• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಮುಟ್ಟಿ ಟಾರ್ಚರ್ ಕೊಡುತ್ತಿದ್ದ ಯೋಗ ಟೀಚರ್ಗೆ ಮಹಿಳೆಯರಿಂದ ಮಿಟೂ ಪಾಠ!

|

ಬೆಂಗಳೂರು, ನವೆಂಬರ್ 5: ಬಾಲಿವುಡ್‌ನಲ್ಲಿ ಕಾಣಿಸಿಕೊಂಡ ಮಿಟೂ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟು ಬಹಳ ದಿನವಾಗಿದೆ. ವೈದ್ಯಕೀಯ ವಲಯ, ಪತ್ರಿಕೋದ್ಯಮದಲ್ಲಿ ಸದ್ದು ಮಾಡಿ ಇದೀಗ ಯೋಗ ತರಗತಿಗೂ ಬಂದು ತಲುಪಿದೆ.

ದೀಪಾವಳಿ ವಿಶೇಷ ಪುರವಣಿ

ಬೆಂಗಳೂರಿನ ವ್ಹೀಲರ್ ರಸ್ತೆಯಲ್ಲಿರುವ ಯೋಗಾಭ್ಯಾಸ ಕೇಂದ್ರದಲ್ಲಿ ಯೋಗ ಟೀಚರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯರು ದೂರಿದ್ದಾರೆ. ಇಷ್ಟು ದಿನ ಯೋಗವೆಂದರೆ ಎಲ್ಲರಲ್ಲೂ ಉತ್ತಮ ನಂಬಿಕೆ ಇತ್ತು, ಯೋಗ ಶಿಕ್ಷಕರು ಅನಿವಾರ್ಯವಾಗಿ ಯೋಗ ಹೇಳಿಕೊಡುವ ಸಂದರ್ಭದಲ್ಲಿ ಮಹಿಳೆಯರಾಗಲಿ, ಮಕ್ಕಳಾಗಲಿ ಯಾರೇ ಆದರೂ ಅವರನ್ನು ಮುಟ್ಟುವುದು ಸಾಮಾನ್ಯ ಆದರೆ ಇಂತಹ ಸಂದರ್ಭವನ್ನು ಶಿಕ್ಷಕರು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವುದು ನಾಚಿಕೆಗೇಡಿನ ಸಂಗತಿ.

#ಮೀಟೂ: ಮಹಿಳೆಯರ ಮೇಲೂ ಲೈಂಗಿಕ ಕಿರುಕುಳದ ಆರೋಪ

ಅಗತ್ಯವಿಲ್ಲದಿದ್ದರೂ ಮೈಮುಟ್ಟುವುದು, ಬೇರೆ ಬೇರೆ ಭಂಗಿಗಳ ಆಸನಗಳನ್ನು ಕೇವಲ ಒಬ್ಬರಿಗೆ ಮಾತ್ರ ಹೇಳಿಕೊಡುವುದು ಇದೆಲ್ಲವೂ ಅಗತ್ಯವಿರುವುದಿಲ್ಲ. ಮೊದಮೊದಲು ಶಿಕ್ಷಕನ ಮೇಲೆ ಅನುಮಾನ ಬಂದಿಲ್ಲ ಕ್ರಮೇಣವಾಗಿ ಅವರ ವರ್ತನೆ ಬದಲಾದಾಗ ಅನುಮಾನ ಬರಲು ಶುರುವಾಯಿತು. ನಂತರ 'ಕಮ್ ಆನ್ ಇದು ತಪ್ಪು ಅಂತ ನನಗೆ ಅನ್ನಿಸ್ತಿಲ್ಲ, ಬೇರೆ ಬೇರೆ ದೇಹವನ್ನು ಮುಟ್ಟಿದರೆ ಬೇರೆ ಬೇರೆ ರೀತಿಯ ಅನುಭವನ ಸಿಗುತ್ತೆ' ಎಂದು ಕಟ್ಟದಾಗಿ ವರ್ತನೆ ಮಾಡಿದ್ದರು ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ.

