ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಡರಾತ್ರಿ ನಮ್ಮ ಮೆಟ್ರೋ ನೌಕರರಿಂದ ದಿಢೀರ್ ಪ್ರತಿಭಟನೆ

|
Google Oneindia Kannada News

Recommended Video

Namma Metro : ನಮ್ಮ ಮೆಟ್ರೋ ಸಿಬ್ಬಂದಿಯಿಂದ ತಡರಾತ್ರಿ ಪ್ರತಿಭಟನೆ | ಭಾನುವಾರದ ವೇಳಾಪಟ್ಟಿ ಬದಲು|Oneindia Kannada

ಬೆಂಗಳೂರು, ಜನವರಿ 12: ಮಧ್ಯರಾತ್ರಿ 2 ಗಂಟೆ ಸುಮಾರಿ ನಮ್ಮ ಮೆಟ್ರೋ ನೌಕರರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ವೇತನ ಪರಿಷ್ಕರಣೆ ಮತ್ತು ನೌಕರರ ಸಂಘಟನೆಗೆ ಮಾನ್ಯತೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರುವ ಮುನ್ನವೇ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ನಡೆಸಿದ ಸಂಧಾನ ಯಶಸ್ವಿಯಾಗಿದೆ.

ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

ತಡರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸುಮಾರು 500 ನೌಕರರು ವೇತನ ತಾರತಮ್ಯ ನಿವಾರಿಸಬೇಕು, ಕಾರ್ಮಿಕ ಸಂಘಟನೆಗೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಏಕಾಏಕಿ ಪ್ರತಿಭಟನೆ ನಡೆಸಿದರು.

 Metro employees go on a night protest

ಇದರಿಂದ ಇಡೀ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಗೊಂದಲಸ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅಷ್ಟರಲ್ಲಾಗಲೇ ಮೆಟ್ರೋ ರೈಲು ಸಂಚಾರ ಪೂರ್ಣಗೊಳಿಸಿದ್ದರಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ.

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲೇ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಭಾನುವಾರ 1 ಗಂಟೆ ಮುಂಚಿತವಾಗಿ ಮೆಟ್ರೋ ರೈಲು ಸಂಚಾರ ಆರಂಭ ಭಾನುವಾರ 1 ಗಂಟೆ ಮುಂಚಿತವಾಗಿ ಮೆಟ್ರೋ ರೈಲು ಸಂಚಾರ ಆರಂಭ

ನಾಳೆ ಸಭೆ: ತೀರ್ಮಾನ: ದೇಶದ ಎಲ್ಲಾ ಮೆಟ್ರೋಗಳಲ್ಲಿ ಈಗಾಗಲೇ ಮೂರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಮಾಡಲಾಗಿದೆ.

ಆದರೆ ನಮ್ಮ ಮೆಟ್ರೋ ಸಿಬ್ಬಂದಿಗೆ ಇದುವರೆಗೂ ವೇತನ ಪರಿಷ್ಕರಣೆ ಆಗಿಲ್ಲ, ಗುತ್ತಿಗೆ ನೌಕರರಿಗೆ ಬೇಕೆಂದಾಗ ವೇತನ ಪರಿಷ್ಕರಣೆ ಆಗುತ್ತಿದೆ.ಸುಮಾರು 1172 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕಡೆಗಣಿಸಲಾಗಿದೆ. ಈ ಕುರಿತು ಭಾನುವಾರ ನಡೆಯುವ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ.

English summary
At 1.30 am on January 11, 500 metro employees gathered in the premises of the Baiyappanahalli metro station protesting for their charter of demands to be accepted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X