ಕ್ಷಣಾರ್ಧದಲ್ಲಿ ಬಿಜೆಪಿ ಸದಸ್ಯರಾಗಬೇಕೇ? ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರು, ಫೆ.2: ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮದೇ ಆದ ರೀತಿಯಲ್ಲಿ ಸದಸ್ಯತ್ವ ಅಭಿಯಾನ ಆರಂಭಿಸಿವೆ. ಮೊಬೆಲ್ ಮಿಸ್ಡ್ ಕಾಲ್ ಕೊಟ್ಟು ಬಿಜೆಪಿ ಸೇರುವ ಅವಕಾಶ ನೀಡಲಾಗಿತ್ತು. ಈಗ ಸದಸ್ಯತ್ವ ಸಂಖ್ಯೆ ಹೆಚ್ಚಿಸಲು ಕ್ವಿಕ್ ನೋಂದಣಿ ಮಾಡಿಕೊಳ್ಳಲು ಪ್ರತ್ಯೇಕ ವೆಬ್ ಸೈಟ್ ಆರಂಭಿಸಲಾಗಿದೆ.
ಭಾನುವಾರದಿಂದ ಅಧಿಕೃತವಾಗಿ ವೆಬ್ ಸೈಟ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಕರ್ನಾಟಕ ಬಿಜೆಪಿ ಅಧಿಕೃತ ವೆಬ್ ಸೈಟ್ ನಲ್ಲಿ ಈಗಾಗಲೇ ಸದಸ್ಯರಾಗಿ ಎಂಬ ಪುಟವಿದೆ. ಅದರೆ, ಆ ಪುಟದಲ್ಲಿರುವ ಅರ್ಜಿ ತುಂಬಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಪ್ರತ್ಯೇಕ ವೆಬ್ ತಾಣ ಆರಂಭಿಸಿದೆ.
ಮೊಬೈಲ್ ಅಭಿಯಾನವೂ ಕ್ಲಿಕ್ ಆಗಿದ್ದು, ಮಿಸ್ಡ್ ಕಾಲ್ ಮೂಲಕ 3-5 ನಿಮಿಷಗಳಲ್ಲಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಮುಗಿಸಬಹುದಾಗಿದೆ. ಈಗ ಕೇವಲ 30 ಸೆಕೆಂಡುಗಳಲ್ಲಿ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.

ಬೆಂಗಳೂರು ನಗರ ಯುವ ಮೋರ್ಚಾ ಸಿದ್ಧಪಡಿಸಿರುವ ವೆಬ್ ಸೈಟ್ ಸದಸ್ಯತ್ವ ಅಭಿಯಾನಕ್ಕೆ ಭಾನುವಾರ ಪಕ್ಷದ ಕಚೇರಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಚಾಲನೆ ನೀಡಿದರು. ಬೆಂಗಳೂರು ನಗರದಲ್ಲಿ ಸುಮಾರು ಶೇ.17ರಷ್ಟು ಜನ ಮೊಬೈಲ್ ಇಂಟರ್ನೆಟ್ ಬಳಸುತ್ತಿದ್ದಾರೆ. ಮೊಬೈಲ್ ಇಂಟರ್ನೆಟ್, ವೆಬ್ ಸೈಟ್ ಮೂಲಕ ಜನರನ್ನು ಸುಲಭವಾಗಿ ತಲುಪಬಹುದಾಗಿದೆ.
ಇದುವರೆಗೂ 36.20 ಲಕ್ಷ ಜನರು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ಮೊದಲ ಬಾರಿಗೆ ಡಿಜಿಟಲ್ ಅಭಿಯಾನ ಶುರು ವಾಗುತ್ತಿದೆ. ಕಡಿಮೆ ಅವಧಿಯಲ್ಲಿ ಸದಸ್ಯತ್ವ ಪಡೆದುಕೊಳ್ಳಬಹುದಾದ ಈ ವೆಬ್ ಸೈಟ್ ಬಳಸಿಕೊಳ್ಳಿ ಎಂದು ಆರ್ ಅಶೋಕ್ ಹೇಳಿದರು.
ನಗರ ಯುವ ಮೋರ್ಚಾ ಅಧ್ಯಕ್ಷ ಸಪ್ತಗಿರಿಗೌಡಮಾತನಾಡಿ, ಇದು ಸುಮಾರು ಒಂದೂವರೆ ತಿಂಗಳ ಪರಿಶ್ರಮ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರ ಅನುಮತಿ ಪಡೆದು ಇದನ್ನು ಅಭಿವೃದ್ಧಿ ಗೊಳಿಸಲಾಗಿದೆ ಎಂದರು. ಶಾಸಕ ಅಶ್ವಥ ನಾರಾಯಣ, ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಳವಿಕಾ, ನಗರ ಘಟಕದ ಅಧ್ಯಕ್ಷ ಸುಬ್ಬಣ್ಣ, ನಗರ ಸದಸ್ಯತ್ವ ಅಭಿಯಾನದ ಪ್ರಮುಖ ಸದಾಶಿವ ಹಾಜರಿದ್ದರು.
ಬಿಜೆಪಿ ಸೇರಲು ಬಯಸುವವರರು : ಬಿಜೆಪಿ ಮೆಂಬರ್ ವೆಬ್ ಸೈಟ್ ಅಥವಾ ಬಿಜೆಪಿ. ಆರ್ಗ್ ತಾಣವನ್ನು ನೋಡಬಹುದು.












Click it and Unblock the Notifications