ಕಚೇರಿ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ಅಪರಾಧಕ್ಕೆ ಯಾವ ಕಾನೂನು, ಶಿಕ್ಷೆಗಳಿವೆ ಗೊತ್ತೇ?

ಈ ರೀತಿ ಕೇವಲ ನನ್ನ ಮೇಲೆ ಆಗಿದೆ ಎಂದು ನಾನು ಹೇಳುವುದಿಲ್ಲ ಒಂದಲ್ಲಾ ಒಂದು ರೀತಿಯಲ್ಲಿ ಬೇರೆ ಯೋಗ ತರಗತಿಯಲ್ಲೂ ಕೂಡ ಅನುಭವ ಆಗಿರಬಹುದು ಮಹಿಳೆಯರು ಈ ಕುರಿತು ಧ್ವನಿ ಎತ್ತಿಲ್ಲ ಎಂದು ಪತ್ರಕರ್ತೆಯೊಬ್ಬರು ಮಹಿಳೆಗಾದ ನೋವಿನ ಕುರಿತು ಸಾಲು ಸಾಲು ಟ್ವೀಟ್ ಮಾಡಿದ್ದಾರೆ.

ಆ ಮಹಿಳೆಗೆ ಇದು ಇಷ್ಟ ಅನ್ಸುತ್ತೆ, ಮೊದಲ ಅನುಮಾನ

ಆ ಮಹಿಳೆಗೆ ಇದು ಇಷ್ಟ ಅನ್ಸುತ್ತೆ, ಮೊದಲ ಅನುಮಾನ

ಯೋಗ ತರಗತಿಯಲ್ಲಿ ಶಿಕ್ಷಕ ಮೋಹನ್ ಅವರು ಮಹಿಳೆಯೊಬ್ಬರಿಗೆ ಲೈಂಗಿಕವಾಗಿ ಕಿರುಕುಳಕೊಟ್ಟಿದ್ದಾರೆ. ಆದರೆ ಮಹಿಳೆ ಮೊದ ಮೊದಲು ಯೋಗ ಎಂದರೆ ಹೀಗೆ ಇರಬೇಕು, ನಾನು ಧ್ವನಿ ಎತ್ತಿದರೆ ಇದು ಕಾಮನ್ ಎಂದುಬಿಟ್ಟರೆ ಎಂದು ಹಿಂಜರಿದಿದ್ದಾಳೆ. ಆಕೆ ಮತ್ತು ಶಿಕ್ಷಕನನ್ನು ನೋಡಿದ ಮಹಿಳೆಯರು ಮೊದಲು ಅವನು ಈ ರೀತಿ ನಡೆದುಕೊಳ್ಳುವುದು ಆ ಮಹಿಳೆಗೂ ಇಷ್ಟವಿರಬಹುದು ಹಾಗಾಗಿಯೇ ಆತನ ವಿರುದ್ಧ ಆಕೆ ಏನು ಮಾತನಾಡುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಬಳಿಕ ಆಕೆ ಎಲ್ಲರ ಬಳಿ ತನ್ನ ನೋವು ಹಂಚಿಕೊಂಡಿದ್ದಾಳೆ.

