮಾರ್ಗಗಳು 2032ರ ವೇಳೆಗೆ ಅವರ ಸಾರ್ವಜನಿಕರಿಗೆ ಅವರ ಕೆಲಸದ ಸ್ಥಳ ಅಥವಾ ನಿವಾಸದ ಸುತ್ತಮುತ್ತ 1-2 ಕಿಮೀ ವ್ಯಾಪ್ತಿಯಲ್ಲಿ ಲಭ್ಯವಾಗುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಕ್ರಿಯಾ ಯೋಜನೆಯಲ್ಲಿ ತಿಳಿಸಲಾಗಿದೆ. ಪ್ರಸಕ್ತದಲ್ಲಿ ಮೆಟ್ರೋ ನಿಲ್ದಾಣಗಳು ಗರಿಷ್ಠ 4-5 ಕಿಲೋ ಮೀಟರ್ ವ್ಯಾಪ್ತಿಗೆ ಲಭ್ಯವಿವೆ.

ಸಂಚಾರ ದಟ್ಟಣೆ ಕಡಿಮೆಗಾಗಿ ಜೊತೆಗೆ ಆದಾಯವನ್ನು ಹೆಚ್ಚಿಸಲು ಹೊಸೂರು ರಸ್ತೆ, ಮೈಸೂರು ರಸ್ತೆ ಮತ್ತು ಬಳ್ಳಾರಿ ರಸ್ತೆ ಸೇರಿದಂತೆ ವಿವಿಧ ಒಂಬತ್ತು ಕಡೆಯಿಂದ ಪೀಕ್ ಅವರ್‌ನಲ್ಲಿ ನಗರಕ್ಕೆ ಬರುವ ವಾಹನಗಳಿಗೆ ಪ್ರವೇಶದ ಸ್ಥಳದಲ್ಲಿ ಶುಲ್ಕ ವಿಧಿಸಬೇಕೆಂಬ ಪ್ರಸ್ತಾವನೆಯೂ ಕ್ರಿಯಾ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.
ನಗರದ ಜನರಿಗೆ ಆರೋಗ್ಯ ರಕ್ಷಣೆಗೆ, ಶಿಕ್ಷಣ, ಸಂಚಾರ, ಶಾಪಿಂಗ್ ಅಹೀಗೆ ಹಲವಾರು ಸೇವೆಗಳಿಗೆ ಅನುಕೂಲವಾಗುವ "30 ನಿಮಿಷಗಳ ಪ್ರಸ್ತಾಪ" ಅಳವಡಿಸಿಕೊಳ್ಳಬೇಕು. ಅದಕ್ಕಾಗಿ 12 'ಉತ್ತಮ ಜೀವನ' ಕ್ಲಸ್ಟರ್ ರಚಿಸಬೇಕು ಎಂಬುದನ್ನು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾವಿತ ಕ್ಲಸ್ಟರ್‌ಗಳೆಂದರೆ 'ಮಲ್ಲೇಶ್ವರಂ-ರಾಜಾಜಿನಗರ, ಜಯನಗರ-ಜೆಪಿ ನಗರ, ಇಂದಿರಾನಗರ-ರಮಂಗಲ, ಎಚ್‌ಎಸ್‌ಆರ್ ಲೇಔಟ್- ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್-ಕಾಡುಗೋಡಿ, ಬನ್ಶಂಕರಿ-ಕನಕಪುರ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ-ಬೊಮ್ಮನಹಳ್ಳಿ, ಬಾಣಸವಾಡಿ- ಎಚ್‌ಆರ್‌ಬಿಆರ್ ಲೇಔಟ್, ಥಣಿಕವಾಡ, ಥಣಿಕವಾಡ, ಥಣಿಸಂದ್ರ- ಯಶವಂತಪುರ-ಪೀಣ್ಯ ಮತ್ತು ಮಾರತ್ತಹಳ್ಳಿ-ಯೆಮ್ಲೂರು' ಎಂದು ತಿಳಿಸಲಾಗಿದೆ.

ಗುರಿ ಸಾಧನೆಗೆ 152.87 ಲಕ್ಷ ಕೋಟಿ ಅಗತ್ಯ
ಮುಂದಿನ 10 ವರ್ಷಗಳಲ್ಲಿ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧನೆಗೆ ಕರ್ನಾಟಕದಲ್ಲಿ 152.87 ಲಕ್ಷ ಕೋಟಿ ರೂಪಾಯಿಗಳ ಸಂಚಿತ ಹೂಡಿಕೆಯ ಅಗತ್ಯವಿದೆ. ಬೆಂಗಳೂರಿನಿಂದ ಹೂಡಿಕೆಗಳನ್ನು ಓಡಿಸುವ ಪ್ರಯತ್ನಗಳನ್ನು ದ್ವಿಗುಣಗೊಳಿಸಿ, ಕ್ರಿಯಾ ಯೋಜನೆಯು ವಿಜಯಪುರ, ಬಳ್ಳಾರಿ, ಧಾರವಾಡ, ಶಿವಮೊಗ್ಗ, ಹಾಸನ, ರಾಮನಗರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಲಭ್ಯವಿರುವ 15,000 ಎಕರೆ ಕೈಗಾರಿಕಾ ಭೂಮಿಯನ್ನು 'ಸೂಕ್ತವಾಗಿ ಬಳಸಿಕೊಳ್ಳುವು ಬಗ್ಗೆ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಸ್ಟಾರ್ಟ್‌ಅಪ್ ಗಳಿಗಾಗಿ ಕೋಟ್ಯಂತರ ರೂಪಾಯಿ ಹೂಡಿಕೆ ಸೇರಿದಂತೆ ಹತ್ತಾರು ಅಂಶಗಳನ್ನು ಈ ಕ್ರಿಯಾ ಯೋಜನೆಯಲ್ಲಿ ಪ್ರಸ್ತಾಪವಾಗಿದೆ.












Click it and Unblock the Notifications