ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸಾಯುವ ಖಾಯಿಲೆ ಅಲ್ಲ: ವೈದ್ಯಕೀಯ ವಿದ್ಯಾರ್ಥಿಯ ಮಾತು ಕೇಳಿ

|
Google Oneindia Kannada News

ಬೆಂಗಳೂರು, ಮಾರ್ಚ್ 18: ''ಕೊರೊನಾ ವೈರಸ್ ಹೆಸರಿನಲ್ಲಿ ಸುದ್ದಿ ಮಾಧ್ಯಮಗಳು ಭಯ ಹುಟ್ಟಿಸುತ್ತಿದೆ. ಅದರಿಂದ ನೀವು ಹೆದರುವ ಅಗತ್ಯ ಇಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿ ಶಿವ ಪ್ರಸಾದ್ ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಿವ ಪ್ರಸಾದ್ ಕೊನೆಯ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ. ಕೊರೊನಾ ಬಗ್ಗೆ ವಾಹಿನಿಗಳಲ್ಲಿ ಬರುವ ಸುದ್ದಿಯನ್ನು ಗಮನಿಸುತ್ತಿದ್ದ ಅವರು, ಅದರಿಂದ ಬೆಸತ್ತಿದ್ದಾರೆ. ವಾಹಿನಿಗಳಲ್ಲಿ ಕೊರೊನಾ ಬಗ್ಗೆ ಭಯ ಹುಟ್ಟಿಸುತ್ತಿದ್ದಾರೆ. ಕೊರೊನಾ ಅಷ್ಟೊಂದು ಭೀಕರ ಖಾಯಿಲೆ ಅಲ್ಲ ಎಂದು ಅದರ ಬಗ್ಗೆ ವಿವರ ಹಂಚಿಕೊಂಡಿದ್ದಾರೆ.

ಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳ

ಕೊರೊನಾ ಬಗ್ಗೆ ಮಾತನಾಡಲು ತಮ್ಮ ಹೊಸ ಯೂ ಟ್ಯೂಬ್ ಖಾತೆ ತೆರದಿದ್ದು, ಅಲ್ಲಿ ವಿಡಿಯೋಗಳ ಮೂಲಕ ಕೊರೊನಾ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಶಿವ ಪ್ರಸಾದ್ ಹಂಚಿಕೊಂಡ ಕೆಲವು ಅಂಶಗಳು ಹೀಗಿವೆ.

2002 ರಲ್ಲಿ ಸಾರ್ಸ್ ಕಾಯಿಲೆ ಬಂದಿತ್ತು

2002 ರಲ್ಲಿ ಸಾರ್ಸ್ ಕಾಯಿಲೆ ಬಂದಿತ್ತು

''2002 ರಲ್ಲಿ ಇದೇ ರೀತಿ ಸಾರ್ಸ್ ಕಾಯಿಲೆ ಬಂದಿತ್ತು. ಅದು ಕೂಡ ಕೆಮ್ಮು ಶೀತ, ಉಸಿರಾಟ ತೊಂದರೆ ಈ ರೀತಿಯ ಲಕ್ಷಣಗಳನ್ನು ಹೊಂದಿತ್ತು. ಆದರೆ, ಆಗ ಇಷ್ಟೊಂದು ಭಯ ಇರಲಿಲ್ಲ. ಕಾರಣ ಸೋಷಿಯಲ್ ಮೀಡಿಯಾ ಇರಲಿಲ್ಲ ಹಾಗೂ ಸುದ್ದಿ ಮಾಧ್ಯಮಗಳು ಈ ಮಟ್ಟಿಗೆ ಇರಲಿಲ್ಲ. ಈಗ ಕೊರೊನಾದಿಂದ ಏಕೆ ಭಯಪಡುವ ಅಗತ್ಯ ಇಲ್ಲ ಎಂಬುದನ್ನು ನಾನು ತಿಳಿಸುತ್ತೇನೆ.''- ಶಿವ ಪ್ರಸಾದ್, ವೈದ್ಯಕೀಯ ವಿದ್ಯಾರ್ಥಿ

ಮರಣ ಪ್ರಮಾಣ ಕಡಿಮೆ ಇದೆ

ಮರಣ ಪ್ರಮಾಣ ಕಡಿಮೆ ಇದೆ

''ಕೊರೊನಾ ವೈರಸ್ ಮರಣ ಪ್ರಮಾಣ ಕಡಿಮೆ ಇದೆ. ಸಾರ್ಸ್ ಕಾಯಿಲೆ ಮರಣ ಪ್ರಮಾಣ 9.6% ಇತ್ತು. ಮಾರ್ಸ್ ಕಾಯಿಲೆ 34.3% ಇತ್ತು. ಆಫ್ರಿಕಾದಲ್ಲಿ ಎಬೋಲ ಕಾಯಿಲೆಯ ಮರಣ ಪ್ರಮಾಣ 40% ಇತ್ತು. ಈಗ ಬಂದಿರುವ ಕೊರೊನಾದ ಮರಣ ಪ್ರಮಾಣ 3.6% ಇದೆ. ಅಂದರೆ, ನೂರು ಜನರಿಗೆ ಕಾಯಿಲೆ ಬಂದರೆ ಅದರಲ್ಲಿ ನಾಲ್ಕು ಜನರು ಮರಣ ಹೊಂದುವ ಸಾಧ್ಯತೆ ಮಾತ್ರ ಇರುತ್ತದೆ.''- ಶಿವ ಪ್ರಸಾದ್, ವೈದ್ಯಕೀಯ ವಿದ್ಯಾರ್ಥಿ

ಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳಎಚ್ಚರಿಕೆ! ಈ ರಕ್ತ ಗುಂಪಿನವರಿಗೆ ಕೊರೊನಾವೈರಸ್ ಸೋಂಕು ಹೆಚ್ಚಳ

ಜನರಿಗೆ ಭಯ ಹುಟ್ಟಿಸುವುದನ್ನು ಬಿಡಿ

ಜನರಿಗೆ ಭಯ ಹುಟ್ಟಿಸುವುದನ್ನು ಬಿಡಿ

'ಮಾರ್ಸ್, ಎಬೋಲ ಬಂದಾಗಲೂ ಜನ ಇಷ್ಟೊಂದು ಭಯಪಡಲಿಲ್ಲ. ಆರ್ಥಿಕ ಸ್ಥಿತಿ ದೊಡ್ಡ ಮಟ್ಟದಲ್ಲಿ ಬದಲಾಗಲಿಲ್ಲ. ಆದರೆ, ಕೊರೊನಾದಿಂದ ಇಷ್ಟೊಂದು ಭಯ ಬಂದಿದೆ. ಬೇರೆ ಕಾಯಿಲೆಗೆ ಹೋಲಿಕೆ ಮಾಡಿದರೆ, ಕೊರೊನಾದಿಂದ ಸಾಯುವವರ ಸಂಖ್ಯೆ ಬಹಳ ಕಡಿಮೆ. ಹಾಗಾಗಿ, ಸುದ್ದಿವಾಹಿನಿಗಳು ಜನರಿಗೆ ಭಯ ಹುಟ್ಟಿಸುವುದನ್ನು ಬಿಡಬೇಕು.''- ಶಿವ ಪ್ರಸಾದ್, ವೈದ್ಯಕೀಯ ವಿದ್ಯಾರ್ಥಿ

ಚೀನಾದಿಂದ ಆಚೆಗೆ ಮರಣ ಪ್ರಮಾಣ ಇನ್ನೂ ಕಡಿಮೆ

ಚೀನಾದಿಂದ ಆಚೆಗೆ ಮರಣ ಪ್ರಮಾಣ ಇನ್ನೂ ಕಡಿಮೆ

''ಸಿಗರೇಟ್ ಸೇದುವುದು, ಹೆಲ್ಮೆಟ್ ಇಲ್ಲದೆ ಸಂಚಾರ ಮಾಡುವುದರಿಂದ ಸಂಬವಿಸುವ ಸಾವಿನ ಪ್ರಮಾಣ 24 ರಿಂದ 28% ಇದೆ. ಆದರೂ ಅದರ ಬಗ್ಗೆ ಮುಂಜಾಗ್ರತೆ ವಹಿಸುತ್ತಿಲ್ಲ. ಕೊರೊನಾ ಬಗ್ಗೆ ಮಾತ್ರ ಭಯ ಪಡುತ್ತಿದ್ದೇವೆ. ಚೀನಾದಿಂದ ಆಚೆ ಕೊರೊನಾ ವೈರಸ್ ಮರಣ ಪ್ರಮಾಣ ಇರುವುದು ಕೇವಲ 1.8% ಅಷ್ಟೇ. ಹೀಗಾಗಿ ಯಾರಿಗೆ ಖಾಯಿಲೆ ಬಂದರೆ, ಭಯ ಪಡುವ ಅಗತ್ಯ ಇಲ್ಲ.''- ಶಿವ ಪ್ರಸಾದ್, ವೈದ್ಯಕೀಯ ವಿದ್ಯಾರ್ಥಿ

ಮಾಸ್ಕ್ ಎಲ್ಲರೂ ಹಾಕಿಕೊಳ್ಳಬೇಕಿಲ್ಲ

''ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಹಾಗೆ ಕೆಮ್ಮು, ಶೀತ, ಜ್ವರ ಇರುವ ವ್ಯಕ್ತಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೊರೊನಾ ಸಾಯುವ ಕಾಯಿಲೆ ಅಲ್ಲ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು 80 ವರ್ಷಕ್ಕಿಂತ ದೊಡ್ಡವರು, 60 ವರ್ಷದ ಮೇಲೆ ವಯಸ್ಸಾದವರಿಗೆ ಬಿಪಿ ಇದ್ದರೆ ರಿಸ್ಕ್ ಎಂದು ಹೇಳುತ್ತಾರೆ. ಉಳಿದವರಿಗೆ ತೊಂದರೆ ಕಡಿಮೆ. ಆಗಾಗ ಕೈ ತೊಳೆಯಿರಿ. ಮುಖ ಮುಟ್ಟುವುದು ಕಡಿಮೆ ಮಾಡಿ.''- ಶಿವ ಪ್ರಸಾದ್, ವೈದ್ಯಕೀಯ ವಿದ್ಯಾರ್ಥಿ

English summary
Coronavirus in karnataka: Shiva Prasad, a medical student spoke about precautionary measures of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X