ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಮೂಲದಲ್ಲಿ ಲೋಹದ ಅಂಶ ಪತ್ತೆ: ಪೀಣ್ಯದಲ್ಲಿ 70 ಬೋರ್‌ವೆಲ್ ಬಂದ್

|
Google Oneindia Kannada News

Recommended Video

ಬೆಂಗಳೂರಿನ ಪೀಣ್ಯದಲ್ಲಿ 70 ಬೋರ್ ವೆಲ್ ಬಂದ್ | Oneindia Kannada

ಬೆಂಗಳೂರು, ಅಕ್ಟೋಬರ್ 25: ಜಲಮೂಲದಲ್ಲಿ ಲೋಹದ ಅಂಶ ಪತ್ತೆಯಾಗಿರುವ ಕಾರಣ ಬೆಂಗಳೂರಿನ ಪೀಣ್ಯ ಬಳಿ ಇರುವ 70 ಬೋರ್‌ವೆಲ್ ಗಳನ್ನು ಬಂದ್ ಮಾಡಲಾಗಿದೆ.

ಗಂಗಾಕಲ್ಯಾಣ ಯೋಜನೆಯಲ್ಲಿ ಅಕ್ರಮ ತಡೆಗಟ್ಟಿ: ಡಿಸಿಎಂ ಸೂಚನೆ ಗಂಗಾಕಲ್ಯಾಣ ಯೋಜನೆಯಲ್ಲಿ ಅಕ್ರಮ ತಡೆಗಟ್ಟಿ: ಡಿಸಿಎಂ ಸೂಚನೆ

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದಾಗಿ ಅಂತರ್ಜಲ ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ ಕೊಳವೆಬಾವಿಗಳ ನೀರಿನ ಗುಣಮಟ್ಟದಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಹೈದರಾಬಾದ್‌ನ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಈ ಹಿಂದೆ ಸೂಚಿಸಿತ್ತು.

ಕರ್ನಾಟಕಾದ್ಯಂತ ಬೋರ್‌ವೆಲ್ ಕೊರೆಯುವ ದರ ದುಪ್ಪಟ್ಟು ಕರ್ನಾಟಕಾದ್ಯಂತ ಬೋರ್‌ವೆಲ್ ಕೊರೆಯುವ ದರ ದುಪ್ಪಟ್ಟು

bore wells

ಹೀಗಾಗಿ ಸಂಸ್ಥೆಯು ಪೀಣ್ಯ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಕೊಳವೆ ಬಾವಿಗಳ ನೀರು ಸಂಗ್ರಹಿಸಿ ಅಧ್ಯಯನ ಡೆಸಿತ್ತು. ಅಧದ್ಯಯನದ ಬಳಿಕ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ 70 ಬೋರ್‌ವೆಲ್‌ಗಳ ನೀರಿನಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಲೋದ ಅಂಶಗಳು ಇರುವುದರಿಂದ ಇರುವಗಳನ್ನು ಮುಚ್ಚಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತೀರ್ಮಾನ ಮಾಡಿದೆ.

ಬಿಹಾರ:110 ಅಡಿ ಆಳದ ಕೊಳವೆ ಬಾವಿಯಲ್ಲಿ ಪುಟ್ಟ ಕಂದನ ಆರ್ತನಾದ ಬಿಹಾರ:110 ಅಡಿ ಆಳದ ಕೊಳವೆ ಬಾವಿಯಲ್ಲಿ ಪುಟ್ಟ ಕಂದನ ಆರ್ತನಾದ

ತಕ್ಷಣಕ್ಕೆ 30 ಕೊಳವೆಬಾವಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ. ಪೀಣ್ಯದಲ್ಲಿ ಅಂದಾಜು 1521 ಕಾರ್ಖಾನೆಗಳಿವೆ ಅದರಲ್ಲಿ 221 ಕಾರ್ಖಾನೆಗಳು ಅತ್ಯಂತ ಅಪಾಯಕಾರಿಯಾದ ಕೊಳಚೆ ನೀರನ್ನು ಉತ್ಪತ್ತಿ ಮಾಡಿತ್ತಿವೆ, ಈ ಎಲ್ಲಾ ಕಾರ್ಖಾನೆಗಳು ವಿಷಕಾರಿ ನೀರನ್ನು ಬಿಡುತ್ತವೆ ಹಾಗೆಯೇ ಯಾವುದೇ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಕೂಡ ಅಳವಡಿಸಿಕೊಂಡಿಲ್ಲ.

English summary
As metal content was found in under ground water in Peenya industrial area, around 70 bore wells will be closed soon, KSPCB said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X