ನನ್ನೆದುರೇ ಬೆತ್ತಲಾದ ಅಲೋಕ್ ನಾಥ್ : ಅಸಹ್ಯಕರ ಘಟನೆ ಬಿಚ್ಚಿಟ್ಟ ಕಲಾವಿದೆ

ಶಿಕ್ಷಕನ ಅಸಹ್ಯವಾದ ಮಾತು

ಶಿಕ್ಷಕನ ಅಸಹ್ಯವಾದ ಮಾತು

ಬೇರೆ ಬೇರೆ ದೇಹವನ್ನು ಮುಟ್ಟಿದಾಗ ಬೇರೆ ಅನುಭವ ಸಿಗುತ್ತದೆ ಎಂದು ಆ ಮಹಿಳೆಯ ಬಳಿ ಶಿಕ್ಷಕ ಹೇಳಿದಾಗ ಆಕೆಗೆ ತುಂಬಾ ನೋವಾಗಿದೆ, ಕೋಪವೂ ಬಂದಿದೆ ಆಗ ಆತಮ ವಿರುದ್ಧ ಪ್ರತಿಭಟಿಸಲು ಮುಂದಾಗಿದ್ದಾಳೆ. ಅದಕ್ಕೆ ಯೋಗ ತರಗತಿಯಲ್ಲಿರುವ ಎಲ್ಲಾ ಮಹಿಳೆಯರು ಸಾಥ್ ನೀಡಿದ್ದಾರೆ.

ಸಮ್ಮತದ ಸಂಬಂಧವಲ್ಲ, ನಡೆದದ್ದು ಅತ್ಯಾಚಾರ : ಅಕ್ಬರ್ಗೆ ಪಲ್ಲವಿ ತಿರುಗೇಟು

ಮಹಿಳಾ ಸಮಿತಿಯಲ್ಲಿ, ಶಿಕ್ಷಕನ ಪತ್ನಿಯೂ ಭಾಗಿ

ಮಹಿಳಾ ಸಮಿತಿಯಲ್ಲಿ, ಶಿಕ್ಷಕನ ಪತ್ನಿಯೂ ಭಾಗಿ

ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದರ ಕುರಿತು ಮಹಿಳೆ ಧ್ವನಿ ಎತ್ತಿದ ನಂತರ ಎಲ್ಲಾ ಮಹಿಳೆಯರು ಸೇತಿ ಸಮಿತಿಯೊಂದನ್ನು ರಚಿಸಿದರು. ಆ ಸಮಿತಿಯಲ್ಲಿ ಆ ಶಿಕ್ಷಕನ ಪತ್ನಿಯೂ ಕೂಡ ಒಬ್ಬ ಸದಸ್ಯರಾಗಿದ್ದರು.

#MeToo ಆರೋಪ: ಬೆಂಗಳೂರಿನ ಐಐಎಸ್‌ಸಿ ಪ್ರೊಫೆಸರ್‌ಗೆ ಕಡ್ಡಾಯ ನಿವೃತ್ತಿ ಶಿಕ್ಷೆ

ಹಾಸ್ಯ ಕಾರ್ಟೂನ್ ರಚಿಸಿದ ಮಹಿಳೆಯರು

ಹಾಸ್ಯ ಕಾರ್ಟೂನ್ ರಚಿಸಿದ ಮಹಿಳೆಯರು

ಶಿಕ್ಷಕನಿಂದ ಬಜಾವ್ ಆಗಲು ಯೋಗ ತರಗತಿಗೆ ನಾಯಿಯನ್ನು ಕರೆದುಕೊಂಡು ಹೋಗುವುದು, ಯೋಗದ ನಿಜವಾದ ಅರ್ಥ, ಮಹಿಳೆಯರು ಯೋಗಕ್ಕಾಗಿ ಏಕೆ ಬರುತ್ತಾರೆ ಎನ್ನುವ ಕಾರಣಗಳು ಸೇರಿದಂತೆ ವಿವಿಧ ಹಾಸ್ಯ ಕಾರ್ಟೂನ್ ಗಳನ್ನು ಮಹಿಳೆಯರು ರಚಿಸಿದ್ದಾರೆ.

ಲೈಂಗಿಕ ಕಿರುಕುಳ: 48 ಸಿಬ್ಬಂದಿಯನ್ನು ಕಿತ್ತೆಸೆದ ಗೂಗಲ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sexually harassed allegedly by their yoga teacher, Mohan Polamar of The Practice Room on Wheeler Road, east Bengaluru, a group of women has created a comic, “The Illustrated Women’s Guide to Yogabuse”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more